Karavali Movie Collection: ಕರಾವಳಿ ಚಿತ್ರದ ಬಾಕ್ಸ್ ಆಫೀಸ್ ಅಬ್ಬರ ಹೇಗಿದೆ? 3 ದಿನಕ್ಕೆ ಎಷ್ಟು ಕೋಟಿ ಕಲೆಕ್ಷನ್? | | ACTPnews

ಮೈಸೂರು ಮಂದಿಯ ಸೂಪರ್ ರೆಸ್ಪಾನ್ಸ್!


Last Updated:

ಕರಾವಳಿ ಚಿತ್ರದ ಕಲೆಕ್ಷನ್ ಹೇಗಿದೆ? ಮೂರು ದಿನಕ್ಕೆ ಎಷ್ಟು ಕಲೆಕ್ಷನ್ ಆಗಿದೆ? ರಾಜ್ ಬಿ ಶೆಟ್ಟಿ ಹಾಗೂ ಮಿತ್ರ ಕ್ರೇಜ್ ಹೇಗಿದೆ? ಇದರ ವಿವರ ಇಲ್ಲಿದೆ ಓದಿ?

ಕರಾವಳಿ ಚಿತ್ರದ ಬಾಕ್ಸ್ ಆಫೀಸ್ ಅಬ್ಬರ ಹೇಗಿದೆ?
ಕರಾವಳಿ ಚಿತ್ರದ ಬಾಕ್ಸ್ ಆಫೀಸ್ ಅಬ್ಬರ ಹೇಗಿದೆ?

ಕರಾವಳಿ ಚಿತ್ರ (Karavali Movie) ರಿಲೀಸ್ ಆಗಿ ಮೂರು ದಿನ (3 Days) ಆಗಿದೆ. ಈ ಮೂರು ದಿನಗಳಲ್ಲಿ ಇದರ ಕಲೆಕ್ಷನ್ ಚೆನ್ನಾಗಿ ಆಗಿದೆ ಅನ್ನುವ ಮಾತು ಕೇಳಿ ಬರ್ತಿದೆ. ಈ ಸಿನಿಮಾ (Movie) ಮೊದಲ ದಿನವೂ ಒಳ್ಳೆ ಕಲೆಕ್ಷನ್ (Collection) ಮಾಡಿದೆ. ಎರಡನೇ ದಿನವೂ ಗುಡ್ ಅನ್ನುವ ಅಭಿಪ್ರಾಯ ಬರ್ತಿವೆ. ಮೂರನೇ ದಿನ ಭಾನುವಾರ ಈ ಚಿತ್ರದ ಕಲೆಕ್ಷನ್ ಜೋರಾಗಿದೆ ಅನ್ನುವ ಮಾಹಿತಿನೂ ಇದೆ. ಸೋಮವಾರ ಈ ಚಿತ್ರದ ಕಲೆಕ್ಷನ್ ಹೇಗಿರುತ್ತದೆ ಅನ್ನುವ ಕುತೂಹಲವು ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಕರಾವಳಿ ಭರ್ಜರಿ ಕಲೆಕ್ಷನ್

ಕರಾವಳಿ ಚಿತ್ರದ ಕಲೆಕ್ಷನ್ ಭರ್ಜರಿ ಆಗಿಯೇ ಇದೆ. ಮೊದಲ ದಿನ ಇದು ಒಂದು ಕೋಟಿ ಸಮೀಪ ಕಲೆಕ್ಷನ್ ಮಾಡಿದೆ ಅನ್ನುವ ಮಾಹಿತಿ ಸಿಗುತ್ತದೆ.
prajwal devaraj raj b shetty karavali film box office collection details

3 ದಿನಕ್ಕೆ ಎಷ್ಟು ಕೋಟಿ ಕಲೆಕ್ಷನ್?

(ಚಿತ್ರ ಕೃಪೆ: ರಾಗಿಣಿ ಪ್ರಜ್ವಲ್ ಇನ್‌ಸ್ಟಾಗ್ರಾಮ್)

ಆದರೆ, ಎರಡೇ ದಿನ ಅಂತ ಬಂದಾಗ ಈ ಚಿತ್ರ 1.5 ಕೋಟಿ ಕಲೆಕ್ಷನ್ ಮಾಡಿದೆ ಅಂತಲೂ ಮಾಹಿತಿ ಸಿಗುತ್ತದೆ. ಮೂರನೇ ದಿನ ಭಾನುವಾರ ಈ ಚಿತ್ರದ ಕಲೆಕ್ಷನ್ ಜೋರಾಗಿಯೇ ಅನ್ನುವ ಸುದ್ದಿನೇ ಇವೆ.

ಮೂರು ದಿನಕ್ಕೆ ಮೂರು ಕೋಟಿ

ಈ ಒಂದು ಸುದ್ದಿನೂ ಇದೆ. ಮೂರು ದಿನಕ್ಕೆ 3 ಕೋಟಿ ಕಲೆಕ್ಷನ್ ಮಾಡಿದೆ ಅನ್ನುವ ಮಾಹಿತಿನೂ ಸಿಗುತ್ತದೆ.

ಈ ಚಿತ್ರದಲ್ಲಿ ಕರಾವಳಿ ಕಂಬಳ ಕತೆನೂ ಇದೆ. ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅನೇಕರಿಗೆ ಇಷ್ಟ ಆಗಿದೆ. ಹಾಗಾಗಿಯೇ ಈ ಚಿತ್ರದ ಶೋಗಳು ಶನಿವಾರ ಕರಾವಳಿ ಕಡೆಗೆ ಹೌಸ್ ಫುಲ್ ಕೂಡ ಆಗಿವೆ.

ಭಾನುವಾರ ಬಲು ಜೋರು

ಭಾನುವಾರ ಈ ಚಿತ್ರದ ಕಲೆಕ್ಷನ್ ಜೋರಾಗಿದೆ. ಶೋಗಳು ಫುಲ್ ಆಗಿವೆ. ಬೆಂಗಳೂರಿನಲ್ಲೂ ಭಾನುವಾರದ ಶೋಗಳು ಹೌಸ್‌ಫುಲ್ ಆಗಿವೆ.

prajwal devaraj raj b shetty karavali film box office collection details

ಕರಾವಳಿ ಭರ್ಜರಿ ಕಲೆಕ್ಷನ್

ಈ ಕಾರಣಕ್ಕೆ ಈ ಚಿತ್ರದ ಮೂರನೇ ದಿನದ ಕಲೆಕ್ಷನ್ ತುಂಬಾನೆ ಚೆನ್ನಾಗಿ ಆಗಿದೆ. ಹಾಗಾಗಿಯೇ ಈ ಚಿತ್ರದ ಮೂರು ದಿನದ ಕಲೆಕ್ಷನ್ 3 ಕೋಟಿ ದಾಟಿ ಹೋಗಿದೆ ಅನ್ನುವ ಅಂದಾಜು ಇದೆ.

ಜುಲೈ-24 ರಂದು ರಿಲೀಸ್

ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗಿದೆ. 175 ಥಿಯೇಟರ್ ಅಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ರಿಲೀಸ್ ಆದ ಎರಡನೇ ದಿನಕ್ಕೆ ಸ್ಕ್ರೀನ್‌ಗಳ ಸಂಖ್ಯೆ 25 ದಾಟಿದೆ.

ರಾಜ್ ಬಿ ಶೆಟ್ಟಿ ಕ್ರೇಜ್ ಜೋರಾಗಿಯೇ ಇದೆ. ಈ ಚಿತ್ರದಲ್ಲಿ ಮಹಾವೀರ ಅನ್ನುವ ರೋಲ್ ಅನ್ನ ರಾಜ್ ಬಿ ಶೆಟ್ಟಿ ಮಾಡಿದ್ದಾರೆ. ಈ ಒಂದು ಪಾತ್ರವನ್ನ ಜನ ತುಂಬಾನೆ ಇಷ್ಟಪಟ್ಟಿದ್ದಾರೆ. ಈ ಪಾತ್ರ ತೆರೆ ಮೇಲೆ ಬಂದಾಗ ಸಿಗುವ ಖುಷಿನೇ ಬೇರೆ ಅಂತ ಹೇಳಿ ಹೋಗಿದ್ದಾರೆ.

‘ಮಹಾಬಲ’ ಮಿತ್ರನ ಅಬ್ಬರ

ಹಾಸ್ಯ ನಟ ಮಿತ್ರ ಈ ಚಿತ್ರದಲ್ಲಿ ಮಹಾಬಲ ಅನ್ನುವ ರೋಲ್ ಮಾಡಿದ್ದಾರೆ. ಇದು ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಚಿತ್ರದಲ್ಲಿ ಮಹಾವೀರ ಬಿಟ್ಟರೆ ಮಹಾಬಲ ಅನ್ನುವ ಹಾಗೇನೆ ಜನ ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಪಾತ್ರವನ್ನು ಮೆಚ್ಚಿಕೊಂಡಿರೋರು ಇದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಮಹಾವೀರ ಮತ್ತು ಮಹಾಬಲನ ಪಾತ್ರದ ಕುರಿತು ಮಾತನಾಡುತ್ತಿದ್ದಾರೆ. ಚಿತ್ರದ ಡೈರೆಕ್ಟರ್ ಗುರುದತ್ತ ಗಾಣಿಗ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed