Allu Raghu Movie: ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews

ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ?


Last Updated:

ಅಲ್ಲು ಅರ್ಜುನ್ ಅಭಿಮಾನಿ ಅಲ್ಲು ರಘು ಡೈರೆಕ್ಟರ್ ಆಗುತ್ತಿದ್ದಾರೆ. ಮೊದಲ ಚಿತ್ರದ ಬಗ್ಗೆ ಭಾರೀ ನಂಬಿಕೆ ಇಟ್ಟುಕೊಂಡಿದ್ದಾರೆ. ಹೊಸ ರೀತಿಯ ಒಳ್ಳೆ ಕತೆ ಮಾಡಿಕೊಂಡಿರೋ ಉತ್ಸಾಹದಲ್ಲಿಯೇ ಇದ್ದಾರೆ. ಇವರ ಸಿನಿಮಾದ ಮತ್ತಷ್ಟು ವಿವರ ಇಲ್ಲಿದೆ ಓದಿ.

ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ?
ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ?

ಅಲ್ಲು ರಘು (Allu Raghu) ಡೈರೆಕ್ಟರ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ಅಪ್ಪಟ ಅಭಿಮಾನಿ ಅನ್ನೋದು ಗೊತ್ತೇ ಇದೆ. ಪುನೀತ್ ಅವರ ಫ್ಯಾನ್ ಅನ್ನೋದು ತಿಳಿದಿರೋ ವಿಚಾರವೇ ಬಿಡಿ. ಡಬ್‌ಸ್ಮಾಶ್ ಕಾಲದಲ್ಲಿಯೇ ಸಾಕಷ್ಟು ವೈರಲ್ ಆಗಿರೋ ಅಲ್ಲು ರಘು, (Allu Raghu) ಟಿಕ್ ಟಾಕ್ ಅಲ್ಲು ಕಮಾಲ್ ಮಾಡಿದ್ದಾರೆ. ಆದರೆ, ಕಳೆದ ಸುಮಾರು 10 ವರ್ಷದಿಂದ ಸಿನಿಮಾ ತಿಳಿದುಕೊಳ್ತಾನೇ ಇದ್ದಾರೆ. ಚಿತ್ರೀಕರಣವನ್ನು ನೋಡಿ ಅರ್ಥ ಮಾಡಿಕೊಂಡಿದ್ದಾರೆ. ಈ ಒಂದು ಜರ್ನಿಯಲ್ಲಿ 7 ಕತೆಯನ್ನ ಮಾಡಿಕೊಂಡಿದ್ದಾರೆ. ವಿವಿಧ ಜಾನ್ರಾ ಕತೆಯಲ್ಲಿ ಒಂದನ್ನ ಎತ್ತಿಕೊಂಡು ಇದೀಗ ಸಿನಿಮಾ ಮಾಡ್ತಿದ್ದಾರೆ. ಟೈಟಲ್ (Title) ಇನ್ನು ಇಟ್ಟಿಲ್ಲ, ಹೀರೋ ಯಾರೂ ಅಂತಲೂ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ವಿಚಾರವನ್ನ ಹೇಳಿಕೊಂಡಿದ್ದಾರೆ. ಇವರ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಲ್ಲು ಅರ್ಜುನ್ ಏನಂದ್ರು

ಅಲ್ಲು ಅರ್ಜುನ್ ತರವೇ ಅಲ್ಲು ರಘು ಇದ್ದಾರೆ. ಬಳ್ಳಾರಿ ಮೂಲದ ಅಲ್ಲು ರಘು ಅವರಿಗೆ ತೆಲುಗು ಟಚ್ ಇದೆ. ಅಲ್ಲು ಅರ್ಜುನ್ ಅವರ ಅಭಿಮಾನಿ ಆಗಿಯೇ ಒಳ್ಳೆ ಕೆಲಸ ಮಾಡ್ತಾನೇ ಬಂದಿದ್ದಾರೆ.
allu arjun fan allu raghu going to director Kannada movie soon

ಅಲ್ಲು ರಘು ಸಿನಿಮಾ ಕಲಿಕೆ

(ಚಿತ್ರ ಕೃಪೆ: ಅಲ್ಲು ರಘು ಇನ್‌ಸ್ಟಾಗ್ರಾಮ್)

ಅದರಿಂದಲೋ ಏನೊ? ಅಲ್ಲು ಅರ್ಜುನ್ ಅವರಿಗೆ ಅಲ್ಲು ರಘು ಅಂದರೆ ಇಷ್ಟ ಆಗ್ತಾರೆ. ಅಲ್ಲು ರಘು ಭೇಟಿ ಆದಾಗ ಅಲ್ಲು ಅರ್ಜುನ್ ಒಂದೇ ಮಾತು ಹೇಳ್ತಾರೆ. ಒಳ್ಳೆ ಕೆಲಸ ಮಾಡ್ತಾನೆ ಇರಿ ಅಂತಲೇ ಹೇಳ್ತಾರೆ. ಸಿನಿಮಾ ಮಾಡ್ತೀನಿ ಅಂತ ಹೇಳಿದಾಗಲೂ ಅಲ್ಲು ಅರ್ಜುನ್ ಸೇರಿ ಅನೇಕರು ವಿಶ್ ಮಾಡಿದ್ದಾರೆ.

ಅಲ್ಲು ರಘು ಡೈರೆಕ್ಷನ್

ಅಲ್ಲು ರಘು ಅತೀವ ಉತ್ಸಾಹದಲ್ಲಿಯೇ ಇದ್ದಾರೆ. ಹೊಸ ರೀತಿಯ ಕಥೆಯನ್ನ ಕೊಡ್ಬೇಕು ಅಂತ ಪ್ಲಾನ್ ಮಾಡಿದ್ದಾರೆ. ಕಳೆದ 10 ವರ್ಷದಲ್ಲಿ 7 ಕತೆಗಳನ್ನ ಮಾಡಿಕೊಂಡಿದ್ದಾರೆ.

