Allu Arjun: ಅಲ್ಲು ಅರ್ಜುನ್‌ಗೆ 14 ದಿನ ಜೈಲು! ‘ಪುಷ್ಪ 2’ ಗೆಲುವಿನ ಸಂಭ್ರಮದಲ್ಲಿದ್ದ ನಟನಿಗೆ ಕೋರ್ಟ್ ಶಾಕ್! | pushpa 2 star Allu Arjun Sent to 14 Day Judicial Custody After Fatal Stampede at Film Premiere | | ACTPnews

ಅಲ್ಲು ಅರ್ಜುನ್


Last Updated:

Allu Arjun: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್​ಗೆ ಕೋರ್ಟ್ ಶಾಕ್ ಕೊಟ್ಟಿದೆ. ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಲ್ಲು ಅರ್ಜುನ್
ಅಲ್ಲು ಅರ್ಜುನ್

ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಮಹಿಳೆ ಸಾವಿನ ಘಟನೆಗೆ ಸಂಬಂಧಿಸಿ ಅರೆಸ್ಟ್ ಆಗಿದ್ದ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟನನ್ನು ಹೈದರಾಬಾದ್​ನ ಅವರ ಮನೆಯಿಂದ ಅರೆಸ್ಟ್ ಮಾಡಲಾಗಿತ್ತು.

ಪುಷ್ಪ 2 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿದ್ದ ಅಲ್ಲು ಅರ್ಜುನ್ ಅವರಿಗೆ ಬಿಗ್ ಶಾಕ್ ಸಿಕ್ಕಿದೆ. ಸಂಧ್ಯಾ ಥಿಯೇಟರ್​ನಲ್ಲಿ ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದು ಇದೀಗ ನಟನಿಗೆ ನ್ಯಾಯಾಂಗ ಬಂಧವನ್ನೂ ವಿಧಿಸಲಾಗಿದೆ.

ನಟನನ್ನು ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ಯಲಾಗಿದೆ. 4ರಂದು ಪುಷ್ಪ 2 ರಿಲೀಸ್ ಆಗಿರುವ ಸಂದರ್ಭ ಸಂಧ್ಯ ಥಿಯೇಟರ್ ನಲ್ಲಿ ನೂಕುನುಗ್ಗಲು ಉಂಟಾಗಿದ್ದು ಮಹಿಳೆ ಮೃತಪಟ್ಟಿದ್ದರು. ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಹಾಕಿದ್ದ ಅಲ್ಲು

ಕಾಲ್ತುಳಿತ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಸೇರಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಈಗಾಗಲೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ಫ್ಯಾನ್ಸ್-ಚಿತ್ರರಂಗಕ್ಕೆ ಬಿಗ್ ಶಾಕ್

ಅಲ್ಲು ಅರ್ಜುನ್ ಅವರು ಏಕಾಏಕಿ ಅರೆಸ್ಟ್ ಆಗಿದ್ದರಿಂದ ಚಿತ್ರರಂಗದ ಜೊತೆ ಜೊತೆಗೇ ಅಭಿಮಾನಿಗಳು ಕೂಡಾ ಶಾಕ್ ಆಗಿದ್ದಾರೆ. ನಟ ಥಿಯೇಟರ್​ಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆ ಮೃತಪಟ್ಟಿದ್ದರು.

ಅರೆಸ್ಟ್ ವೇಳೆಯಲ್ಲಿ ಏನಂದ್ರು?

ಸರ್, ನೀವು ಯಾವುದನ್ನೂ ಗೌರವಿಸಿಲ್ಲ. ನಾನು ನನ್ನ ಬಟ್ಟೆ ಬದಲಾಯಿಸಲು ಮತ್ತು ನನ್ನೊಂದಿಗೆ ಒಬ್ಬ ವ್ಯಕ್ತಿಯನ್ನು ಕಳುಹಿಸಲು ಬಯಸುತ್ತೇನೆ ಎಂದು ನಾನು ನಿಮಗೆ ಹೇಳಿದೆ. ನೀವು ನನ್ನನ್ನು ಕರೆದುಕೊಂಡು ಹೋಗುವುದು ತಪ್ಪಲ್ಲ, ಆದರೆ ನನ್ನ ಮಲಗುವ ಕೋಣೆಗೆ ಬರುವುದು ತುಂಬಾ ದೊಡ್ಡ ತಪ್ಪು. ಅದು ಸರಿಯಲ್ಲ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed