Last Updated:
ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗಿದೆ. ಡೈರೆಕ್ಟರ್ ಅನೂಪ್ ಭಂಡಾರಿ ಈಗೊಂದು ಫೋಟೋ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಬಿಲ್ ರಂಗ ಬಾಷಾ ಚಿತ್ರದ (Billa Ranga Baasha Movie) ಶೂಟಿಂಗ್ (Shooting) ಮತ್ತೆ ಶುರು ಆಗಿದೆ. ಬೆಂಗಳೂರಿನ ಕನಕಪುರ ಸಮೀಪದಲ್ಲಿಯೇ ಚಿತ್ರೀಕರಣ ನಡೀತಿದೆ. ಈ ಚಿತ್ರದ ನಿರೀಕ್ಷೆನೂ ದೊಡ್ಡಮಟ್ಟದಲ್ಲಿಯೇ ಇದೆ. ಚಿತ್ರ ನಿಂತೇ ಹೋಯಿತು ಅನ್ನುವ ಸುದ್ದಿನೂ ಇತ್ತು. ಆದರೆ, ಅದು ಸುಳ್ಳಾಗಿದೆ. ಈ ಒಂದು ಚಿತ್ರದ ಶೂಟಿಂಗ್ನ (Movie Shooting) ನಡುವೆ ಡೈರೆಕ್ಟರ್ ಅನೂಪ್ ಭಂಡಾರಿ (Anup Bhandari) ಒಂದು ಫೋಟೋ ತೆಗೆದುಕೊಂಡಿದ್ದಾರೆ. ಅದು ಚಿತ್ರದ ಒಂದು ಪ್ರಮುಖ ಸಿಂಬಲ್ ಆಗಿದೆ. ಇದನ್ನ ನೋಡಿದ ಸುದೀಪ್ ಫ್ಯಾನ್ಸ್ ತುಂಬಾನೆ ಒಳ್ಳೆ ಒಳ್ಳೆ ಮಾತುಗಳನ್ನೆ ಕಾಮೆಂಟ್ ಬಾಕ್ಸ್ ಅಲ್ಲಿ ಹಾಕಿದ್ದಾರೆ. ಈ ಎಲ್ಲದ ರ ಒಂದು ಸ್ಟೋರಿ ಇಲ್ಲಿದೆ ಓದಿ.
ಬಿಲ್ಲ ರಂಗ ಬಾಷಾ ಚಿತ್ರದ ಒಂದು ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ. ಇದು ಸುದೀಪ್ ಫೋಟೋ ಏನು ಅಲ್ಲ ಬಿಡಿ. ಈಗಾಗಲೆ ಹೇಳಿದಂತೆ ಇದು ಚಿತ್ರದಲ್ಲಿ ಬಳಕೆ ಆಗಿರೋ ಸಿಂಪಬಲ್ ಒಂದರ ಫೋಟೋನೇ ಆಗಿದೆ.
ಬಿಲ್ ರಂಗ ಬಾಷಾ ಚಿತ್ರ
(ಚಿತ್ರ ಕೃಪೆ: ಅನೂಪ್ ಭಂಡಾರಿ ಇನ್ಸ್ಟಾಗ್ರಾಮ್)
ಕಿಚ್ಚನ ಫ್ಯಾನ್ಸ್ ಕಾಂಪ್ಲಿಮೆಂಟ್ಸ್
– This one still is enough to RULE the Internet
– Box office be careful big blast is coming soon
– Waiting for boss look
– ಅದಷ್ಟು ಬೇಗ ಬರ್ಲಿ
ಈ ಒಂದು ಫೋಟೋವನ್ನ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ಶೇರ್ ಮಾಡಿದ್ದಾರೆ. ಈ ಮೂಲಕ ಚಿತ್ರದ ಕೆಲಸ ಶುರು ಆಗಿದೆ ಅಂತಲೂ ಹೇಳಿದ್ದಾರೆ.
ಕಿಚ್ಚನ ‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಶುರು ಆಗಿ 1 ತಿಂಗಳು
(ಚಿತ್ರ ಕೃಪೆ: ಅನೂಪ್ ಭಂಡಾರಿ ಇನ್ಸ್ಟಾಗ್ರಾಮ್)
ಬಿಲ್ಲ ರಂಗ ಬಾಷಾ ಚಿತ್ರ ನಿಂತೇ ಹೋಯಿತು ಅಂದವರೇ ಹೆಚ್ಚು. ಆದರೆ, ಕಿಚ್ಚ ಸುದೀಪ್ ಹೇಳಿದ್ದರು. ನಮ್ಮ ಚಿತ್ರದ ಶೂಟಿಂಗ್ ಆದಷ್ಟು ಬೇಗ ಶುರು ಆಗುತ್ತದೆ ಅಂತ ಹೇಳಿದ್ದರು.
ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗಿದೆ. ಬೆಂಗಳೂರಿನಿಂದ ದೂರವೇ ಇರೋ ಕನಕಪುರ ರಸ್ತೆ ಸಮೀಪದಲ್ಲಿಯೇ ಈ ಚಿತ್ರದ ಶೂಟಿಂಗ್ ಶುರು ಆಗಿದೆ.
ಜೂನ್-26 ರಿಂದಲೇ ಈ ಚಿತ್ರದ ಶೂಟಿಂಗ್ ಶುರು ಆಗಿದೆ. ಇದನ್ನ ಚಿತ್ರ ತಂಡವೇ ಹೇಳಿಕೊಂಡಿದೆ. ಆ ಪ್ರಕಾರ ಈಗ ಈ ಶೂಟಿಂಗ್ ಶುರು ಆಗಿ ಒಂದು ತಿಂಗಳು ಆಗಿದೆ.
ಈ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಅನೂಪ್ ಭಂಡಾರಿ ಜುಲೈ-26 ರಂದು ಸೆಟ್ನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಶೇರ್ ಮಾಡಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














