Last Updated:
ಪುನೀತ್ ಅಭಿನಯದ ರಣವಿಕ್ರಮ ಆದ್ಮೇಲೆ ಅದಾ ಶರ್ಮಾ ಕನ್ನಡ ಸಿನಿಮಾ ಮಾಡಿರಲಿಲ್ಲ. ಆದರೆ, ರಾಮರಸ ಚಿತ್ರದಲ್ಲಿ ಅದಾ ಶರ್ಮಾ ಅಭಿನಯಿಸಿದ್ದಾರೆ. ದೇವಿ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಲುಕ್ ಅನ್ನ ಸಿನಿಮಾ ತಂಡ ಇದೀಗ ರಿವೀಲ್ ಮಾಡಿದೆ. ಒಂದಷ್ಟು ಮಾಹಿತಿ ಕೊಟ್ಟಿದೆ. ಅದರ ವಿವರ ಮುಂದೆ ಇದೆ ಓದಿ.
ಅದಾ ಶರ್ಮಾ (Adah Sharma) ಕನ್ನಡಕ್ಕೆ ಮತ್ತೊಮ್ಮೆ ಬಂದಿದ್ದಾರೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ರಣವಿಕ್ರಮ ಚಿತ್ರದಲ್ಲಿ ಅದಾ ಶರ್ಮಾ (Adah Sharma) ನಟಿಸಿದ್ದರು. ಇದು ಇವರ ಮೊದಲ ಚಿತ್ರವು ಆಗಿದೆ. ಕೊನೆಯ ಚಿತ್ರವೂ ಆಗಿತ್ತು. ಆದರೆ, ಬಿ.ಎಂ.ಗಿರಿರಾಜ್ (BM Giriraj) ಡೈರೆಕ್ಷನ್ ಮಾಡಿರೋ ಚಿತ್ರದಲ್ಲಿ ಅದಾ ಶರ್ಮಾ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅದಾ ಶರ್ಮಾ ದೇವಿ ಪಾತ್ರವನ್ನೆ ಮಾಡಿದ್ದಾರೆ. ಈ ವಿಷಯವನ್ನ ಚಿತ್ರ ತಂಡ ಇದೀಗ ಅಧಿಕೃತವಾಗಿಯೇ ಹೇಳಿದೆ. ಅದಾ ಶರ್ಮಾ ಅವರ ಕೆಲವು ಫೋಟೋಗಳನ್ನು ಬಿಟ್ಟುಕೊಟ್ಟಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಮರಸ ಚಿತ್ರದ ಅದಾ ಶರ್ಮ ಲುಕ್ ಔಟ್
(ಚಿತ್ರ ಕೃಪೆ: ರಾಮರಸ ಸಿನಿಮಾ ಟೀಮ್)
“ಇಡೀ ಸೃಷ್ಟಿಯೇ ಪರಾಶಕ್ತಿಯ ಲೀಲೆ. ಹಾಲುಣಿಸುವವಳೂ ತಾಯಿ. ಮಣ್ಣು ಮುಕ್ಕಿಸುವವಳೂ ತಾಯಿ. ಆದರೆ ಹಾಲು ಯಾವುದು, ಮಣ್ಣು ಯಾವುದು ಅನ್ನುವುದರ ಅರಿವು ಪಡೆಯುವುದೇ ಇಡೀ ಬದುಕಿನ ಮಾಯೆ. ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸಲು ತಾಯಿ ರಾಮರಸದಲ್ಲಿ ಯಾವ ರೂಪ ತಾಳಿ ಬರಲಿದ್ದಾಳೆ? ಅದನ್ನು ನೋಡಿಯೇ ಸವಿಯಬೇಕು.”
ಈ ಒಂದು ಪ್ರಶ್ನೆ ಅದಾ ಶರ್ಮಾ ಅವರ ಫೋಟೋ ನೋಡಿದ್ಮೇಲೆ ಹುಟ್ಟಿಕೊಳ್ಳುತ್ತದೆ. ಮೇಲೆ ಹೇಳಿದ ಸಾಲುಗಳು ಮತ್ತಷ್ಟು ಕುತೂಹಲ ಹೆಚ್ಚಿಸುತ್ತವೆ.
ಚಿತ್ರದಲ್ಲಿ ತಾರೆಯರ ದಂಡೇ ಇದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ನಟಿ ಹೆಬ್ಬಾ ಪಟೇಲ್, ಹಾಸ್ಯ ನಾಯಕ ನಟ ಶರಣ್ ಹೀಗೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ದೇವಿ ರೂಪದಲ್ಲಿ ಪುನೀತ್ ಹೀರೋಯಿನ್
(ಚಿತ್ರ ಕೃಪೆ: ರಾಮರಸ ಸಿನಿಮಾ ಟೀಮ್)
ಈ ಚಿತ್ರದ ಚಿತ್ರೀಕರಣ ಆಗಿದೆ. ಶೂಟಿಂಗ್ ನಂತರದ ಕೆಲಸವೂ ಜೋರಾಗಿಯೇ ನಡೀತಿವೆ. ಈ ಚಿತ್ರಕ್ಕೆ ಡೈರೆಕ್ಟರ್ ಗುರು ದೇಶಪಾಂಡೆ ಕ್ರಿಯೇಟಿವ್ ಹೆಡ್ ಆಗಿಯೂ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ದುಡ್ಡೂ ಹಾಕಿದ್ದಾರೆ. ಈ ಚಿತ್ರ ನಿರ್ಮಾಣದಲ್ಲಿ ವಿಕ್ರಮ್ ಆರ್ಯ ಕೂಡ ಸಾಥ್ ಕೊಟ್ಟಿದ್ದಾರೆ.
ಈ ಚಿತ್ರಕ್ಕೆ ಬಿ.ಜೆ.ಭರತ್ ಮ್ಯೂಸಿಕ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಗ್ರಾಫಿಕ್ಸ್, ವಿಎಫ್‌ಎಕ್ಸ್, ಸೌಂಡ್ ಡಿಸೈನ್ ಕೂಡ ಉತ್ತಮವಾಗಿದೆ.
ಚಿತ್ರದ ಟೀಸರ್ ರಿಲೀಸ್ ಕೂಡ ಆಗುತ್ತದೆ. ಆ ಡೇಟ್ ಅನ್ನು ಚಿತ್ರ ತಂಡ ಅನೌನ್ಸ್ ಮಾಡಲಿದೆ. ಇತರ ಪಾತ್ರಗಳ ಫಸ್ಟ್ ಲುಕ್ ಕೂಡ ರಿಲೀಸ್ ಆಗಲಿವೆ ಅಂತ ಹೇಳಬಹುದು.














