Peddi Sudarshan Reddy: ಮಾಜಿ ಶಾಸಕನ ಜೀವ ಉಳಿಸಿದ ವೈದ್ಯೆ! 9 ಬಾರಿ ಸಿಪಿಆರ್, ಸತ್ತವನನ್ನು ಬದುಕಿಸಿದ ಲೇಡಿ ಡಾಕ್ಟರ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಜೀವ ಉಳಿಸಿದ ವೈದ್ಯೆ


Last Updated:

Peddi Sudarshan Reddy: ಅವರ ನಿವಾಸದಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರ ಕುಟುಂಬಸ್ಥರು ಸದಸ್ಯರು ತಕ್ಷಣ ಅವರನ್ನು ಪಟ್ಟಣದ ರೋಹಿಣಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬದುಕುವ ಯಾವುದೇ ಸಾಧ್ಯತೆ ಇಲ್ಲ ಅಂತ ವೈದ್ಯರು ಹೇಳಿದ್ರು. ಆದ್ರೆ ಅಷ್ಟರಲ್ಲಿ ಬಂದ ಡಾ. ಮಮತಾ ರೆಡ್ಡಿ ಎಂಬುವರು ಸತತ ಪ್ರಯತ್ನ ಮಾಡಿ, ಮಾಜಿ ಶಾಸಕರ ಜೀವ ಉಳಿಸಿದ್ದಾರೆ.

ಜೀವ ಉಳಿಸಿದ ವೈದ್ಯೆ
ಜೀವ ಉಳಿಸಿದ ವೈದ್ಯೆ

ಹನುಮಕೊಂಡ, ತೆಲಂಗಾಣ: ಬಿಆರ್‌ಎಸ್ (BRS) ಪಕ್ಷದ ಹಿರಿಯ ನಾಯಕ ಮತ್ತು ನರಸಂಪೇಟೆಯ ಮಾಜಿ ಶಾಸಕ (former Narasampete MLA) ಪೆದ್ದಿ ಸುದರ್ಶನ್ ರೆಡ್ಡಿ (Peddi Sudarshan Reddy) ಅವರಿಗೆ ಭಾನುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದೆ (Heart Attack) ಎಂದು ತಿಳಿದುಬಂದಿದೆ. ಹನುಮಕೊಂಡದಲ್ಲಿರುವ (Hanumakonda) ಅವರ ನಿವಾಸದಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರ ಕುಟುಂಬಸ್ಥರು ಸದಸ್ಯರು ತಕ್ಷಣ ಅವರನ್ನು ಪಟ್ಟಣದ ರೋಹಿಣಿ ಆಸ್ಪತ್ರೆಗೆ (Rohini Hospital) ಕರೆದೊಯ್ದರು. ಆದರೆ ಅವರು ಬದುಕುವ ಯಾವುದೇ ಸಾಧ್ಯತೆ ಇಲ್ಲ ಅಂತ ವೈದ್ಯರು ಹೇಳಿದ್ರು. ಆದ್ರೆ ಅಷ್ಟರಲ್ಲಿ ಬಂದ ಡಾ. ಮಮತಾ ರೆಡ್ಡಿ (Dr. Mamatha Reddy) ಎಂಬುವರು ಸತತ ಪ್ರಯತ್ನ ಮಾಡಿ, ಮಾಜಿ ಶಾಸಕರ ಜೀವ ಉಳಿಸಿದ್ದಾರೆ.

ಮಾಜಿ ಶಾಸಕರ ಸಾವಿನ ಬಗ್ಗೆ ಘೋಷಿಸಿದ್ದ ವೈದ್ಯರು

ಹೃದಯಾಘಾತದಿಂದ ಮಾಜಿ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರು ಈಗಾಗಲೇ ಪ್ರಜ್ಞಾಹೀನರಾಗಿದ್ದರು ಮತ್ತು ಚಿಕಿತ್ಸೆಗೆ ಸಹಕರಿಸದ ಕಾರಣ ಎಲ್ಲರೂ ಅವರು ಮೃತಪಟ್ಟಿದ್ದಾರೆಂದು ಭಾವಿಸಿದ್ದರು. ಅವರ ಸಾವಿನ ಸುದ್ದಿ ಪ್ರಮುಖ ಮಾಧ್ಯಮ ಚಾನೆಲ್‌ಗಳಲ್ಲಿಯೂ ವರದಿಯಾಗಿತ್ತು. ಆದಾಗ್ಯೂ, ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸಿ. ಮಮತಾ ರೆಡ್ಡಿ ಶ್ರಮಿಸಿ ಅವರ ಜೀವವನ್ನು ಉಳಿಸಿದರು.

9 ಬಾರಿ ಸಿಪಿಆರ್ ಮಾಡಿದ ಡಾ. ಮಮತಾ ರೆಡ್ಡಿ

ಡಾ. ಮಮತಾ ರೆಡ್ಡಿ ತಮ್ಮ ಪೇಶೆಂಟ್ ಆಗಿರೋ ಮಾಜಿ ಶಾಸಕರ ಜೀವ ಉಳಿಸಲೇಬೇಕು ಅಂತ ನಿರ್ಧಾರ ಮಾಡಿದ್ರು. ಅವರು ಸತತವಾಗಿ 9 ಬಾರಿ ಸಿಪಿಆರ್ (CPR stands for cardiopulmonary resuscitation) ಮಾಡಿ ಅವರ ಹೃದಯ ಬಡಿತವನ್ನು ಮತ್ತೆ ಹೆಚ್ಚಿಸಿದರು. ಈ ವೇಳೆ ಪೆದ್ದಿ ಸುದರ್ಶನ ರೆಡ್ಡಿ ಅವರು ಉಸಿರಾಡುಲು ತೊಡಗಿದ್ದಾರೆ. ಅವರ ಹೃದಯ ಬಡಿತ ಮತ್ತೆ ಶುರುವಾಯ್ತಂತೆ. ಬಳಿಕ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.

ಡಾ. ಮಮತಾ ರೆಡ್ಡಿ ಕಾರ್ಯಕ್ಕೆ ಮಾಜಿ ಸಚಿವ ಶ್ಲಾಘನೆ

ಪೆದ್ದಿ ಸುದರ್ಶನ ರೆಡ್ಡಿ ಅವರ ಜೀವವನ್ನು ಉಳಿಸಲು ಡಾ. ಮಮತಾ ರೆಡ್ಡಿ ಮಾಡಿದ ಪ್ರಯತ್ನಕ್ಕಾಗಿ ಮಾಜಿ ಸಚಿವ ಹರೀಶ್ ರಾವ್ ವೈದ್ಯೆಯನ್ನು ವಿಶೇಷವಾಗಿ ಅಭಿನಂದಿಸಿದರು. ಈ ಬಗ್ಗೆ ಟ್ವೀಟ್ ಮಾಡಿ ಅವರು ಟ್ವೀಟ್ ಮಾಡಿದ್ದಾರೆ. ವೈದ್ಯೆಯ ಕಾರ್ಯಕ್ಷಮತೆಗೆ ಸಾರ್ವಜನಿಕರೂ ಕೂಡ ಅಭಿನಂದಿಸಿದ್ದಾರೆ.

ಈ ಹಿಂದೆ ಮಾಜಿ ಶಾಸಕರ ಜೀವ ಉಳಿಸಿದ್ದ ವೈದ್ಯೆ

ಅಂದಹಾಗೆ ಮಮತಾ ರೆಡ್ಡಿ ಈ ರೀತಿ ಜೀವ ಉಳಿಸಿದ್ದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಮಾಜಿ ಶಾಸಕರೊಬ್ಬರ ಜೀವವನ್ನು ಈ ರೀತಿ ಉಳಿಸಿದ್ದರು. ಅವರು 11 ಬಾರಿ ಸಿಪಿಆರ್ ಮಾಡಿ ಅವರ ಜೀವವನ್ನು ಉಳಿಸಿದರು. ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ರಾಜ್ಯ ನಾಯಕ ಮತ್ತು ವಾರಂಗಲ್ ಪಶ್ಚಿಮದ ಮಾಜಿ ಶಾಸಕ ಮಾರ್ತಿನೇನಿ ಧರ್ಮ ರಾವ್ ಅವರಿಗೆ ಹೃದಯಾಘಾತವಾಯಿತು. ಅವರನ್ನು ತಕ್ಷಣ ಹನುಮಕೊಂಡದ ರೋಹಿಣಿ ಆಸ್ಪತ್ರೆಗೆ ದಾಖಲಿಸಲಾಯಿತು.

11 ಬಾರಿ ಸಿಪಿಆರ್ ಮಾಡಿ ಜೀವ ಉಳಿಸಿದ್ದ ಡಾಕ್ಟರ್

ಧರ್ಮ ರಾವ್ ಅವರ ಹೃದಯ ಅದಾಗಾಗಲೇ ನಿಂತುಹೋಗಿತ್ತು. ಆದರೆ ಡಾ. ಮಮತಾ ರೆಡ್ಡಿ 11 ಬಾರಿ ಸಿಪಿಆರ್ ಮಾಡಿ ಅವರ ಜೀವವನ್ನು ಉಳಿಸಿದ್ದರು. ಇದರೊಂದಿಗೆ, ಧರ್ಮ ರಾವ್ ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ವೈದ್ಯೆ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ

ಇನ್ನು ಡಾ. ಮಮತಾ ರೆಡ್ಡಿ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಬ್ಬ ವೈದ್ಯರು ಹೀಗಿರಬೇಕು. ಅವರನ್ನು ನಿಜವಾಗಿಯೂ ಜೀವಗಳನ್ನು ಉಳಿಸುವ ದೇವತೆ ಎಂದು ಹೊಗಳಲಾಗುತ್ತಿದೆ ಅಂತ ಸಮಯಂ ವೆಬ್‌ಸೈಟ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports