Last Updated:
Drishyam 3: ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್‌ಲಾಲ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಬಹುನಿರೀಕ್ಷಿತ ದೃಶ್ಯಂ 3 ಸಿನಿಮಾ ಪ್ರದರ್ಶನಗೊಂಡ ಮೊದಲ ದಿನವೇ ಅಭಿಮಾನಿಗಳು ತೋರಿದ ಅಪಾರ ಪ್ರೀತಿ ಹಾಗೂ ಮೆಚ್ಚುಗೆಗೆ ನಟ ಥಿಯೇಟರ್‌ನಲ್ಲಿ ಭಾವುಕರಾಗಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್‌ಲಾಲ್ (Actor Mohanlal) ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಬಹುನಿರೀಕ್ಷಿತ ದೃಶ್ಯಂ 3 (Drishyam 3) ಸಿನಿಮಾ ಪ್ರದರ್ಶನಗೊಂಡ ಮೊದಲ ದಿನವೇ ಅಭಿಮಾನಿಗಳು ತೋರಿದ ಅಪಾರ ಪ್ರೀತಿ ಹಾಗೂ ಮೆಚ್ಚುಗೆಗೆ ನಟ ಥಿಯೇಟರ್‌ನಲ್ಲಿ ಭಾವುಕರಾಗಿದ್ದಾರೆ. ಚಿತ್ರ ಪ್ರದರ್ಶನದ ಮಧ್ಯೆ ನಟ ಮೋಹನ್ ಲಾಲ್ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ, ದೃಶ್ಯಂ 3 ನೋಡಿದ ಪ್ರೇಕ್ಷಕರು ಸಂತೋಷದಿಂದ ಕೂಗಿ ಚಪ್ಪಾಳೆ ತಟ್ಟುವಾಗ, ಮೋಹನ್‌ಲಾಲ್ ಚಿತ್ರತಂಡದ ಬಳಿಯಲ್ಲಿ ಕುಳಿತುಕೊಂಡು ಕಣ್ಣೀರು ಒರೆಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪ್ರೇಕ್ಷಕರಿಂದ ಬಂದ ಬೆಂಬಲ ಮತ್ತು ಪ್ರೀತಿಗೆ ನಟ ಕೈ ಜೋಡಿಸಿ ಅವರನ್ನು ಸ್ವಾಗತಿಸುತ್ತಿರುವುದು ಕಾಣಬಹುದು.
ಪ್ರದರ್ಶನದ ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೋಹನ್‌ಲಾಲ್ ಸಂದೇಶವನ್ನು ಹಂಚಿಕೊಂಡಿದ್ದಾರೆ. ದೃಶ್ಯಂ 3 , ಅಪಾರ ಪ್ರೀತಿ ಮತ್ತು ಅಭಿಮಾನಿಗಳ ವಿಶ್ವಾಸದಿಂದ ನಿರ್ಮಿತವಾಯಿತು ಎಂದು ಮೋಹನ್ ಲಾಲ್ ಅವರು ತಿಳಿಸಿದ್ದಾರೆ . ಪ್ರೇಕ್ಷಕರು ಹಂಚಿಕೊಂಡ ವಿಮರ್ಶೆಗಳು, ಮಾತುಗಳು ಮತ್ತು ಭಾವನೆಗಳು ಯಾವುದೇ ಬಾಕ್ಸ್ ಆಫೀಸ್ ಸಂಖ್ಯೆಗಳಿಗಿಂತ ಹೆಚ್ಚು ಮೌಲ್ಯವುಳ್ಳವು. ಈ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿ, ಅಭಿಮಾನಿಗಳು ಮತ್ತು ಚಲನಚಿತ್ರಪ್ರಿಯರು ಅದನ್ನು ಹಾರೈಸಿದರು.
ದೃಶ್ಯಂ 3 ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸಾಧಿಸಿದೆ. ಮಲಯಾಳಂ ಭಾಷೆಯಲ್ಲೇ 3,503 ಸ್ಕ್ರೀನ್‌ಗಳಲ್ಲಿ ಸಿನಿಮಾ ಸುಮಾರು 13.70 ಕೋಟಿ ರೂ. ಗಳಿಸಿದ್ದು, ಅದೇ ದಿನ ತೆಲುಗಿನಲ್ಲಿ 1.50 ಕೋಟಿ ಹಾಗೂ ಕನ್ನಡದಲ್ಲಿ 20 ಲಕ್ಷ, ತಮಿಳಿನಲ್ಲಿ 45 ಲಕ್ಷ ಗಳಿಕೆ ಮಾಡಿದೆ. ಇದೇ ವೇಳೆ ವಿದೇಶಗಳಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಓವರ್ ಸೀಸ್ ನಿಂದ ಸಿಗುತ್ತಿರುವ ಕಲೆಕ್ಷನ್ ಒಟ್ಟು ವರಮಾನವನ್ನು ಹೆಚ್ಚಿಸಿದೆ. ಆರಂಭಿಕ ಅಂದಾಜಿನ ಪ್ರಕಾರ,ದೃಶ್ಯಂ 3 ವಿಶ್ವಾದ್ಯಂತ ಮೊದಲ ದಿನವೇ ಸುಮಾರು ₹43.37 ಕೋಟಿ ರೂ. ದಾಟಿದೆ. ಇದು ಫ್ರಾಂಚೈಸ್‌ನ ಬಲ ಹಾಗೂ ಅಭಿಮಾನಿ ವಲಯದ ವಿಸ್ತಾರವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ದೃಶ್ಯಂ ಸರಣಿಯ ಮೂರನೇ ಭಾಗ ಕೇವಲ ಒಂದು ಚಿತ್ರವಲ್ಲ, ಅದು ಒಂದು ಭಾವನಾತ್ಮಕ ಅನುಭವ. ಮೋಹನ್‌ಲಾಲ್ ಅವರ ಅಭಿನಯ, ನಿರ್ದೇಶಕ ಜೀತು ಜೋಸೆಫ್ ಅವರ ಕಥನ ನಿರೂಪಣೆ ಮತ್ತು ಕಥೆಯ ಆಳ ಎಲ್ಲವೂ ಸೇರಿ ಒಟ್ಟಾರೆ ಅತ್ಯುತ್ತಮ ಸಿನಿಮಾವನ್ನು ರೂಪಿಸಿವೆ.
Bangalore [Bangalore],Bangalore,Karnataka













