Yash: ಎರಡೂವರೆ ವರ್ಷ, ಬ್ಯಾಕ್ To ಬ್ಯಾಕ್ ಲಾಭ! ರಾಕಿಂಗ್ ಸ್ಟಾರ್ ಯಶ್ ಕಾರಣ | Sandalwood famous distributors speaks about yash | | ACTPnews

ಯಶ್


Last Updated:

Yash: ನಟ ಯಶ್ ಅವರ ಬಗ್ಗೆ ಜಯಣ್ಣ ಹಾಗೂ ಭೋಗೇಂದ್ರ ಅವರು ಹೇಳಿದ್ದೇನು? ಆ ಎರಡೂವರೆ ವರ್ಷಗಳು ಹಾಗೂ ಲಾಭದ ಸಿನಿಮಾಗಳು !

ಯಶ್
ಯಶ್

ಯಶ್ (Yash) ಅವರನ್ನು ಇಂದು ರಾಕಿಭಾಯ್ ಆಗಿ ಜಗತ್ತಿಗೆ ಗೊತ್ತಿದೆ. ಆದರೆ ಅವರು ಕನ್ನಡಿಗೆ ಪಾಲಿನ ಅಚ್ಚುಮೆಚ್ಚಿನ ರಾಮಾಚಾರಿ (Ramachari). ಯಶ್ ಅವರು ಬೆಳೆಯುವುದನ್ನು ಸ್ವತಃ ನೋಡಿ ಸಾಕ್ಷಿಯಾದ ಎಷ್ಟೋ ಮಂದಿ ಕನ್ನಡ ಚಿತ್ರರಂಗದಲ್ಲಿದ್ದಾರೆ (Sandalwood). ಅವರಲ್ಲಿ ಖ್ಯಾತ ನಿರ್ಮಾಪಕರ ಜೋಡಿಯೂ ಒಂದು.

ಸದ್ಯ ಯಶ್ ಅವರ ರಾಮಾಯಣ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ರಾವಣನ ಅವತಾರದಲ್ಲಿ ಮಿಂಚಿದ ನಟನಿಗೆ ಭಾರೀ ಮೆಚ್ಚುಗೆ ಮಾತು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಅವರ ಕುರಿತಾದ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.

ವಿತರಕರೂ, ನಿರ್ಮಾಪಕರೂ ಆಗಿರುವ ಜಯಣ್ಣ ಹಾಗೂ ಭೋಗೇಂದ್ರ ಅವರು ಚಂದನದ ತಾರಾಂತರಂಗ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಅವರು ಮಾತನಾಡಿದ್ದಾರೆ. 500ಕ್ಕೂ ಹೆಚ್ಚು ಸಿನಿಮಾ ವಿತರಣೆ ಮಾಡಿದ ಇವರು, ಕೆಲವೊಂದಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಡಿಸ್ಟ್ರಿಬ್ಯೂಷನ್​​​ಗಿಂತ ನಿರ್ಮಾಣದಲ್ಲೇ ಲಾಭ ಜಾಸ್ತಿ. 500 ಸಿನಿಮಾ ಡಿಸ್ಟ್ರಿಬ್ಯೂಷನ್ ಮಾಡಿದರೂ 25 ಸಿನಿಮಾ ನಿರ್ಮಾಣದಲ್ಲೇ ಲಾಭ ಜಾಸ್ತಿ. ಕಾರಣ ರಾಕಿಂಗ್ ಸ್ಟಾರ್ ಯಶ್ ಅನ್ನೋ ವ್ಯಕ್ತಿ ಎಂದಿದ್ದಾರೆ.

ಎಲ್ಲಾ ಹಿರೋಗಳು ಕೌಂಟ್​ಗೆ ಬರುತ್ತಾರೆ. ಶಿವಣ್ಣ ಪಿಕ್ಚರ್, ದರ್ಶನ್, ಅಪ್ಪು, ವಿಜಯ್ ಸಿನಿಮಾ ಮಾಡಿದ್ದೀವಿ. ತುಂಬಾ ದೊಡ್ಡದಾಗಿ ಲಾಭ ನೋಡಿದ್ದು 2012ರಿಂದ 2014ರ ತನಕ ಐದು ಸಿನಿಮಾಗಳು. ಆಗ ಯಶ್ ಅವರು ದೊಡ್ಡ ಸೂಪರ್​ಸ್ಟಾರ್ ಆಗಿರಲಿಲ್ಲ. ಜಾನು, ಡ್ರಾಮಾ ಅಲ್ಲಿಂದ ಸತತ 5 ಬ್ಯಾಕ್ ಟು ಬ್ಯಾಕ್ ಸಿನಿಮಾ. ಐದು ಸಿನಿಮಾ ಜೊತೆ ರಾಜಾಹುಲಿ ಸಿನಿಮಾ, ಡಿಸ್ಟ್ರಿಬ್ಯೂಷನ್ ಅದು. ಎರಡೂವರೆ ವರ್ಷ 6 ಸಿನಿಮಾ ರಿಲೀಸ್ ಆಗುತ್ತೆ. ರಾಮಾಚಾರಿ ಹೊತ್ತಿಗೆ ತುಂಬಾ ಬದಲಾವಣೆ ಆಯ್ತು ಎಂದಿದ್ದಾರೆ.

ಜಾನು ನಮ್ಮ ಡಿಸಿಷನ್, ಡ್ರಾಮಾ ನಮ್ಮ ಡಿಸಿಷನ್, ಗಜಕೇಸರಿ ನಮ್ಮ ಡಿಸಿಷನ್ ನಮ್ಮ ಡಿಸಿಷನ್, ರಾಮಾಚಾರಿ ಅವರ ಡಿಸಿಷನ್. ನಾವು ಅವರಿಗೋಸ್ಟರ ಕಷ್ಟ ಪಟ್ಟಿದ್ದೀವಿ. ಅವರು ತುಂಬಾ ಕಷ್ಟಪಟ್ಟಿದ್ದಾರೆ. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾವು ನೋಡಿದ್ದೇವೆ. ಪ್ಯಾಚ್ ವರ್ಕ್ ಎಲ್ಲ ಇತ್ತು, ನಾನು ಬಿರಿಯಾನಿ ತಂದುಕೊಟ್ಟು ತಿನ್ಲೇಬೇಕು ಎಂದು ಎದುರು ಕೂತಿದ್ದೆ ಎಂದಿದ್ದಾರೆ.

ಯಶ್ ಅವರ ವೃತ್ತಿಜೀವನದಲ್ಲಿ ಅತಿದೊಡ್ಡ ತಿರುವು ತಂದ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ದೇಶದಾದ್ಯಂತ ದಾಖಲೆ ನಿರ್ಮಿಸಿ, ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಪರಿಚಯಿಸಿತು. ಬಳಿಕ ಕೆಜಿಎಫ್ ಚಾಪ್ಟರ್ 2 ಕೂಡ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡು, ಅವರ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತು.

ರಾವಣನಾಗಿ ಅಬ್ಬರಿಸಿದ ಯಶ್

ರಾಮಾಯಣ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಯಶ್ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೇಳಿ ಬಂದಿದೆ. ಅವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed