Last Updated:
ಮೊಟ್ಟೆ ವಿಷಯಕ್ಕೆ ಅಮಾಯಕನ ಹೆಣ ಬಿದ್ದಿದೆ. ಸೂಪರ್ ಮಾರ್ಕೆಟ್ನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ತಿರುವನಂತಪುರಂ (ಕೇರಳಂ): ಕಲಿಗಾಲದಲ್ಲಿ ಎಂತೆಂಥಾ ವಿಷಯಕ್ಕೆಲ್ಲಾ ಕೊಲೆಗಳಾಗುತ್ತಿವೆ (Murder) ನೋಡಿ. ಮಾತಲ್ಲಿ ಮುಗಿಯುವ ವಿಷಯವನ್ನ ಹೆಣ ಉರುಳಿಸೋ ಹಂತಕ್ಕೆ ತಗೊಂಡು ಹೋಗುತ್ತಿದ್ದಾರೆ. ಚಿಲ್ಲರೆ ಮ್ಯಾಟರ್ಗೂ ಮ್ಯಾಟ್ರೇ ಮುಗಿಸೋ ಪ್ಲ್ಯಾನ್ ಮಾಡುತ್ತಿದ್ದಾರೆ. ಇಲ್ಲಾಗಿದ್ದೂ ಇದೆ. ಮೊಟ್ಟೆ (Egg) ವಿಷಯಕ್ಕೆ ಅಮಾಯಕನ ಹೆಣ ಬಿದ್ದಿದೆ. ಸೂಪರ್ ಮಾರ್ಕೆಟ್ನಲ್ಲಿ (Super Market) ಶುರುವಾದ ಗಲಾಟೆ ಕೊಲೆಯಲ್ಲಿ (Murder) ಅಂತ್ಯವಾಗಿದೆ.
ಕೇರಳಂ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಇಬ್ಬರ ನಡುವೆ ವಾಗ್ವಾದ ತಾರಕಕ್ಕೇರಿದಾಗ ಕೋಪಗೊಂಡ ಫೈಸಲ್, ತನ್ನ ಕೈನಲ್ಲಿದ್ದ ಒಂದು ಮೊಟ್ಟೆಯನ್ನು ಲತೀಫ್ನ ಮುಖಕ್ಕೆ ಎಸೆದಿದ್ದಾನೆ. ಇದರಿಂದ ಕೋಪಕೊಂಡ ಲತೀಫ್, ಫೈಸಲ್ನ ಎದೆಯನ್ನು ಹಿಡಿದು ಹಿಂದಕ್ಕೆ ತಳ್ಳಿದ್ದಾನೆ ಎನ್ನಲಾಗಿದೆ. ಲತೀಫ್ ತಳ್ಳಿದ ರಭಸಕ್ಕೆ ಫೈಸಲ್ ರಸ್ತೆಯ ಮೇಲೆ ಬಿದ್ದಿದ್ದಾನೆ. ಈ ವೇಳೆ ಆತನ ತಲೆಯ ಹಿಂಭಾಗ ರಸ್ತೆಗೆ ಬಲವಾಗಿ ಬಡಿದು, ಗಂಭೀರವಾಗಿ ಗಾಯಗೊಂಡಿದ್ದ.
ತಕ್ಷಣವೇ ಅಲ್ಲಿದ್ದ ಸ್ಥಳೀಯರು ಗಾಯಾಳು ಫೈಸಲ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಂತರ ಅಂದೇ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತರಲಾಗಿತ್ತು. ಆದರೆ, ಜುಲೈ 9 ರಂದು ಅವರಿಗೆ ತೀವ್ರ ತಲೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆ ತಕ್ಷಣ ಫೈಸಲ್ನನ್ನು ಕೊಟ್ಟಕ್ಕಲ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಫೈಸಲ್, ದುರದೃಷ್ಟವಶಾತ್ ಜುಲೈ 13 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇನ್ನು, ಗಲಾಟೆ ಸಂಬಂಧ ಪೊಲೀಸರು ಜುಲೈ 8 ರಂದು ಕೇಸ್ ದಾಖಲಿಸಿಕೊಂಡಿದ್ದರು. ಪೊಲೀಸರ ಇನ್ಕ್ವೆಸ್ಟ್ ವರದಿಯ ಪ್ರಕಾರ, ಫೈಸಲ್ ಬಿದ್ದ ರಭಸಕ್ಕೆ ತಲೆಗೆ ತೀವ್ರ ಗಾಯವಾಗಿ, ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದೇ ಫೈಸಲ್ ಅವರ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಸದ್ಯ, ಕೇರಳ ಪೊಲೀಸರು, ಆರೋಪಿ ಲತೀಫ್ನನ್ನು ಅರೆಸ್ಟ್ ಮಾಡಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.
ಸ್ಥಳೀಯ ಅಂಗಡಿಯೊಂದರಲ್ಲಿ ಮೊಟ್ಟೆಗಾಗಿ ನಡೆದ ತೀವ್ರ ಜಗಳದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅಂಗಡಿಯಲ್ಲಿದ್ದ ಒಟ್ಟು ಆರು ಮೊಟ್ಟೆಗಳಲ್ಲಿ ತನಗೇ ಐದು ಮೊಟ್ಟೆಗಳು ಬೇಕು ಎಂದು ಅವರು ಹಠ ಹಿಡಿದಿದ್ದೇ ಈ ಜಗಳಕ್ಕೆ ಕಾರಣವಾಗಿತ್ತು. ಈ ಘಟನೆಯು ಮಲಪ್ಪುರಂ ಜಿಲ್ಲೆಯ ತಿರೂರಂಗಡಿ ಬಳಿಯ ಮುನ್ನಿಯೂರು ಎಂಬಲ್ಲಿ ನಡೆದಿದೆ.














