Last Updated:
ರಾಮಾಯಣ ಚಿತ್ರ ಎರಡು ಭಾಗದಲ್ಲಿ ಬರ್ತಿದೆ. ಮೊದಲ ಭಾಗದಲ್ಲಿ ಏನು ಇರುತ್ತದೆ. ಎರಡನೇ ಭಾಗದಲ್ಲಿ ಯಾವ ವಿಷಯ ಇರುತ್ತದೆ. ಈ ಎಲ್ಲದ ಒಂದಷ್ಟು ವಿವರ ಇಲ್ಲಿದೆ.
ರಾಮಾಯಣ (Ramayana) ಮೊದಲು ಟಿವಿಯಲ್ಲಿ ಬರ್ತಿತ್ತು. ಪ್ರತಿ ಭಾನುವಾರ ಪ್ರಸಾರ ಆಗುತ್ತಿತ್ತು. ರಮಾನಂದ್ ಸಾಗರ್ (Ramanand Sagar) ಅವರ ಈ ಸೀರಿಯಲ್ ಬರ್ತಿದೆ ಅಂತ ಗೊತ್ತಾದರೆ ಸಾಕು, ಟಿವಿ ಮುಂದೆ ಜನ ಕುಳಿತು ಬಿಡ್ತಾ ಇದ್ದರು. ಅಷ್ಟು ಜನರ ಮನದಲ್ಲಿ ಜಾಗ ಮಾಡಿಕೊಂಡ ಈ ರಾಮಾಯಣ (Ramayana) ಮಾನವೀಯತೆ ಪ್ರತೀಕವಾಗಿದೆ. ಸಂಬಂಧಗಳ ಗಟ್ಟಿ ಬಾಂಧ್ಯವದ ಕತೆ ಹೇಳುತ್ತದೆ. ನಮ್ಮೊಳಗಿನ ರಾಮ ಮತ್ತು ರಾವಣನನ್ನ (Ravana) ಇದು ಪ್ರತಿಬಿಂಬಿಸುತ್ತದೆ. ಅಂತಹ ಈ ರಾಮಾಯಣ ಮತ್ತೆ ಬರ್ತಿದೆ. ಆದರೆ, ಅದು ಸಿನಿಮಾ ರೂಪದಲ್ಲಿ ಅನ್ನೋದು ಗೊತ್ತೇ ಇದೆ. ಬಹು ಕೋಟಿ ವೆಚ್ಚದ ಈ ಚಿತ್ರ ಎರಡು ಭಾಗದಲ್ಲಿ ಬರ್ತಿದೆ. ಮೊದಲ ಭಾಗದಲ್ಲಿ ಏನು ಇರುತ್ತದೆ? ಎರಡನೇ ಭಾಗದಲ್ಲಿ ಮತ್ತೇನು ಇರುತ್ತದೆ? ಈ ಪ್ರಶ್ನೆಗೆ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಉತ್ತರ ಕೊಟ್ಟಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ.
ಮೊದಲ ಭಾಗದಲ್ಲಿ…
ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಇದರಲ್ಲಿ ತೊಡಗಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಚಿತ್ರದಲ್ಲಿ ರಾವಣನ ರೋಲ್ ಮಾಡಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಇದ್ದಾರೆ. ಸೀತಾ ಪಾತ್ರದಲ್ಲಿ ದಕ್ಷಿಣದ ಸುಂದರಿ ಸಾಯಿ ಪಲ್ಲವಿ ಅಭಿನಯಸಿದ್ದಾರೆ.
ರಾಮಾಯಣ ಚಿತ್ರದ ಮೊದಲ ಭಾಗದಲ್ಲಿ ಏನು ಇರುತ್ತದೆ. ಈ ಪ್ರಶ್ನೆ ಸಹಜವಾಗಿ ಇದೆ. ಕಾರಣ, ಈಗಾಗಲೇ ರಾಮಾಯಣವನ್ನ ಒಂದೇ ಭಾಗದಲ್ಲಿಯೇ ನೋಡಿದವರೇ ಇದ್ದಾರೆ. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಸಂಚಿಕೆ ರೂಪದಲ್ಲೂ ನೋಡಿದ್ದಾರೆ.
