Yash Viral: ಬ್ಲೇಜರ್ ಮೇಲೆ ತ್ರಿಶೂಲ ಧರಿಸಿದ ಯಶ್! ಏನಿದರ ಸೀಕ್ರೆಟ್? | | ACTPnews

ಯಶ್ ಬ್ಲೇಜರ್ ಮೇಲೆ ತ್ರಿಶೂಲ್; ಏನಿದರ ಸೀಕ್ರೆಟ್?


Last Updated:

ರಾಕಿಂಗ್ ಸ್ಟಾರ್ ಯಶ್ ಧರಿಸಿರೋ ಕಪ್ಪು ಬಣ್ಣದ ಬ್ಲೇಜರ್ ಮೇಲಿನ ತ್ರಿಶೂಲ್ ಹೆಚ್ಚು ಗಮನ ಸೆಳೆಯುತ್ತಿದೆ. ಅಮೆರಿಕಾದಲ್ಲಿ ನಡೆದ ಕಾಮಿಕ್ ಕಾನ್-2026 ರಲ್ಲಿ ಯಶ್ ಈ ತ್ರಿಶೂಲ್ ಇರೋ ಕಪ್ಪು ಬಣ್ಣದ ಬ್ಲೇಜರ್ ಧರಿಸಿಕೊಂಡೇ ಹೋಗಿದ್ದರು. ಇದು ಈಗ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ.

ಯಶ್ ಬ್ಲೇಜರ್ ಮೇಲೆ ತ್ರಿಶೂಲ್; ಏನಿದರ ಸೀಕ್ರೆಟ್?
ಯಶ್ ಬ್ಲೇಜರ್ ಮೇಲೆ ತ್ರಿಶೂಲ್; ಏನಿದರ ಸೀಕ್ರೆಟ್?

ರಾಕಿಂಗ್ ಸ್ಟಾರ್ ಯಶ್ (Yash) ಅವರ ಬ್ಲೇಜರ್ (Blazer) ಮೇಲಿನ ತ್ರಿಶೂಲ್ (Trishul) ಹೆಚ್ಚು ಗಮನ ಸೆಳೆಯುತ್ತಿದೆ. ಅಮೆರಿಕಾದಲ್ಲಿ ನಡೆದ ಕಾಮಿಕ್ ಕಾನ್ ಅಲ್ಲಿಯೇ ಈ ಒಂದು ತ್ರಿಶೂಲ್ ಇರೋ ಬ್ಲೇಜರ್ ಅಲ್ಲಿಯೇ ಯಶ್ ಕಾಣಿಸಿಕೊಂಡಿದ್ದಾರೆ. ತಮ್ಮ ರಾಮಾಯಣ ಚಿತ್ರವನ್ನ (Ramayana Movie) ಪ್ರಮೋಟ್ ಮಾಡೋಕೇನೆ ಇಲ್ಲಿಗೆ ಹೋಗಿದ್ದ ಯಶ್, ಈ ತ್ರಿಶೂಲ್ ಬ್ಲೇಜರ್ ಧರಿಸುವ ಮೂಲಕವೂ ಕುತೂಹಲ ಮೂಡಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ.

ಬ್ಲೇಜರ್ ಮೇಲೆ ತ್ರಿಶೂಲ್

ಯಶ್ ಲುಕ್ ಬದಲಾಗಿದೆ. ಕೈಯಲ್ಲಿ ಕಡಗ ಬಂದಿದೆ. ಕಿವಿಯಲ್ಲಿ ಓಲೆ ಇವೆ. ಧರಿಸಿರೋ ಕಪ್ಪು ಬಣ್ಣದ ಬ್ಲೇಜರ್ ಮೇಲೆ ಬಂಗಾರದ ಬಣ್ಣದ ಚಿಕ್ಕ ತ್ರಿಶೂಲವೂ ಇದೆ.
rocking star yash ravana character trishul secret at san diego comic con

ಬ್ಲೇಜರ್ ಮೇಲೆ ತ್ರಿಶೂಲ್

ಅಮೆರಿಕಾದಲ್ಲಿ ನಡೆದ ಕಾಮಿಕ್ ಕಾನ್-2026 ರಲ್ಲಿ ಯಶ್ ಈ ರೂಪದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ತ್ರಿಶೂಲ್ ಬಗೆಗಿನ ಪೋಸ್ಟ್‌ಗಳು ಶೇರ್ ಆಗುತ್ತಿವೆ.

ರಾವಣ-ಶಿವ-ಯಶ್

ಯಶ್ ಬ್ಲೇಜರ್ ಮೇಲೆ ತ್ರಿಶೂಲ್ ಯಾಕೆ ಇದೆ. ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಯಶ್ ತಮ್ಮ ರಾಮಾಯಣ ಚಿತ್ರದಲ್ಲಿ ರಾವಣನ ರೋಲ್ ಮಾಡ್ತಿದ್ದಾರೆ.

ರಾವಣ ಯಾರು? ಶಿವನ ಪರಮಭಕ್ತ ಅಲ್ವೇ? ತ್ರಿಶೂಲ ಯಾರದ್ದು? ಮಹಾದೇವನ ಆಯುಧ ಅಲ್ಲವೇ? ಹಾಗಾಗಿಯೇ ಯಶ್ ಇಲ್ಲಿ ತಮ್ಮ ಬ್ಲೇಜರ್ ಮೇಲೆ ಶಿವನ ಪರಮ ಪವಿತ್ರವಾದ ತ್ರಿಶೂಲ್ ಚಿನ್ಹೆಯನ್ನ ಹಾಕಿಕೊಂಡಿದ್ದಾರೆ.

ರಾಮಾಯಣ ಸಿನಿಮಾ

ಯಶ್ ತಮ್ಮ ರಾಮಾಯಣ ಚಿತ್ರವನ್ನ ಪ್ರಮೋಟ್ ಮಾಡ್ತಿದ್ದಾರೆ. ಅಮೆರಿಕಾದಲ್ಲಿ ನಡೆದ ಕಾಮಿಕ್-ಕಾನ್-2026 ರಲ್ಲಿ ರಾಮಾಯಣ ಪ್ರಮೋಟ್ ಮಾಡಿದ್ದಾರೆ.

ತಾವು ಚಿತ್ರದಲ್ಲಿ ರಾವಣನ ರೋಲ್ ಮಾಡಿರೋದನ್ನ ಹೇಳಿಕೊಂಡಿದ್ದಾರೆ. ಅದನ್ನ ಬ್ಲೇಜರ್ ಮೇಲೆ ತ್ರಿಶೂಲ್ ಧರಿಸಿಕೊಂಡು ಸಾಂಕೇತಿಕವಾಗಿ ಹೇಳಿದ್ದಾರೆ.

ದೀಪಾವಳಿ ಹಬ್ಬಕ್ಕೆ ರಿಲೀಸ್

ರಾಮಾಯಣ ಚಿತ್ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. 2026 ಈ ವರ್ಷ ದೀಪಾವಳಿ ಹಬ್ಬಕ್ಕೆ ಇದು ತೆರೆ ಕಾಣುತ್ತಿದೆ. ರಾಮಾಯಣ ಪಾರ್ಟ್‌-2 ಚಿತ್ರವೂ ಬರುತ್ತದೆ. ಆದರೆ, ಅದು ಮುಂದಿನ ವರ್ಷ 2027 ದೀಪಾವಳಿ ಹಬ್ಬಕ್ಕೇನೆ ರಿಲೀಸ್ ಆಗುತ್ತಿದೆ.

rocking star yash ravana character trishul secret at san diego comic con

ರಾವಣ-ಶಿವ-ಯಶ್

ನಿತೇಶ್ ತಿವಾರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಮಿತ್ ಮಲ್ಹೋತ್ರಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಬಹು ಕೋಟಿ ವೆಚ್ಚದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಇವರು ರಾಮ ಮತ್ತು ಸೀತೆಯ ಪಾತ್ರ ಮಾಡಿದ್ದಾರೆ.

ಸನ್ನಿ ಡಿಯೋಲ್ ಪಾತ್ರ ರಿವೀಲ್

ಸನ್ನಿ ಡಿಯೋಲ್ ಇಲ್ಲಿ ಆಂಜನೇಯನ ರೋಲ್ ಮಾಡಿದ್ದಾರೆ. ಈ ಒಂದು ಪಾತ್ರದ ಕೆಲಸ ಶುರು ಮಾಡಿದ್ದಾರೆ. ಆದರೆ, ಪೂರ್ತಿ ಇನ್ನು ಶುರು ಆಗಿಲ್ಲ. ಇನ್ನು ಸಾಕಷ್ಟು ಕೆಲಸ ಮಾಡ್ಬೇಕು ಅಂತ ಮೊನ್ನೆ ದೆಹಲಿಯಲ್ಲಿ ನಡೆದ ಚಿತ್ರದ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮದಲ್ಲಿಯೇ ಹೇಳಿಕೊಂಡಿದ್ದಾರೆ.

ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಈ ಚಿತ್ರ ತಯಾರಾಗಿದೆ. ಆದರೆ, ಇದು ಬಹು ಭಾಷೆಯಲ್ಲಿ ತೆರೆಗೂ ಬರ್ತಿದೆ. ಕನ್ನಡದ ಈ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed