Actor Death: ರಸ್ತೆ ಬದಿಯಲ್ಲಿ ನಡೆದು ಹೋಗ್ತಿದ್ದ ನಟ ಅಪಘಾತದಲ್ಲಿ ಸಾವು | Car lost control hit the malayalam actor who was walking by side | | ACTPnews

ಅಪಘಾತದಲ್ಲಿ ಮೃತಪಟ್ಟವರು


Last Updated:

Actor: ರಸ್ತೆ ಬದಿಯಲ್ಲಿ ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ನಟ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿ ಓದಿ.

ಅಪಘಾತದಲ್ಲಿ ಮೃತಪಟ್ಟವರು
ಅಪಘಾತದಲ್ಲಿ ಮೃತಪಟ್ಟವರು

ಕಣ್ಣವಂನಲ್ಲಿ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿನಿಮಾ ನಟ (Actor) ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಣ್ಣವಂ ಮೂಲದ ಇಸ್ಮಾಯಿಲ್ (52) ಮತ್ತು ಪುತ್ತುಕುಡಿ ಸಜೀಶ್ ಅಲಿಯಾಸ್ ಬಾಬು (52) ಎಂದು ಗುರುತಿಸಲಾಗಿದೆ. ಮೃತ ಇಸ್ಮಾಯಿಲ್ ವಿನಯನ್ ನಿರ್ದೇಶನದ ‘ಅಥ್ಭುತದ್ವೀಪ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ ನಟ.

ಪೆರಾವೂರು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಬೈಜು ವರ್ಗೀಸ್ ಅವರ ಕಾರು ಅಪಘಾತಕ್ಕೆ ಕಾರಣವಾಗಿದ್ದು, ಪೆರಾವೂರು ಕಡೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಕಣ್ಣವಂ ಪೊಲೀಸರ ಸಿಸಿಟಿವಿ ಕ್ಯಾಮೆರಾ ಮತ್ತು ವಿದ್ಯುತ್ ಕಂಬ ಸಂಪೂರ್ಣವಾಗಿ ನಾಶವಾಯಿತು. ಡಿಕ್ಕಿಯ ಪರಿಣಾಮ ಬಾಬು ಸ್ಥಳದಲ್ಲೇ ಸಾವನ್ನಪ್ಪಿದರು. ಅಪಘಾತದ ನಂತರ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ನಟ ಇಸ್ಮಾಯಿಲ್ ಅವರ ಜೀವವನ್ನು ಉಳಿಸಲಾಗಲಿಲ್ಲ. ಕನ್ನವೋಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಬಗ್ಗೆ ವಿವರವಾದ ತನಿಖೆ ಆರಂಭಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports