Toxic Movie: ರಾಮಾಯಣ ಪ್ರಚಾರದಲ್ಲಿ ‘ಟಾಕ್ಸಿಕ್’ ಹವಾ; ವಿದೇಶಿ ಮೀಡಿಯಾಗಳಿಂದ ಇದರದ್ದೇ ಪ್ರಶ್ನೆ! | | ACTPnews

ರಾಮಾಯಣ ಪ್ರಚಾರದಲ್ಲಿ 'ಟಾಕ್ಸಿಕ್' ಹವಾ; ವಿದೇಶ ಮೀಡಿಯಾಗಳಿಂದ ಇದರದ್ದೇ ಪ್ರಶ್ನೆ!


Last Updated:

ಟಾಕ್ಸಿಕ್ ಚಿತ್ರ ಕ್ರೇಜ್ ದೊಡ್ಡಮಟ್ಟದಲ್ಲಿಯೇ ಇದೆ. ಅಮೆರಿಕಾದಲ್ಲೂ ಈ ಚಿತ್ರದ್ದೆ ಹವಾ ಇದೆ. ಇಲ್ಲಿಯ ಪತ್ರಕರ್ತರು ರಾಮಾಯಣ ಚಿತ್ರದ ಜೊತೆಗೆ ಟಾಕ್ಸಿಕ್ ಚಿತ್ರದ ಪ್ರಶ್ನೆಗಳನ್ನೆ ಹೆಚ್ಚು ಕೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಮಾಯಣ ಪ್ರಚಾರದಲ್ಲಿ 'ಟಾಕ್ಸಿಕ್' ಹವಾ; ವಿದೇಶ ಮೀಡಿಯಾಗಳಿಂದ ಇದರದ್ದೇ ಪ್ರಶ್ನೆ!
ರಾಮಾಯಣ ಪ್ರಚಾರದಲ್ಲಿ ‘ಟಾಕ್ಸಿಕ್’ ಹವಾ; ವಿದೇಶ ಮೀಡಿಯಾಗಳಿಂದ ಇದರದ್ದೇ ಪ್ರಶ್ನೆ!

ರಾಮಾಯಣ ಚಿತ್ರದ (Ramayana Movie) ಪ್ರಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ (Yash) ಅಮೆರಿಕಾ ದೇಶಕ್ಕೂ ಹೋಗಿದ್ದರು. ಅಲ್ಲಿ ನಡೆದ ಕಾಮಿಕ್ ಕಾನ್ -2026 ಅಲ್ಲಿ ಚಿತ್ರದ ಟ್ರೈರಲ್ ಪ್ರದರ್ಶನ ಆಗಿದೆ. ಸಿನಿಮಾದ ಕುರಿತು ಯಶ್ (Yash) ಮಾತನಾಡಿರೋದು ಇದೆ. ಆದರೆ, ಈ ಚಿತ್ರದ ಪ್ರಚಾರದ ಸಮಯದಲ್ಲಿ ವಿದೇಶಿ ಮೀಡಿಯಾ ಕೇಳಿದ ಪ್ರಶ್ನೆ ಇನ್ನೊಂದು ಇದೆ. ಅದೇನು ಗೊತ್ತಾ? ಹೌದು, ಇಲ್ಲಿಯ ಮೀಡಿಯಾಗಳು ಟಾಕ್ಸಿಕ್ ಚಿತ್ರದ (Toxic Movie) ಬಗ್ಗೇನೆ ಕೇಳಿದ್ದಾರೆ. ರಾಮಾಯಣ ಚಿತ್ರದ ಟ್ರೈಲರ್ ಪ್ರದರ್ಶನದ ಬಳಿಕ ಇಲ್ಲಿಯ ಭಾರತೀಯರು ಟಾಕ್ಸಿಕ್ ಚಿತ್ರದ ‘ಡ್ಯಾಡಿಸ್ ಹೋಮ್’ ಡೈಲಾಗ್ ಹೇಳಿಯೇ ಯಶ್‌ ಹೆಸರು ಕೂಗಿರೋದು ಇದೆ. ಆ ರೀತಿನೇ ಈ ಚಿತ್ರ ಅಮೆರಿಕಾದಲ್ಲಿ ಕ್ರೇಜ್ ಹುಟ್ಟುಹಾಕಿತ್ತು. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಬಗ್ಗೇನೆ ಪ್ರಶ್ನೆಗಳು

ಅಮೆರಿಕಾದಲ್ಲಿ ರಾಮಾಯಣ ಚಿತ್ರದ ಪ್ರಚಾರದ ವೇಳೆ ಟಾಕ್ಸಿಕ್ ಚಿತ್ರದ ಪ್ರಶ್ನೆಗಳು ಎದುರಾಗಿವೆ. ಈ ಪ್ರಶ್ನೆಗಳಿಗೂ ರಾಕಿಂಗ್ ಸ್ಟಾರ್ ಯಶ್ ಉತ್ತರ ಕೊಟ್ಟಿದ್ದಾರೆ.
rocking star yash talk about toxic at america comic con 2026

ಟಾಕ್ಸಿಕ್ ಬಗ್ಗೇನೆ ಪ್ರಶ್ನೆಗಳು

ಟಾಕ್ಸಿಕ್ ಚಿತ್ರ ಬಂದ್ಮೇಲೆ ಎಲ್ಲರೂ ಮಂತ್ರಮುಗ್ಧಗೊಳುತ್ತಾರೆ. ಆ ರೀತಿನೇ ಚಿತ್ರ ಮಾಡಿದ್ದೇವೆ. ಈ ಒಂದು ಚಿತ್ರದಲ್ಲಿ ಜೆ.ಜೆ.ಪೆರ್ರಿ ಸಾಹಸವು ಇದೆ. ಆದರೆ, ಈ ಸಾಹದ ಹಿಂದಿನ ಎಮೋಷನ್ಸ್‌ಗೆ ಅರ್ಥ ಕೂಡ ಇದೆ.

ನಾನು ಆ್ಯಕ್ಷನ್ ಪ್ರೇಮಿ

ಟಾಕ್ಸಿಕ್ ಚಿತ್ರದಲ್ಲಿ ಜೆ.ಜೆ.ಪೆರ್ರಿ ಆ್ಯಕ್ಷನ್ ಮಾಡಿದ್ದಾರೆ. ಇವರು ಆ್ಯಕ್ಷನ್ ಡೈರೆಕ್ಷನ್ ನೋಡ್ತಾನೇ ಕೂಡ್ತಾ ಇದ್ದೆ. ಮಾನಿಟರ್ ಅಲ್ಲೂ ಆ್ಯಕ್ಷನ್‌ಗಳನ್ನ ಸಿನಿಮಾ ನೋಡುವ ತರ ನೋಡ್ತಾನೇ ಕುಳಿತುಕೊಳ್ಳುತ್ತಿದ್ದೆ ಅಂತಲೂ ಯಶ್ ಹೇಳಿದ್ದಾರೆ.

ಆಗಸ್ಟ್-26 ರಂದು ರಿಲೀಸ್

ಆಗಸ್ಟ್-26 ರಂದು ನಮ್ಮ ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ಜನರಿಗೆ ಪಕ್ಕಾ ಇಷ್ಟ ಆಗುತ್ತದೆ. ಆ ರೀತಿನೇ ಚಿತ್ರ ಮಾಡಿದ್ದೇವೆ ಅಂತಲೂ ಯಶ್ ಹೇಳಿಕೊಂಡಿದ್ದಾರೆ.

rocking star yash talk about toxic at america comic con 2026

ಆಗಸ್ಟ್-26 ರಂದು ರಿಲೀಸ್

ಈ ಚಿತ್ರವನ್ನ ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿದ್ದಾರೆ. ಕತೆ ವಿಚಾರಕ್ಕೆ ಬಂದ್ರೆ ಗೀತು ಮೋಹನ್‌ದಾಸ್ ಹಾಗೂ ಯಶ್ ಒಟ್ಟಿಗೆ ಸೇರಿಯೇ ಈ ಕತೆ ಮಾಡಿದ್ದಾರೆ.

ಗೀತು ಪತಿ ಕ್ಯಾಮರಾಮನ್

ಟಾಕ್ಸಿಕ್ ಚಿತ್ರ ವಿಷ್ಯೂಲಿ ತುಂಬಾನೆ ಶ್ರೀಮಂತವಾಗಿಯೇ ಇದೆ. ಗೀತು ಮೋಹನ್‌ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

ಮನಮೋಹಕ ಹಾಡನ್ನ ಬೇರೆಯವರೇ ಕಂಪೋಸ್ ಮಾಡಿದ್ದಾರೆ. ಈ ಚಿತ್ರದ ಈ ಹಾಡುಗಳು ವೈರಲ್ ಆಗಿವೆ. ಟಾಕ್ಸಿಕ್ ಚಿತ್ರದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ. ಇದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed