Last Updated:
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ನಟ ಧನುಷ್ ನೀಡಿದ ಕರೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೊಸ ಚರ್ಚೆಗೆ ಕಾರಣವಾಗಿದೆ.
ದಕ್ಷಿಣ ಭಾರತದ ಖ್ಯಾತ ನಟ ಧನುಷ್ (Actor Dhanush) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹೊಸ ಸಿನಿಮಾ ಅಥವಾ ರಾಷ್ಟ್ರ ಪ್ರಶಸ್ತಿಯ ಕುರಿತಾದ ವಿವಾದದಿಂದಲ್ಲ , ಬದಲಾಗಿ ರಾಜಕೀಯ ಪ್ರವೇಶದ ಕುರಿತ ಊಹಾಪೋಹಗಳಿಂದ ಅವರು ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ನಟ ನೀಡಿದ ಕರೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೊಸ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಧನುಷ್, ಅಭಿಮಾನಿಗಳು ಕೇವಲ ಸಿನಿಮಾ ಕಾರ್ಯಕ್ರಮಗಳು ಅಥವಾ ಆಡಿಯೋ ಬಿಡುಗಡೆ ಸಮಾರಂಭಗಳಿಗೆ ಮಾತ್ರ ಸೀಮಿತರಾಗಬಾರದು ಎಂದು ಹೇಳಿದರು. ಸಮಾಜಕ್ಕೆ ಉಪಯೋಗವಾಗುವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು.
ಜೊತೆಗೆ ನಿಮ್ಮ ಪ್ರದೇಶದ ಜನರಿಗೆ, ನೆರೆಯ ಕುಟುಂಬಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಸಮಾಜಕ್ಕಾಗಿ ನೀವು ಮಾಡುವ ಕೆಲಸವೇ ನನಗೆ ನಿಮ್ಮ ಬಗ್ಗೆ ಇನ್ನಷ್ಟು ಹೆಮ್ಮೆ ತರುತ್ತದೆ ಎಂದು ಧನುಷ್ ಅಭಿಮಾನಿಗಳಿಗೆ ಮನವಿ ಮಾಡಿದರು. ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಇನ್ನೂ ಕೆಲವರು, ತಮಿಳುನಾಡಿನ ರಾಜಕೀಯದಲ್ಲಿ ಹೊಸ ನಾಯಕತ್ವದ ಅಗತ್ಯವಿದ್ದು, ಧನುಷ್ ಅವರಂತಹ ವ್ಯಕ್ತಿತ್ವ ಹೊಂದಿರುವ ನಟ ರಾಜಕೀಯಕ್ಕೆ ಬಂದರೆ ಉತ್ತಮ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ ಇವುಗಳೆಲ್ಲವೂ ಊಹಾಪೋಹಗಳಾಗಿದ್ದು, ಧನುಷ್ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಇನ್ನು ಇದೇ ಕಾರ್ಯಕ್ರಮದ ಮಾತನಾಡಿದ ಧನುಷ್, 2024ರಲ್ಲಿ ಬಿಡುಗಡೆಯಾದ ತಮ್ಮ ನಿರ್ದೇಶನದ ರಾಯನ್ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರ ಪ್ರಶಸ್ತಿ ಲಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ಧನುಷ್, ರಾಯನ್‌ಗಿಂತ ಉತ್ತಮ ಸಿನಿಮಾಗಳು ಇದ್ದವು ಎನ್ನುವುದನ್ನು ತಾವು ಕೂಡ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಪ್ರಶಸ್ತಿ ಆಯ್ಕೆ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದುವುದು ಸಹಜ ಎಂದು ಹೇಳಿದ ಅವರು, ಸಿನಿಮಾ ಉತ್ತಮವಾಗಿರುವುದು ಮತ್ತು ಪ್ರಶಸ್ತಿ ಸಿಗುವುದು ಯಾವಾಗಲೂ ಒಂದೇ ಆಗುವುದಿಲ್ಲ ಎಂಬ ಅರ್ಥದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ವೇಳೆ ಧನುಷ್ ತಮ್ಮ ವೃತ್ತಿಜೀವನದ ಕೆಲವು ಪ್ರಮುಖ ಸಿನಿಮಾಗಳನ್ನು ನೆನಪಿಸಿಕೊಂಡರು. ಪುದುಪೇಟ್ಟೈ, ವಡಾ ಚೆನ್ನೈ, ಕರ್ಣನ್ ಹಾಗೂ ಮರಿಯನ್ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕಿತ್ತು ಎಂದು ಅನೇಕ ಅಭಿಮಾನಿಗಳು ಆಗ ಅಭಿಪ್ರಾಯಪಟ್ಟಿದ್ದರು. ಆದರೆ ಆ ಚಿತ್ರಗಳಿಗೆ ಪ್ರಶಸ್ತಿ ದೊರೆಯದಿದ್ದರೂ ಅಷ್ಟು ದೊಡ್ಡ ಮಟ್ಟದ ಚರ್ಚೆ ನಡೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
Bangalore [Bangalore],Bangalore,Karnataka














