The Traitors Season 2: ಮತ್ತೆ ಮೋಡಿ ಮಾಡಲು ಸಜ್ಜಾದ ಕರಣ್ ಜೋಹರ್; ಶೀಘ್ರದಲ್ಲೇ ಆರಂಭವಾಗಲಿದೆ ‘ದಿ ಟ್ರೇಟರ್ಸ್ 2’ | | ACTPnews

ಕರಣ್ ಜೋಹರ್ ಮತ್ತೆ ಬಂದರು; ದಿ ಟ್ರೇಟರ್ಸ್ ಸೀಸನ್ 2 ಶೀಘ್ರದಲ್ಲಿ ಶುರು!


Last Updated:

ಕರಣ್ ಜೋಹರ್ ಮತ್ತೆ ಬಂದಿದ್ದಾರೆ. ಪ್ರೈಮ್ ವಿಡಿಯೋದ ರಿಯಾಲಿಟಿ ಶೋ ಮತ್ತೊಮ್ಮೆ ನಿರೂಪಿಸುತ್ತಿದ್ದಾರೆ. ಈ ಸಲವೂ ಈ ದಿ ಟ್ರೇಟರ್ಸ್ ಸೀಸನ್-2 ಸಖತ್ ಆಗಿಯೇ ಇರಲಿದೆ. ಇದರ ಅಧಿಕೃತ ಸ್ಟ್ರೀಮಿಂಗ್ ಮಾಹಿತಿ ಇಲ್ಲಿದೆ ಓದಿ.

ಕರಣ್ ಜೋಹರ್ ಮತ್ತೆ ಬಂದರು; ದಿ ಟ್ರೇಟರ್ಸ್ ಸೀಸನ್ 2 ಶೀಘ್ರದಲ್ಲಿ ಶುರು!
ಕರಣ್ ಜೋಹರ್ ಮತ್ತೆ ಬಂದರು; ದಿ ಟ್ರೇಟರ್ಸ್ ಸೀಸನ್ 2 ಶೀಘ್ರದಲ್ಲಿ ಶುರು!

ಕರಣ್ ಜೋಹರ್ (Karan Johar) ಮತ್ತೆ ಬಂದಿದ್ದಾರೆ. ದಿ ಟ್ರೇಟರ್ಸ್ ಸೀಸನ್-2 (The Traitors Season 2) ಜೊತೆಗೆ ಬರ್ತಿದ್ದಾರೆ. ಈ ಸಲವೂ ಇವರು ಸಖತ್ ಆಗಿಯೇ ಆಡಿಸಲಿದ್ದಾರೆ. ಮನಸ್ಸು ಮತ್ತು ಭಾವನೆಗಳ ಆಟ ಇದಾಗಿದೆ. ಇದರಲ್ಲಿ ಈ ಸಲವು 21 ಜನ ಸ್ಪರ್ಧಿಗಳು ಇರ್ತಾರೆ. ಯಾರೆಲ್ಲ ಇರ್ತಾರೆ ಅನ್ನುವ ಕುತೂಹಲವು ಇದೆ. ಅದಕ್ಕೂ ಮೊದಲೇ ಈ ಒಂದು ಶೋನ ಸ್ಟ್ರೀಮಿಂಗ್ ಡೇಟ್ ಅನೌನ್ಸ್ (Streaming Date Announce) ಆಗಿದೆ. ಒಟಿಟಿ ಪ್ರೈಮ್ ವಿಡಿಯೋದಲ್ಲಿ (Prime Video) ಪ್ರಸಾರ ಆಗುತ್ತಿರೋ ಈ ವಿಭಿನ್ನ ರಿಯಾಲಿಟಿ ಶೋದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಇದು ಯಾವಾಗಿನಿಂದ ಸ್ಟ್ರೀಮಿಂಗ್

ದಿ ಟ್ರೇಟರ್ಸ್ ಸೀಸನ್ 2 ಮತ್ತೊಮ್ಮೆ ಶುರು ಆಗುತ್ತಿದೆ. 21 ಜನ ಹೊಸ ಸ್ಪರ್ಧಿಗಳು ಮತ್ತೆ ಆಟವಾಡಲಿದ್ದಾರೆ. ಈ ಸಲ ಯಾರು ಇರ್ತಾರೆ ಅನ್ನುವ ಕುತೂಹಲವೂ ಇದೆ.

Karan Johar The Traitors Season 2 Streaming Official Announcement

ಮೊದಲ ಸೀಸನ್ ಸೂಪರ್
ಆದರೆ, ಈ ಶೋದ ನಿರೂಪಕ ಅಂತ ಬಂದ್ರೆ ಅದು ಕರಣ್ ಜೋಹರ್ ಅವರೇ ಇರ್ತಾರೆ. ಅವರೇ ಈ ಒಂದು ಆಟವನ್ನ ಆಡಿಸುತ್ತಿದ್ದಾರೆ. ಮನಸ್ಸು ಮತ್ತು ಭಾವನೆಗಳ ಈ ಆಟದಲ್ಲಿ ಪರಸ್ಪರ ಮೋಸ ಪಕ್ಕಾ ಇದೆ. ಆದರೆ, ಇವರೆಲ್ಲರಿಗೂ ಮೋಸ ಆಗೋದು ಕಟ್ಟಿಟ್ಟ ಬುತ್ತಿನೇ ಬಿಡಿ.
ಕರಣ್ ಜೋಹರ್ ಪ್ರೋಮೋ ರಿಲೀಸ್

ಈ ಒಂದು ಶೋದ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಈ ಸಲ ಆಟ ಹೇಗೆ ಇರುತ್ತದೆ ಅನ್ನುವ ಮಾಹಿತಿ ಇದೆ. ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿರೋ ಕರಣ್ ಜೋಹರ್ ಆಟ ಹೇಗಿರುತ್ತದೆ ಅಂತ ಹೇಳಿದ್ದಾರೆ.

ಇಲ್ಲಿ ಪರಸ್ಪರ ಮೋಸ ಮಾಡ್ತಾನೇ ಇರ್ತಾರೆ. ಆದರೆ, ಇವರೆಲ್ಲರಿಗೂ ಮೋಸ ಪಕ್ಕಾ ಅನ್ನೋದನ್ನ ಕರಣ್ ಜೋಹರ್ ಇಲ್ಲಿ ಹೇಳಿದ್ದಾರೆ.

ಆಗಸ್ಟ್-13 ರಿಂದ ಸ್ಟ್ರೀಮಿಂಗ್

ಆಗಸ್ಟ್-13 ರಿಂದಲೇ ಈ ಒಂದು ಶೋ ಸ್ಟ್ರೀಮಿಂಗ್ ಆಗುತ್ತಿದೆ. ಪ್ರೈಮ್ ವಿಡಿಯೋದಲ್ಲಿಯೇ ಈ ಶೋ ಪ್ರಸಾರ ಅಗುತ್ತಿದೆ.

Karan Johar The Traitors Season 2 Streaming Official Announcement

ಆಗಸ್ಟ್-13 ರಿಂದ ಸ್ಟ್ರೀಮಿಂಗ್

ಈ ವಿಷಯವನ್ನ ಕರಣ್ ಜೋಹರ್ ನಿರೂಪಣೆಯ ಪ್ರೋಮೋದಲ್ಲಿಯೇ ಹೇಳಲಾಗಿದೆ. ಈ ಒಂದು ಶೋದಲ್ಲಿ ಬರೋಬ್ಬರಿ-21 ಜನ ಸ್ಪರ್ಧಿಗಳು ಇರ್ತಾರೆ. ಇವರ ಆಟದ ಪರಿನೇ ಬೇರೆ. ಆಟದ ನಿಯಮಗಳೂ ಬೇರೆನೇ ಅನ್ನೋದನ್ನ ಕರಣ್ ಜೋಹರ್ ವಿವರಿಸಿದ್ದಾರೆ.

ಮೊದಲ ಸೀಸನ್ ಸೂಪರ್

ದಿ ಟ್ರೇಟರ್ಸ್ ಸೀಸನ್-1 ಅದ್ಭುತವಾಗಿಯೇ ಬಂದಿತ್ತು. ಜನ ಇದನ್ನ ಅಷ್ಟೆ ಕುತೂಹಲದಿಂದಲೂ ನೋಡಿದರು. ಅಷ್ಟೆ ಪ್ರೀತಿ ತೋರಿಸಿದರು ಅನ್ನೋದನ್ನ ಈ ಸೀಸನ್ ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಹಾಗೆ ಈ ಎರಡನೇ ಸೀಸನ್ ಇನ್ನೂ ಭಯಂಕರವಾಗಿಯೇ ಇರುತ್ತದೆ. ಈ ಹಿಂದಿನ ಸೀಸನ್‌ ಅಲ್ಲಿ ಇದ್ದಂತೆ ಇಲ್ಲಿ ಏನೂ ಇರೋದಿಲ್ಲ. ಗೆಸ್ ವರ್ಕ್ ಮಾಡೋಕೆ ಚಾನ್ಸೆ ಇಲ್ಲ ಅನ್ನೋದನ್ನು ಕೂಡ ಈಗ ಹೆಚ್ಚು ಒತ್ತಿ ಹೇಳಲಾಗುತ್ತಿದೆ. ಇನ್ನುಳಿದಂತೆ ಆಗಸ್ಟ್-13 ರಿಂದ ಈ ಶೋ ಪ್ರಸಾರ ಆಗುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed