Power Cut: ಬೆಂಗಳೂರು ಜನರ ಗಮನಕ್ಕೆ, ಭಾನುವಾರ ಈ ಪ್ರದೇಶಗಳಲ್ಲಿ ಪವರ್ ಕಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಪವರ್‌ ಕಟ್


Last Updated:

ಬೆಂಗಳೂರಿನಲ್ಲಿ ಜುಲೈ 26ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ 8 ಗಂಟೆ ವಿದ್ಯುತ್ ಕಡಿತ. ವಿಧಾನಸೌಧ, ರಾಜಭವನ ಸೇರಿ ಹಲವೆಡೆ ಬೆಸ್ಕಾಂ ನಿರ್ವಹಣಾ ಕಾಮಗಾರಿ.

ಪವರ್‌ ಕಟ್
ಪವರ್‌ ಕಟ್

ಬೆಂಗಳೂರು: ವಾರಾಂತ್ಯದ (Weekend) ರಜೆಯನ್ನು (Holiday) ಎಂಜಾಯ್ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಬೆಂಗಳೂರು (Bengaluru) ಜನತೆಗೆ ಬೆಸ್ಕಾಂ (Bescom) ಕಡೆಯಿಂದ ಬಿಗ್ ಶಾಕ್ ಎದುರಾಗಿದೆ. ಬರೋಬ್ಬರಿ ಎಂಟು ಗಂಟೆಗಳ ಕಾಲ ನಗರದ ಅತಿ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ (Power) ಸಂಪೂರ್ಣ ಕಡಿತಗೊಳ್ಳಲಿದ್ದು, ಜನಸಾಮಾನ್ಯರಿಂದ ಹಿಡಿದು ಸರ್ಕಾರದ ಉನ್ನತ ಕಚೇರಿಗಳವರೆಗೆ ಎಲ್ಲರಿಗೂ ಇದರ ಬಿಸಿ ತಟ್ಟಲಿದೆ.

ಎಷ್ಟು ಗಂಟೆಗಳ ಕಾಲ ಕರೆಂಟ್ ಇರುವುದಿಲ್ಲ?

ಪ್ರಮುಖ ಜಾಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಭಾನುವಾರ, ಜುಲೈ 26ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಅಂದರೆ ಒಟ್ಟು 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11 ಕೆ.ವಿ. ‘ಸಿ’ ಸ್ಟೇಷನ್‍ನಲ್ಲಿ ಈ ತುರ್ತು ಕಾಮಗಾರಿಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚಿಸಲಾಗಿದೆ.
ಕಚೇರಿಗಳಿಗೆ ವಿದ್ಯುತ್ ಕಡಿತ?

ಈ ಪವರ್ ಕಟ್ ಬರೀ ಸಾಮಾನ್ಯ ವಸತಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ರಾಜ್ಯದ ಆಡಳಿತ ಕೇಂದ್ರಗಳಿಗೂ ತಟ್ಟಲಿದೆ:
ಪ್ರಮುಖ ಪ್ರದೇಶಗಳು

ಶಿವಾಜಿನಗರ, ವಸಂತನಗರ, ಕ್ಯಾಂಟೋನ್ಮೆಂಟ್ ಹಾಗೂ ಪುಲಿಕೇಶಿನಗರ ಸೇರಿದಂತೆ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿಶೇಷ ಆಡಳಿತ ಕೇಂದ್ರಗಳು

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ವಿಧಾನಸೌಧ, ವಿಕಾಸಸೌಧ, ರಾಜಭವನ ಹಾಗೂ ಪ್ಯಾಲೆಸ್ ಗ್ರೌಂಡ್ಸ್ ಪ್ರದೇಶಕ್ಕೂ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ.

ಸರ್ಕಾರಿ ಕಚೇರಿಗಳು

ಬೌರಿಂಗ್ ಆಸ್ಪತ್ರೆ, ಪೊಲೀಸ್ ಆಯುಕ್ತರ ಕಚೇರಿ, ಕೆಪಿಎಸ್ಸಿ, ಎಂಇಜಿ ಸೆಂಟರ್ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಹಾಗೂ ಆವರಣಗಳು ಕತ್ತಲಲ್ಲಿರಲಿವೆ.

ಸಾರ್ವಜನಿಕರಿಗೆ ಮನವಿ

ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡರೆ, ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗುವುದು. ಸಾರ್ವಜನಿಕರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು, ಮೊಬೈಲ್, ಇನ್ವರ್ಟರ್ ಚಾರ್ಜ್ ಮಾಡಿಕೊಳ್ಳುವುದು ಹಾಗೂ ನೀರಿನ ಮೋಟಾರ್ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವ ಮೂಲಕ ಸಹಕರಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports