Last Updated:
ದುಲೀಪ್ ಟ್ರೋಫಿ 2026ಕ್ಕೆ ಈಸ್ಟ್ ಝೋನ್ ತಂಡ ಪ್ರಕಟ: ಇಶಾನ್ ಕಿಶನ್ ನಾಯಕ, 15 ವರ್ಷದ ವೈಭವ್ ಸೂರ್ಯವಂಶಿ ಉಪನಾಯಕ. ಶಮಿ, ಮುಖೇಶ್ ಕುಮಾರ್ ತಂಡದಲ್ಲಿ.
ಭಾರತದ ದೇಶೀಯ ರೆಡ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಅತ್ಯಂತ ಪ್ರತಿಷ್ಠಿತ ದುಲೀಪ್ ಟ್ರೋಫಿ 2026ಕ್ಕಾಗಿ ಈಸ್ಟ್ ಝೋನ್ ಆಯ್ಕೆ ಸಮಿತಿ 15 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ತಂಡಕ್ಕೆ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಬಳಿಕ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಇಶಾನ್ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಸದ್ಯ ಈ ಟೂರ್ನಿ ಮೂಲಕ ಬ್ಯಾಟಿಂಗ್ ಜೊತೆಗೆ ನಾಯಕತ್ವ ಸಾಮರ್ಥ್ಯವನ್ನು ಸಾಬೀತು ಪಡಿಸುವ ಅದ್ಭುತ ಅವಕಾಶ ಆತನಿಗೆ ಲಭ್ಯವಾಗಿದೆ.
ವಿಶೇಷ ಎಂದರೇ, ಆಟಗಾರರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಎಲ್ಲರ ಗಮನ ಸೆಳೆದ ಅಂಶ ಅಂದರೆ ಅದು 15 ವರ್ಷದ ವಂಡರ್ ಕಿಡ್ ಅಂತಲೇ ಖ್ಯಾತಿ ಪಡೆದಿರುವ ವೈಭವ್ ಸೂರ್ಯವಂಶಿ ಉಪನಾಯಕನ ಜವಾಬ್ದಾರಿ ನೀಡಿರೋದು. ಇಷ್ಟು ಕಡಿಮೆ ವಯಸ್ಸಿನಲ್ಲಿ ಲೀಡರ್ಶಿಪ್ ರೋಲ್ ಸಿಕ್ಕಿರೋದು ಆತನ ಮೆಚ್ಯುರಿಟಿ ಬಗ್ಗೆ ಆಯ್ಕೆ ಸಮಿತಿ ಇಟ್ಟಿರುವ ನಂಬಿಕೆಯನ್ನು ಇಲ್ಲಿ ತೋರಿಸಿದೆ. ಅನುಭವಿ ಆರಂಭಿಕ ಅಭಿಮನ್ಯು ಈಶ್ವರನ್ ಅವರೊಂದಿಗೆ ವೈಭವ್ ಇನ್ನಿಂಗ್ಸ್ ಆರಂಭಿಸುವ ಅವಕಾಶವಿದೆ.
ಕಳೆದ ವರ್ಷ ಇಶಾನ್ ಕಿಶನ್ ನಾಯಕತ್ವದ ಜಾರ್ಖಂಡ್ ತಂಡ ಹರಿಯಾಣ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಸೈಯದ್ ಅಲಿ ಟ್ರೋಫಿ ಗೆದ್ದು ಬೀಗಿತ್ತು. ಅಷ್ಟೇ ಅಲ್ಲದೇ, ಪ್ಯಾಟ್ ಕಮಿನ್ಸ್ ಗೈರು ಹಾಜರಿಯಲ್ಲಿ ಇಶಾನ್ 2026ರ ಐಪಿಎಲ್ ನಲ್ಲಿ ಮೊದಲ 07 ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು.
ವೈಭವ್ ಸೂರ್ಯವಂಶಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಅಂಡರ್-19 ತಂಡದ ನಾಯಕತ್ವ ವಹಿಸಿಕೊಂಡಿದ್ದರು, ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸರಣಿ ಗೆಲುವು ಪಡೆದುಕೊಂಡಿತ್ತು. ಸದ್ಯ ವೈಭವ್ ಹೊಸ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾರೆ ಅಂತ ಕಾದುನೋಡಬೇಕಿದೆ.
ಇಶನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ
ಇನ್ನು, ಟೀಂ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ, ಮುಖೇಶ್ ಕುಮಾರ್ ಅವರು ಈಸ್ಟ್ ಝೋನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಇಬ್ಬರು ಬೌಲರ್ ಗಳಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ ಅನುಭವವಿದೆ. ಇಬ್ಬರ ಆಗಮನ ತಂಡದ ಬೌಲಿಂಗ್ಗೆ ಬಲ ನೀಡಿದೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗಬೇಕು ಎಂದರೇ, ಶಮಿ ಪ್ರದರ್ಶನದ ಮೇಲೆ ಟೀಂ ಇಂಡಿಯಾ ಆಯ್ಕೆ ಸಮಿತಿ ಕಣ್ಣಿಡುವ ನಿರೀಕ್ಷೆ ಇದೆ.
2026ರ ದುಲೀಪ್ ಟ್ರೋಫಿಗೆ ಈಸ್ಟ್ ಝೋನ್ ತಂಡ ಇಂತಿದೆ: ಇಶಾನ್ ಕಿಶನ್, ವೈಭವ್ ಸೂರ್ಯವಂಶಿ, ಅಭಿಮನ್ಯು ಈಶ್ವರನ್, ಸುದೀಪ್ ಕುಮಾರ್, ಶಹಬಾಜ್ ಅಹ್ಮದ್, ಸೂರಜ್ ಸಿಂಧು ಜೈಸ್ವಾಲ್, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಕುಮಾರ್ ಕುಶಾಗ್ರ, ಶೀಖರ್ ಮೋಹನ್, ಅನುಕುಲ್ ರಾಯ್, ವಿರಾಟ್ ಸಿಂಗ್, ಶುಭ್ರಾಂಶು ಸೇನಾಪತಿ, ಡಾನಿಷ್ ದಾಸ್, ಅಭಿಜಿತ್ ಸರ್ಕಾರ್.














