Last Updated:
ಚಾಮರಾಜನಗರ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿ ಬಳಿಕ ಅರಣ್ಯ ಇಲಾಖೆ ಚಾರಣ, ಸಂಚಾರ ಪಥ ಸ್ಥಗಿತ, ಈಶ್ವರ ಬಿ ಖಂಡ್ರೆ ಸೂಚನೆ, ಸೆರೆ ಕಾರ್ಯಾಚರಣೆ ಜೋರಾಗಿದೆ.
ಬೆಂಗಳೂರು: ಚಾಮರಾಜನಗರದ (Chamarajanagara) ನಾಗಮಲೆ ಅರಣ್ಯದಲ್ಲಿ (Nagamale Forest) ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ (Forest Department) ಹೊಸ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಚಾರ ಇರುವ ಎಲ್ಲಾ ಚಾರಣಪಥ ಮತ್ತು ಸಂಚಾರಪಥವನ್ನ ತಾತ್ಕಾಲಿಕವಾಗಿ (Hiking & Trekking) ಸ್ಥಗಿತ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Minister Eshwar Khandre) ಸೂಚನೆ ನೀಡಿದ್ದಾರೆ.
ಇನ್ನು, ಮಲೆ ಮಹದೇಶ್ಚರ ಬೆಟ್ಟದಲ್ಲಿ ಬಾಲಕ ಬಲಿ ಪಡೆದಿದ್ದ ಚಿರತೆ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಮೈಸೂರಿನಿಂದ ಚಿರತೆ ಕಾರ್ಯಪಡೆ ತಂಡ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಚಿರತೆ ಸೆರೆಹಿಡಿಯಲು ನಾಲ್ಕು ಬೋನ್ ಅಳವಡಿಕೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ 70ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಕೊಂಡಿದ್ದು, ಅರಣ್ಯ ಪ್ರದೇಶವಾದರಿಂದ ಡಾಟ್ ಮಾಡಿ ಹಿಡಿಯೋದು ಕಷ್ಟ ಅನ್ನೋ ನಿರ್ಧಾರಕ್ಕೆ ಬಂದಿರುವ ಅರಣ್ಯಾಧಿಕಾರಿಗಳು ಬೋನ್ ಮೂಲಕವೇ ಚಿರತೆ ಸೆರೆ ಹಿಡಿಯಲು ಯೋಜನೆ ರೂಪಿಸಿದ್ದಾರೆ.
ಅರಣ್ಯ ಇಲಾಖೆ ಸುತ್ತೊಲೆ
ಇದರಂತೆ ನಾಲ್ಕು ಬೋನ್ ಜೊತೆಗೆ ತುಮಕೂರು ಕೇಜ್ ಅಳವಡಿಕೆ ಮಾಡಿದ್ದಾರೆ. ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ರ ಚಿರತೆ ಚಲನವಲನ ಪತ್ತೆಗೆ ಕ್ರಮ ವಹಿಸಲಾಗಿದೆ. ಎಂಎಂ ಹಿಲ್ಸ್ ಹಾಗೂ ಕಾವೇರಿ ವನ್ಯಧಾಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಹನೂರು ತಾಲೂಕಿನ ತಾಳುಬೆಟ್ಟ-ಕೋಣನಕೆರೆ ಮಾರ್ಗದಲ್ಲಿ ಆಟೋ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಚಾಲಕ ಯಶಸ್, ಆಟೋದಲ್ಲಿದ್ದ ಅರುಣ್ ಮತ್ತು ವಪ್ಪನ್ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ಹಾನಿಗೊಳಗಾಗಿದೆ. ಈ ಪ್ರದೇಶದಲ್ಲಿ ರಸ್ತೆಗಳು ಬೆಟ್ಟದ ತಿರುವುಗಳು ಮತ್ತು ಹೆಚ್ಚು ಜಾರುವಿಕೆ ಇರುವುದರಿಂದ ಅಪಘಾತಗಳು ಸಂಭವಿಸುತ್ತವೆ. ಇತ್ತೀಚೆಗಷ್ಟ ಈ ಮಾರ್ಗದಲ್ಲಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
Bangalore [Bangalore],Bangalore,Karnataka