ಆದರೆ, ನಿತೇಶ್ ತಿವಾರಿ ಅವರು ಎರಡು ಭಾಗದಲ್ಲಿ ಈ ಕತೆಯನ್ನ ಹೇಳುತ್ತಿದ್ದಾರೆ. ಆದರೆ, ಮೊದಲ ಭಾಗದಲ್ಲಿ ಏನು ಹೇಳುತ್ತಿದ್ದಾರೆ. ಎರಡನೇ ಭಾಗದಲ್ಲಿ ಮತ್ತೇನು ಹೇಳ್ತಾರೆ. ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ. ಮೊದಲ ಭಾಗ ಒಂದು ರೀತಿ ಕ್ಲಿಪ್ ಹ್ಯಾಂಗರ್ ಆಗಿದೆ. ಅಂದ್ರೆ ಮುಂದೇನಾಗುತ್ತದೆ ಅನ್ನುವ ವಿಷಯ ಇರುತ್ತದೆ.
ರಾಮಾಯಣ ಚಿತ್ರದ ಮೊದಲ ಭಾಗ ಎರಡನೇ ಭಾಗವನ್ನ ನೋಡಲೇಬೇಕು ಅಂತ ಕುತೂಹಲ ಹೆಚ್ಚಿಸುತ್ತದೆ. ಆ ರೀತಿ ವಿಷಯಗಳೇ ರಾಮಾಯಣದ ಮೊದಲ ಭಾಗದಲ್ಲಿ ಇರುತ್ತವೆ ಅನ್ನೋದನ್ನ ನಿತೇಶ್ ತಿವಾರಿ ಅವರು ಕಾಮಿಕ್ ಕಾನ್-2026 ರ IGN ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ.
ಎರಡು ಭಾಗದಲ್ಲಿ
ನಿತೇಶ್ ತಿವಾರಿ ಅವರು ಚಿತ್ರದ ಎರಡನೇ ಭಾಗದಲ್ಲಿ ರಾಮಾಯಣದ ಇತರ ವಿಚಾರಗಳನ್ನ ಹೇಳುತ್ತಿದ್ದಾರೆ. ರಾಮಾಯಣ ಕತೆ ಏನು ಅನ್ನೊದು ಎಲ್ಲರಿಗೂ ಗೊತ್ತೇ ಇದೆ. ರಾಮ ಮತ್ತು ರಾವಣನ ಯುದ್ಧ ಹೇಗಿರುತ್ತದೆ ಅನ್ನೋದು ಗೊತ್ತಿರುತ್ತದೆ. ಆದರೆ, ನಿತೇಶ್ ತಿವಾರಿ ಈ ಚಿತ್ರದಲ್ಲಿ ಅದನ್ನೆ ಬೇರೆ ರೀತಿ ತೋರಿಸೋಕೆ ಮುಂದಾಗಿದ್ದಾರೆ.
ನಿತೇಶ್ ತಿವಾರಿ ಅವರ ಈ ರಾಮಾಯಣ ಚಿತ್ರ ಟೆಕ್ನಿಕಲಿ ಸ್ಟ್ರಾಂಗ್ ಆಗಿದೆ. ಇದರ ಪರಿಚಯ ಮೊನ್ನೆ ಅನೇಕರಿಗೆ ಆಗಿದೆ. ಕನ್ನಡ ಸಿನಿಮಾ ಪತ್ರಕರ್ತರು ಸೇರಿದಂತೆ ಇತರ ಭಾಷೆಯ ಪತ್ರಕರ್ತರಿಗೂ ಇದರ ಪರಿಚಯ ಆಗಿದೆ.
ಇಡೀ ಸಿನಿಮಾ ಇದೇ ರೀತಿನೇ ಇದ್ದರೆ ಆಯಿತು. ರಾಮಾಯಣ ಸಿನಿಮಾ ನಿಜಕ್ಕೂ ಟಾಪ್ 10 ಗ್ಲೋಬಲ್ ಸಿನಿಮಾಗಳ ಪಟ್ಟಿಯಲ್ಲಿ ಪಕ್ಕಾ ಇರುತ್ತದೆ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದಂತೆ ರಾಮಾಯಣ ಚಿತ್ರ 2026 ರ ದೀಪಾವಳಿ ಹಬ್ಬಕ್ಕೆ ಬರ್ತಿದೆ. ಎರಡನೇ ಭಾಗ 2027 ರ ದೀಪಾವಳಿ ಹಬ್ಬದಂದು ಬರ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 25, 2026 12:32 PM IST