ಈ 7 ಕತೆಗಳು ಬೇರೆ ರೀತಿಯ ಕತೆಗಳೇ ಆಗಿವೆ. ಈ ಕತೆಗಳಲ್ಲಿಯೇ ಒಂದು ಸ್ಟೋರಿ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ.

ಚಿತ್ರದ ನಾಯಕ ಯಾರು

ಅಲ್ಲು ರಘು ಡೈರೆಕ್ಷನ್ ಮಾಡ್ತಿರೋ ಮೊದಲ ಚಿತ್ರಕ್ಕೆ ಇನ್ನು ಶೀರ್ಷಿಕೆ ಇಟ್ಟಿಲ್ಲ. ಸಿನಿಮಾ ನಾಯಕ ಯಾರು ಅನ್ನೋದು ಫೈನಲ್ ಆಗಿದೆ. ಸದ್ಯ ಕನ್ನಡದಲ್ಲಿಯೇ ಸುಮಾರು 200 ಚಿತ್ರಗಳಲ್ಲಿ ಒಳ್ಳೆ ಕ್ಯಾರೆಕ್ಟರ್‌ಗನ್ನೆ ಇವರು ಮಾಡಿದ್ದಾರೆ.

ಆದರೆ, ಎಲ್ಲವೂ ಸೆಟ್ ಆದ್ಮೇಲೆ ಹೀರೋ ಯಾರು ಅನ್ನೋದನ್ನ ಹೇಳ್ತೀತಿ ಅಂತಲೇ ಅಲ್ಲು ರಘು ಹೇಳಿಕೊಂಡಿದ್ದಾರೆ.

allu arjun fan allu raghu going to director Kannada movie soon

ಹೊಸ ರೀತಿ ಚಿತ್ರ ಕೊಡ್ಬೇಕು

(ಚಿತ್ರ ಕೃಪೆ: ಅಲ್ಲು ರಘು ಇನ್‌ಸ್ಟಾಗ್ರಾಮ್)

ಹೊಸ ರೀತಿ ಚಿತ್ರ ಕೊಡ್ಬೇಕು

ಒಳ್ಳೆ ಚಿತ್ರಗಳನ್ನ ಕೊಟ್ಟರೆ ಜನ ಸ್ವೀಕರಿಸುತ್ತಾರೆ. ನಮ್ಮ ಚಿತ್ರದ ಕತೆ ಮೇಲೆ ನಂಬಿಕೆ ಇದೆ. ಕಲಾವಿರ ಮೇಲೂ ಅಪಾರ ನಂಬಿಕೆ ಇದೆ. ಇದಕ್ಕೂ ಹೆಚ್ಚಾಗಿ ಒಳ್ಳೆ ಟೀಮ್ ಇದೆ.

ಚೆನ್ನಾಗಿ ಸೆಟಲ್ ಆದವರೆಲ್ಲ ಈ ಚಿತ್ರದ ಹಿಂದೆ ಇದ್ದಾರೆ. ಈ ಸಿನಿಮಾ ಆದ್ಮೇಲೆ ಬ್ಯಾಕ್ ಟು ಬ್ಯಾಕ್ ಚಿತ್ರ ಮಾಡ್ತಾನೇ ಹೋಗ್ತೀವಿ. ಬರೆದಿರೋ 7 ಕತೆಗಳಲ್ಲಿ ಸದ್ಯ ಒಂದು ತೆಗೆದುಕೊಳ್ಳುತ್ತಿದ್ದೇವೆ. ಮುಂದೆ ಒಂದೊಂದಾಗಿಯೇ ಮಾಡ್ತಾನೇ ಹೋಗ್ತಾನೇ ಇರ್ತಿವಿ ಅಂತಲೂ ಅಲ್ಲು ರಘು ಹೇಳಿಕೊಂಡಿದ್ದಾರೆ.

ಅಲ್ಲು ರಘು ಸಿನಿಮಾ ಕಲಿಕೆ

ಅಲ್ಲು ರಘು ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ್ದಾರೆ. ಟಿಕ್ ಟಾಕ್, ಡಬ್‌ಸ್ಮಾಶ್ ಅಲ್ಲು ರಘು ಹೆಸರು ಮಾಡಿದ್ದಾರೆ. ಆದರೆ, ಸಿನಿಮಾ ಕಲಿಕೆ ಅಂತ ಬಂದ್ರೆ, ಅದನ್ನ ಕಳೆದ 10 ವರ್ಷದಿಂದಲೇ ಕಲೀತಾನೇ ಇದ್ದಾರೆ.

ಹಾಗೆ ಕಲಿತುಕೊಂಡ ಸಿನಿಮಾ ಕಲಿಕೆಯನ್ನ ಇದೀಗ ಸಿನಿಮಾ ನಿರ್ದೇಶನದ ಮೂಲಕವೇ ತೋರಿಸುತ್ತಿದ್ದಾರೆ. ಮಳೆಗಾಲ ಕಳೆದ್ಮೇಲೆ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.

ಒಂದು ಒಳ್ಳೆ ಚಿತ್ರ ಮಾಡೋಕೆ ಏನ್ಬೇಕೋ ಅದನ್ನೆಲ್ಲ ಮಾಡಿಕೊಂಡಿರೋದಾಗಿ ಸ್ವತಃ ಅಲ್ಲು ರಘು, ಫಸ್ಟ್ ನ್ಯೂಸ್‌ನ ಚಾನೆಲ್‌ನ ವಿಶೇಷ ಚಿಟ್‌ಚಾಟ್ ಅಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports