ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗುಡ್‍ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನಮ್ಮ ಮೆಟ್ರೋ ಹಳದಿ ಮಾರ್ಗ


Last Updated:

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 15ನೇ ರೈಲಿನ 6 ಬೋಗಿಗಳು ಹೆಬ್ಬಗೋಡಿ ಡಿಪೋಗೆ ಸೇರ್ಪಡೆ. ಪ್ರಯಾಣಿಕರ ಕಾಯುವ ಸಮಯ ಕಡಿತಗೊಳ್ಳುವ ನಿರೀಕ್ಷೆ.

ನಮ್ಮ ಮೆಟ್ರೋ ಹಳದಿ ಮಾರ್ಗ
ನಮ್ಮ ಮೆಟ್ರೋ ಹಳದಿ ಮಾರ್ಗ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಸಿಹಿಸುದ್ದಿ. ನಮ್ಮ ಮೆಟ್ರೋದ ಹಳದಿ ಮಾರ್ಗದ (Yellow Line) ವಾಣಿಜ್ಯ ಸಂಚಾರವು ಒಂದು ವರ್ಷ ಪೂರೈಸುತ್ತಿರುವ ಹೆಮ್ಮೆಯ ಹೊತ್ತಿನಲ್ಲೇ, ಪ್ರಯಾಣಿಕರಿಗೆ (Passengers) ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ 19.75 ಕಿಲೋಮೀಟರ್ ಉದ್ದದ ಈ ಮಾರ್ಗಕ್ಕೆ ಅಗತ್ಯವಿರುವ ಹೊಸ ರೈಲುಗಳ (New Trains) ಆಗಮನ ಜೋರಾಗಿದ್ದು, ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ.

15ನೇ ರೈಲಿನ 6 ಬೋಗಿಗಳು ಹೆಬ್ಬಗೋಡಿ ಡಿಪೋಗೆ ಸೇರ್ಪಡೆ

ಸೋಮವಾರದಂದು ಹಳದಿ ಮಾರ್ಗಕ್ಕೆ 15ನೇ ರೈಲಿನ 6 ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪಿವೆ.

ಕೋಲ್ಕೊತ್ತಾದ ತೀತಾಘರ್ ರೈಲ್ ಸಿಸ್ಟಂ (ಟಿಆರ್‍ಎಸ್‍ಎಲ್) ಈ ರೈಲನ್ನು ಪೂರೈಸಿದ್ದು, ಇದನ್ನು ಇನ್‍ಸ್ಪೆಕ್ಷನ್ ಬೇ ಲೈನ್‍ನಲ್ಲಿ ಜೋಡಿಸಿಕೊಳ್ಳಲಾಗುತ್ತದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ವಿವಿಧ ತಪಾಸಣೆಗಳನ್ನು ಮುಗಿಸಿ ಸುಮಾರು 750 ಕಿ.ಮೀ. ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕವಷ್ಟೇ ವಾಣಿಜ್ಯ ಸಂಚಾರಕ್ಕೆ ಇದು ಬಳಕೆಯಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಯುವ ಸಮಯ ಕಡಿತ ಹಾಗೂ ಸಂಚಾರದ ವಿವರ

ಈಗಾಗಲೇ ಜುಲೈ 17ರಂದು 14ನೇ ರೈಲು ಬಂದಿದ್ದು, ಇವೆರಡರ ಪರೀಕ್ಷೆ ಹಾಗೂ ಪ್ರಮಾಣೀಕರಣಗಳು ಯಶಸ್ವಿಯಾದರೆ ಆಗಸ್ಟ್ ಅಂತ್ಯದ ವೇಳೆಗೆ ಹಳದಿ ಮಾರ್ಗದಲ್ಲಿ ಒಟ್ಟು 13 ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಉಳಿದೆರಡು ರೈಲುಗಳನ್ನು ತುರ್ತು ಸಂದರ್ಭ ಹಾಗೂ ದುರಸ್ತಿಗೆ ಮೀಸಲಿಡಲಾಗುತ್ತದೆ.

ಪ್ರಸ್ತುತ ದಟ್ಟಣೆಯ ಸಮಯದಲ್ಲಿ 7 ನಿಮಿಷಕ್ಕೊಮ್ಮೆ ಹಾಗೂ ಸಾಮಾನ್ಯ ಸಮಯದಲ್ಲಿ 10 ನಿಮಿಷಕ್ಕೊಮ್ಮೆ ಲಭ್ಯವಿರುವ ಮೆಟ್ರೋ ಸೇವೆ, ಪೂರ್ಣ ಪ್ರಮಾಣದ ರೈಲುಗಳ ಲಭ್ಯತೆಯಿಂದಾಗಿ ಮುಮುಂದೆ ದಟ್ಟಣೆಯ ಅವಧಿಯಲ್ಲಿ ಕೇವಲ 5 ನಿಮಿಷಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed