Last Updated:
ಮಂಡ್ಯ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಒಟ್ಟು 41 ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ವಿಶೇಷ ನೇರ ನೇಮಕಾತಿ ಪ್ರಕಟಿಸಲಾಗಿದೆ. ₹27,000 ರಿಂದ ₹46,675 ವೇತನದ ಈ ಹುದ್ದೆಗಳಿಗೆ ಆಗಸ್ಟ್ 19ರೊಳಗೆ ಅರ್ಜಿ ಸಲ್ಲಿಸಬಹುದು.
ಮಂಡ್ಯ: ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವ ಮಂಡ್ಯ (Mandya) ಜಿಲ್ಲೆಯ ನಿರುದ್ಯೋಗಿಗಳಿಗೆ ಇಲ್ಲಿದೆ ಬೊಂಬಾಟ್ ಸಿಹಿಸುದ್ದಿ! ಕೈತುಂಬಾ ಸಂಬಳದೊಂದಿಗೆ (Salary) ನಿಮ್ಮದೇ ಊರಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶವೊಂದು ಒದಗಿ ಬಂದಿದೆ. ಪೌರಾಡಳಿತ ನಿರ್ದೇಶನಾಲಯವು ಮಂಡ್ಯ ಜಿಲ್ಲೆಯಾದ್ಯಂತ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 41 ಪೌರಕಾರ್ಮಿಕರ ಹುದ್ದೆಗಳ (32 ಸಾಮಾನ್ಯ ಮತ್ತು 9 ಸಂಖ್ಯಾತಿರಿಕ್ತ ಹುದ್ದೆಗಳು) ಭರ್ತಿಗೆ ಬೃಹತ್ ವಿಶೇಷ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 27,000 ರೂ. ಗಳಿಂದ ಆರಂಭವಾಗಿ ಗರಿಷ್ಠ 46,675 ರೂ. ವರೆಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ! ಇಷ್ಟು ದೊಡ್ಡ ಮೊತ್ತದ ಸಂಬಳದ ಸರ್ಕಾರಿ ಕೆಲಸವನ್ನು ಮಿಸ್ ಮಾಡಿಕೊಂಡರೆ ಖಂಡಿತಾ ಪಶ್ಚಾತ್ತಾಪ ಪಡಬೇಕಾಗುತ್ತದೆ, ಹಾಗಾಗಿ ಕೂಡಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿ!
ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ
ಇನ್ನೇಕೆ ತಡ? ತಕ್ಷಣವೇ ನಿಮ್ಮ ಹತ್ತಿರದ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಆಗಸ್ಟ್ 19 ರೊಳಗೆ ಆಯಾ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಅಥವಾ ಮುಖ್ಯಾಧಿಕಾರಿಗಳ ಕಚೇರಿಗೆ ಖುದ್ದಾಗಿ ಸಲ್ಲಿಸಿ. ನೆನಪಿರಲಿ, ಆಗಸ್ಟ್ 19 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದವರೆಗೆ ಕಾಯಬೇಡಿ! ಈ ನೇಮಕಾತಿ ಕುರಿತು ಯಾವುದೇ ಗೊಂದಲಗಳಿದ್ದರೂ ಅಥವಾ ಹೆಚ್ಚಿನ ಮಾಹಿತಿಗಾಗಿ 08232231111 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mandya,Mandya,Karnataka














