Last Updated:
ಜುಲೈ 29 ರಂದು ಬೆಂಗಳೂರಿನ ಹೆಬ್ಬಾಳ ವಿಭಾಗದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಕಾರಣ.
ಬೆಂಗಳೂರು ಜನತೆಗೆ ಬೆಸ್ಕಾಂ (Bescom) ಕಡೆಯಿಂದ ಒಂದು ಪ್ರಮುಖ ಮತ್ತು ತುರ್ತು ಎಚ್ಚರಿಕೆ ನೀಡಲಾಗಿದೆ. ಜುಲೈ 29 ರಂದು ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು (Publics) ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಮನವಿ ಮಾಡಲಾಗಿದೆ. ಕೆಪಿಟಿಸಿಎಲ್ (KPTCL) ವತಿಯಿಂದ ಕೈಗೊಳ್ಳಲಾಗುತ್ತಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಈ ಪವರ್ ಕಟ್ (Power Cut) ಇರಲಿದೆ.
ದಿನಾಂಕ: ಜುಲೈ 29
ಸಮಯ: ಬೆಳಿಗ್ಗೆ 11:00 ರಿಂದ ಸಂಜೆ 5:00 ರವರೆಗೆ (ಪೂರ್ಣ 6 ಗಂಟೆಗಳ ಕಾಲ ವಿದ್ಯುತ್ ಸಂಪರ್ಕವಿರುವುದಿಲ್ಲ)
ನಿಮ್ಮ ಮನೆ ಅಥವಾ ಕಚೇರಿ ಈ ಕೆಳಗಿನ ಪ್ರದೇಶಗಳ ವ್ಯಾಪ್ತಿಯಲ್ಲಿದ್ದರೆ, ಇಂದೇ ನಿಮ್ಮ ಮೊಬೈಲ್ ಚಾಜಿರ್ಂಗ್, ನೀರಿನ ಸಂಗ್ರಹ ಹಾಗೂ ಇತ್ಯಾದಿ ಕೆಲಸಗಳನ್ನು ಮುಗಿಸಿಟ್ಟುಕೊಳ್ಳುವುದು ಉತ್ತಮ.
ಈ ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ ಉಂಟಾಗಬಹುದಾದ ಅನಾನುಕೂಲತೆಗಾಗಿ ಬೆಸ್ಕಾಂ ವಿಷಾದಿಸಿದೆ. ಸಾರ್ವಜನಿಕರು ಈ ಅವಧಿಗೆ ಮುಂಚಿತವಾಗಿ ತಮ್ಮ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವ ಮೂಲಕ ಸಹಕರಿಸಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಕೋರಲಾಗಿದೆ.
Bangalore,Karnataka














