Last Updated:
ಇಸ್ರೋದಲ್ಲಿ 92 ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಬೆಂಗಳೂರು, ಹಾಸನ ವಿಭಾಗಗಳಲ್ಲಿ ಅವಕಾಶ. B.E/B.Tech ಪದವೀಧರರಿಗೆ ₹56,100 ವೇತನ. ಗರಿಷ್ಠ ವಯಸ್ಸು 28 ವರ್ಷ.
ಬೆಂಗಳೂರು: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ (ISRO) ದಲ್ಲಿ ಪ್ರತಿಷ್ಠಿತ ಉದ್ಯೋಗ ಪಡೆದು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಸುವರ್ಣಾವಕಾಶ ಎದುರಾಗಿದೆ. ಬೆಂಗಳೂರು (Bengaluru) ಮತ್ತು ಹಾಸನ (Hassan) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 92 ವಿಜ್ಞಾನಿ/ಇಂಜಿನಿಯರ್ (Scientist/Engineer) ಹುದ್ದೆಗಳನ್ನು (Jobs) ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಾಣುವ ಯುವ ಪ್ರತಿಭೆಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!
ಸಂಸ್ಥೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಹುದ್ದೆಯ ಹೆಸರು: ವಿಜ್ಞಾನಿ / ಇಂಜಿನಿಯರ್
ಒಟ್ಟು ಹುದ್ದೆಗಳು: 92
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E ಅಥವಾ B.Tech ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು ಎಂದು udyogadeepa.prowebp ವರದಿ ಮಾಡಿದೆ.
ಇಂಜಿನಿಯರಿಂಗ್ ಮುಗಿಸಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಕೂಡಲೇ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಭಾರತದ ಬಾಹ್ಯಾಕಾಶ ಯಶಸ್ಸಿನಲ್ಲಿ ಹೆಮ್ಮೆಯ ಪಾಲುದಾರರಾಗಿ.
Bangalore,Karnataka














