Last Updated:
ಅಗ್ನಿಸಾಕ್ಷಿ ಮತ್ತೊಮ್ಮೆ ಬರ್ತಿದೆ. ಆದರೆ, ಇದು ಅಗ್ನಿಸಾಕ್ಷಿ-2 ಅಲ್ವೆ ಅಲ್ಲ. ಇಲ್ಲಿ ಬೇರೆ ಕತೆ ಇದೆ. ಇದರ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಇದೇ ಜೂನ್-8 ರಿಂದ ಶುರು ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿಯೇ (Colors Kannada) ಇದು ಟೆಲಿಕಾಸ್ಟ್ ಆಗುತ್ತಿದೆ. 6 ವರ್ಷದ ಹಿಂದೆ ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಕಲರ್ಸ್ ಅಲ್ಲಿಯೇ ಬರ್ತಿತ್ತು. ಆದರೆ, ಇದೀಗ ಇದೇ ಚಾನೆಲ್ ಅಲ್ಲಿ ಮತ್ತೊಮ್ಮೆ ಅಗ್ನಿಸಾಕ್ಷಿ ಸೀರಿಯಲ್ ಪ್ರಸಾರ ಆಗುತ್ತಿದೆ. ಆದರೆ, ಇದು ಈ ಹಿಂದಿನ ಅಗ್ನಿಸಾಕ್ಷಿಯ ಮುಂದುವರೆದ ಭಾಗ ಅಲ್ವೇ ಅಲ್ಲ. ಈ ಕತೆ (Story) ಬೇರೆ ಇದೆ. ಇಂದಿನ ಯುವಕರ ಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಕಥೆಯಾಗಿದೆ. ಇದರ ಇತರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಅಗ್ನಿ ಮತ್ತು ಸಾಕ್ಷಿ ಕತೆ
ನಾಯಕಿ ವಿಚಾರಕ್ಕೆ ಬಂದರೆ, ವೈಷ್ಣವಿ ಗೌಡ ಇಲ್ಲಿ ಸನ್ನಿಧಿ ಅನ್ನುವ ಪಾತ್ರ ಮಾಡಿದ್ದರು. ಈ ಸಲದ ಅಗ್ನಿಸಾಕ್ಷಿ ಸೀರಿಯಲ್ ಅಲ್ಲಿ ನವ ನಟಿ ವರ್ಷಿಣಿ ಗೌಡ ಇದ್ದಾರೆ. ಇವರ ಪಾತ್ರದ ಹೆಸರು ಸಾಕ್ಷಿ ಅಂತಲೇ ಇದೆ.
ಈ ಒಂದು ಸೀರಿಯಲ್ ಅಲ್ಲಿ ಅಗ್ನಿ ಧಗ ಧಗ ಅಂತಲೇ ಇರ್ತಾನೆ. ಆದರೆ, ಸಾಕ್ಷಿ ಹಾಗಲ್ಲ, ತುಂಬಾನೆ ಕೂಲ್ ನೋಡಿ. ಆದರೆ, ಅಗ್ನಿ ಎದುರಾದರೆ ಆಯತು. ಸಾಕ್ಷಿನೂ ಬೆಂಕಿ ಆಗುತ್ತಾಳೆ.
ಈ ರೀತಿಯ ಕತೆಯಲ್ಲಿ ಇಂದಿನ ಯುವ ಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಸ್ಟೋರಿ ಇದೆ.
ಜೂನ್-8 ರಿಂದ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಇದು ಟೆಲಿಕಾಸ್ಟ್ ಆಗುತ್ತಿದೆ. ಸಂಜೆ-7 ಗಂಟೆಗೆ ಸೋಮವಾರದಿಂದ ಇದು ಬರ್ತಿದೆ.
ಈ ಸೀರಿಯಲ್ ಅನ್ನ ಹ್ಯಾರಿಸ್ ಅವರೇ ಬರೆಯುತ್ತಿದ್ದಾರೆ. ಈ ಹಿಂದಿನ ಸೂಪರ್ ಹಿಟ್ ಅಗ್ನಿಸಾಕ್ಷಿ ಸೀರಿಯಲ್ ಅನ್ನ ಇದೇ ಹ್ಯಾರಿಸ್ ಬರೆದಿದ್ದರು. ಈ ಸಲವು ಒಂದು ಒಳ್ಳೆ ಕತೆ ನಿರೀಕ್ಷೆ ಮಾಡಬಹುದು.
ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು
ಅಗ್ನಿಸಾಕ್ಷಿ ಮೇಕಿಂಗ್ ಕೂಡ ಅದ್ದೂರಿ ಆಗಿದೆ. ಸೀರಿಯಲ್ನ ಪ್ರೋಮೊ ಅದನ್ನ ಹೇಳುತ್ತವೆ. ಸೀರಿಯಲ್ ತಂಡವೂ ಅದನ್ನೆ ಹೇಳಿಕೊಂಡಿದೆ.
ಅಗ್ನಿಸಾಕ್ಷಿ ಸೀರಿಯಲ್ ಅಲ್ಲಿ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಪ್ರಿಯರಿಗೆ ಇದು ಹೊಸ ಅನುಭವ ಕೊಡಲಿದೆ. ಅಗ್ನಿಸಾಕ್ಷಿ ಸೀರಿಯಲ್ ತಂಡ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಕೂಡ ಮಾಡಿದೆ.
ಈ ಒಂದು ಸೀರಿಯಲ್ ಅಲ್ಲಿ ಮಂಜು ಗೌಡ ನಟಿಸಿದ್ದಾರೆ. ಬಿಗ್ ಬಾಸ್ ಫೇಮ್ ಧ್ರುವಂತ ಇಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.
ಆದರೆ, ಇವರು ಇಡೀ ಸೀರಿಯಲ್ ಅಲ್ಲಿ ಇರೋದಿಲ್ಲ. ಇವರದ್ದು ಅತಿಥಿ ಪಾತ್ರಗಳೇ ಆಗಿವೆ. ಒಟ್ಟಾರೆ, ಅಗ್ನಿಸಾಕ್ಷಿ ಸೀರಿಯಲ್ ಮತ್ತೊಮ್ಮೆ ಬರ್ತಿದೆ. ಆದರೆ, ಇದು ಈ ಮೊದಲೇ ಹೇಳಿದಂತೆ ಅಗ್ನಿಸಾಕ್ಷಿ-2 ಸೀರಿಯಲ್ ಅಲ್ಲ. ಇದು ಬೇರೆ ಕತೇನೆ ಆಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













