Last Updated:
ಬೆಂಗಳೂರಿನ ನ್ಯೂ ಕುಮಾರಕೃಪ ಸ್ಟೇಟ್ ಗೆಸ್ಟ್ ಹೌಸ್ ಹೆಸರಿನಲ್ಲಿ ಸೈಬರ್ ವಂಚನೆ. ನಕಲಿ ವೆಬ್ಸೈಟ್ ಮೂಲಕ ಆನ್ಲೈನ್ ರೂಮ್ ಬುಕಿಂಗ್ ವಂಚನೆ. ಐಟಿ ಕಾಯ್ದೆ ಅಡಿ ಪ್ರಕರಣ ದಾಖಲು.
ಬೆಂಗಳೂರಿನಲ್ಲಿ (Bengaluru) ಸೈಬರ್ ವಂಚಕರ (Cyber Fraudsters) ಜಾಲ ದಿನದಿಂದ ದಿನಕ್ಕೆ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದು, ಈಗ ನೇರವಾಗಿ ಪ್ರಸಿದ್ಧ ನ್ಯೂ ಕುಮಾರಕೃಪ ಸ್ಟೇಟ್ ಗೆಸ್ಟ್ ಹೌಸ್ (New Kumara Krupa State Guest House) ಹೆಸರನ್ನೇ ಬಳಸಿ ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆನ್ಲೈನ್ (Online) ರೂಮ್ ಬುಕಿಂಗ್ ಹೆಸರಿನಲ್ಲಿ ಮುಗ್ಧ ಗ್ರಾಹಕರನ್ನು ಟಾರ್ಗೆಟ್ ಮಾಡುತ್ತಿರುವ ವಂಚಕರಿಂದ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
ಗೆಸ್ಟ್ ಹೌಸ್ನ ಹಿರಿಯ ವ್ಯವಸ್ಥಾಪಕರಾದ ಕಾರ್ತಿಕ್ ಸಂತೋಷ್ ಅವರು ನೀಡಿರುವ ದೂರಿನ ಪ್ರಕಾರ, ಹಲವು ಗ್ರಾಹಕರು ನಮಗೆ ನಕಲಿ ವೆಬ್ಸೈಟ್ ಮೂಲಕ ಬುಕಿಂಗ್ ಕನ್ಫರ್ಮೇಷನ್ ಬಂದಿದೆ ಎಂದು ತಿಳಿಸಿದ ಮೇಲೆಯೇ ಈ ಸಂಪೂರ್ಣ ಹಗರಣ ಹೊರಬಂದಿದೆ.
ಈ ಘಟನೆಯ ಬಳಿಕ ಎಚ್ಚೆತ್ತುಕೊಂಡ ಗೆಸ್ಟ್ ಹೌಸ್ ಮ್ಯಾನೇಜ್ಮೆಂಟ್, ಈ ನಕಲಿ ವೆಬ್ಸೈಟ್ಗೂಮತ್ತು ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಯಾವುದೇ ಆನ್ಲೈನ್ ಬುಕಿಂಗ್ ಮಾಡುವ ಮುನ್ನ ಗ್ರಾಹಕರು ಸರಿಯಾಗಿ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.
Bangalore,Karnataka
Jul 28, 2026 10:00 AM IST














