Actor Govinda: ಪ್ರೇಯಸಿ ಜೊತೆ ಗಣೇಶನ ದರ್ಶನ ಪಡೆದ ಗೋವಿಂದ? ಪತ್ನಿ ಸುನೀತಾ ಖಡಕ್ ರಿಯಾಕ್ಷನ್! | | ACTPnews

News18


Last Updated:

ಗಣೇಶ ಹಬ್ಬದ ಸಂದರ್ಭದಲ್ಲಿ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿಯ ದರ್ಶನಕ್ಕೆ ಈ ದಂಪತಿ ಪ್ರತ್ಯೇಕವಾಗಿ ಆಗಮಿಸಿರುವುದು ಗಮನ ಸೆಳೆದಿದೆ. ಅದರಲ್ಲೂ ಗೋವಿಂದ ನಟಿ ಕೋಮಲ್ ರಾಣಿ ಜೊತೆ ಗಣೇಶ ದರ್ಶನಕ್ಕೆ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

News18
News18

ಬಾಲಿವುಡ್ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿಯ ದರ್ಶನಕ್ಕೆ ಈ ದಂಪತಿ ಪ್ರತ್ಯೇಕವಾಗಿ ಆಗಮಿಸಿರುವುದು ಗಮನ ಸೆಳೆದಿದೆ. ಅದರಲ್ಲೂ ಗೋವಿಂದ ನಟಿ ಕೋಮಲ್ ರಾಣಿ ಜೊತೆ ಗಣೇಶ ದರ್ಶನಕ್ಕೆ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸೆಪ್ಟೆಂಬರ್ 22ರಂದು ಬೆಳಗ್ಗೆ ಸುನೀತಾ ಅಹುಜಾ ಏಕಾಂಗಿಯಾಗಿ ಲಾಲ್‌ಬಾಗ್‌ಚಾ ರಾಜನ ದರ್ಶನ ಪಡೆದಿದ್ದರು. ಅದೇ ದಿನ ಸಂಜೆ ಗೋವಿಂದ ನಟಿ ಕೋಮಲ್ ರಾಣಿ ಜೊತೆ ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿದರು ಎನ್ನಲಾಗಿದೆ. ದಂಪತಿ ಒಂದೇ ಸಂದರ್ಭದಲ್ಲಿ ಕಾಣಿಸಿಕೊಳ್ಳದೆ ಪ್ರತ್ಯೇಕವಾಗಿ ದರ್ಶನ ಪಡೆದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಗೋವಿಂದ ಜೊತೆ ಕೋಮಲ್ ರಾಣಿ ಕಾಣಿಸಿಕೊಂಡಿದ್ದು ಏಕೆ?

ಗೋವಿಂದ ಮತ್ತು ಕೋಮಲ್ ರಾಣಿ ಒಟ್ಟಾಗಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರೂ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ವರದಿಯಾಗಿದೆ. ಆದರೆ ಇವರಿಬ್ಬರ ಸುತ್ತಲೂ ವೈಯಕ್ತಿಕ ಸಂಬಂಧದ ಕುರಿತ ವದಂತಿಗಳು ಹರಿದಾಡುತ್ತಿವೆ.

ಸುನೀತಾ ಅಹುಜಾ ಹೇಳಿಕೆ ವೈರಲ್

ಗೋವಿಂದ ಮತ್ತು ಕೋಮಲ್ ರಾಣಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಸುನೀತಾ ಅಹುಜಾ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನ ನಿಲ್ದಾಣದಲ್ಲಿ ತಮ್ಮ ಸಾಕು ನಾಯಿಯೊಂದಿಗೆ ಕಾಣಿಸಿಕೊಂಡ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಹೆಚ್ಚು ನಂಬಿಕೆ ಇಡಬಹುದು ಎಂಬ ಅರ್ಥದ ಮಾತುಗಳನ್ನು ಹೇಳಿದ್ದಾರೆ.

ಮನುಷ್ಯರಿಗೆ ಎಷ್ಟೇ ಪ್ರೀತಿ ನೀಡಿದರೂ ಕೊನೆಗೆ ದ್ರೋಹ ಮಾಡಬಹುದು. ಆದರೆ ಪ್ರಾಣಿಗಳು ಯಾವಾಗಲೂ ನಮ್ಮೊಂದಿಗೆ ಇರುತ್ತವೆ. ಹಾಗಾಗಿ ಪ್ರಾಣಿಗಳನ್ನು ಪ್ರೀತಿಸಿ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯನ್ನು ಕೆಲವರು ಗೋವಿಂದ ಅವರನ್ನು ಉದ್ದೇಶಿಸಿ ನೀಡಿದ ಪರೋಕ್ಷ ಪ್ರತಿಕ್ರಿಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: Actor Dhanush: ರಜನಿಕಾಂತ್ ಸಿನಿಮಾ ಜೊತೆ ಪೈಪೋಟಿ ಬೇಡ; ‘ಓಂ’ ಬಿಡುಗಡೆ ಮುಂದೂಡಿದ ಧನುಷ್!

ಸುನೀತಾ ಅಹುಜಾ ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಸುನೀತಾ ಹೇಳಿಕೆಯನ್ನು ದಾಂಪತ್ಯ ಜೀವನದ ಸಮಸ್ಯೆಗಳೊಂದಿಗೆ ಸಂಪರ್ಕಿಸಿ ಮಾತನಾಡುತ್ತಿದ್ದಾರೆ. ಮತ್ತಷ್ಟು ಮಂದಿ, ಸಾರ್ವಜನಿಕ ಜೀವನದಲ್ಲಿರುವ ದಂಪತಿಯ ವೈಯಕ್ತಿಕ ವಿಚಾರಗಳ ಬಗ್ಗೆ ಊಹಾಪೋಹ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೆಯೂ ಗೋವಿಂದ ಮತ್ತು ಕೋಮಲ್ ರಾಣಿ ಅವರ ಹೆಸರುಗಳು ಹಲವು ಸಂದರ್ಭಗಳಲ್ಲಿ ಚರ್ಚೆಗೆ ಬಂದಿದ್ದವು. ಈ ವಿಚಾರದಲ್ಲಿ ಸುನೀತಾ ಅಹುಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳೂ ಬಂದಿದ್ದವು. ಹೀಗಾಗಿ ಇದೀಗ ಗಣೇಶ ದರ್ಶನದ ಸಂದರ್ಭದಲ್ಲಿ ನಡೆದ ಬೆಳವಣಿಗೆ ಕುತೂಹಲ ಹೆಚ್ಚಿಸಿದೆ.

ಗೋವಿಂದ ಮತ್ತು ಸುನೀತಾ ಅಹುಜಾ ಹಲವು ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವುದು ಇದೇ ಮೊದಲೇನಲ್ಲ. ಇದೀಗ ಲಾಲ್‌ಬಾಗ್‌ಚಾ ರಾಜನ ದರ್ಶನದ ಸಂದರ್ಭದ ಘಟನೆ ಮತ್ತು ಸುನೀತಾ ಹೇಳಿಕೆ ಮತ್ತೊಮ್ಮೆ ಈ ದಂಪತಿಯ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports