Last Updated:
ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡದ ಸಾಲು ಸಾಲು ಸರಣಿಗಳಲ್ಲಿ ಸೋಲುಂಡಿದೆ. ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಎಚ್ಚರಗೊಂಡು ತಪ್ಪುಗಳನ್ನು ಸರಿ ಮಾಡಿಕೊಳ್ಳಲಿಲ್ಲ ಎಂದರೇ, ಮುಂಬರುವ ಜಿಂಬಾಬ್ವೆ ಟೂರ್ನಿಯಲ್ಲೂ ಭಾರತಕ್ಕೆ ಅವಮಾನ ಎದುರಾಗುವುದರಲ್ಲಿ ಸಂದೇಹವಿಲ್ಲ.
ಕೆಲವೇ ತಿಂಗಳ ಹಿಂದೆ ವಿಶ್ವ ಬಲಿಷ್ಠ ತಂಡಗಳಿಗೆ ಸೋಲುಣಿಸಿತ್ತು (T20 World Cup). ಆದರೆ ಇದಾದ ಬಳಿಕ ಸಾಲು ಸಾಲು ಸೋಲುಗಳನ್ನು ಎದುರಿಸಿದೆ. ಐರ್ಲೆಂಡ್, ಇಂಗ್ಲೆಂಡ್ ಸರಣಿಯಲ್ಲಿ (Ind vs Eng) ಭಾರತ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ (Ind vs Ire). ಇದರೊಂದಿಗೆ ಕೋಟ್ಯಾಂತರ ಅಭಿಮಾನಿಗಳಿಗೆ ತೀವ್ರ ಆಘಾತ ಎದುರಾಗಿದೆ. ಪಿಚ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಆಟಗಾರರಂತೆ ಆಡುತ್ತಿರುವ ಬಗ್ಗೆ ಭಾರೀ ಟೀಕೆಗಳು ಎದುರಾಗುತ್ತಿದೆ. ಐರ್ಲೆಂಡ್ ವಿರುದ್ಧದ ಸೋಲು, ಮ್ಯಾನೇಜ್ಮೆಂಟ್ (Team India Management) ಎಚ್ಚೆತ್ತುಕೊಂಡಿದ್ದರೆ ಮತ್ತೊಂದು ವೈಟ್ ವಾಶ್ ಮುಖಭಂಗ ಎದುರಾಗುತ್ತಿರಲಿಲ್ಲ.
ಐರ್ಲೆಂಡ್ ಟೂರ್ನಿಯಲ್ಲಿ ಮಾಡಿದ್ದ ತಪ್ಪುಗಳನ್ನೇ ಇಂಗ್ಲೆಂಡ್ ಟೂರ್ನಿಯಲ್ಲೂ ಭಾರತ ಪುನರಾವರ್ತನೆ ಮಾಡಿತ್ತು. ಐರ್ಲೆಂಡ್ ವಿರುದ್ಧ ಇತಿಹಾಸದಲ್ಲಿಯೇ ಮೊದಲ ಬಾರಿಗೆ 2-0ಯೊಂದಿಗೆ ಸೋಲುಂಡು, ಈಗ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 14 ವರ್ಷಗಳ ಬಳಿಕ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ಸೋಲುಂಡಿದೆ. ಇದಕ್ಕೆ ಪ್ರಮುಖ ಕಾರಣ ಬ್ಯಾಟರ್‌ಗಳ ವೈಫಲ್ಯ ಎಂದು ಹೇಳಬಹುದು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬಿಟ್ಟರೆ ಉಳಿದ ಯಾವ ಟಾಪ್ ಬ್ಯಾಟರ್ ಕೂಡ ಕನಿಷ್ಠ ಒಂದು ಅರ್ಧ ಶತಕ ದಾಖಲಿಸಲು ಆಗಲಿಲ್ಲ. ಸಂಜು ಸ್ಯಾಮ್ಸನ್, ವೈಭವ್, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ ಯಂತಹ ಟಿ20 ಸ್ಪೆಷಲಿಸ್ಟ್ ಬೌಲರ್ ಗಳು ಇಂಗ್ಲೆಂಡ್ ಬೌಲರ್ ಗಳ ಎದುರು ವಿಕೆಟ್ ಉಳಿಸಿಕೊಳ್ಳಲು ಆಗಲಿಲ್ಲ.
ಇಂಗ್ಲೆಂಡ್ ಬೌಲಿಂಗ್ ಪಡೆಗೆ ಹೋಲಿಕೆ ಮಾಡಿದರೆ ಭಾರತ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಅಕ್ಷದೀಪ್ ಸಿಂಗ್ಗೆ ವಿದೇಶಿ ನೆಲದಲ್ಲಿ ಆಡಿದ ಅನುಭವ ಇದ್ದರೂ ಕೆಲಸಕ್ಕೆ ಬರಲಿಲ್ಲ. ಉಳಿದ ಯುವ ವೇಗಿಗಳು, ಸ್ಪಿನ್ನರ್ ಗಳಿಗೆ ಅಲ್ಲಿನ ಕಂಡಿಷನ್ ಗಳನ್ನು ಅರ್ಥ ಮಾಡಿಕೊಳ್ಳಲು ಕೂಡ ಆಗಲಿಲ್ಲ. ವಿಕೆಟ್ ತೆಗೆಯುವುದು ಇರಲಿ, ಎದುರಾಳಿ ಬ್ಯಾಟರ್ ಗಳ ನಡುವಿನ ಭಾಗ ಸ್ವಾಮ್ಯವನ್ನು ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ವಿಕೆಟ್ ಬೀಳಿಸಿದರೂ, ಮಿಡಲ್ ಅರ್ಡರ್ ನಲ್ಲಿ ರನ್ ಗಳನ್ನು ಬಿಟ್ಟುಕೊಟ್ಟು ಇಂಗ್ಲೆಂಡ್ಗೆ ಗೆಲುವನ್ನು ಕಾಣಿಕೆಯಾಗಿ ನೀಡುತ್ತಿದ್ದರು.
ಕೇವಲ ಬೌಲಿಂಗ್ ಮಾತ್ರವಲ್ಲ ಭಾರತ ತಂಡದ ಫೀಲ್ಡಿಂಗ್ ಕೂಡ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಟೀಕೆ ಮಾಡುತ್ತಿದ್ದಾರೆ. ಹಲವು ಬಾರಿ ಕೈಗೆ ಬಂದ ಕ್ಯಾಚ್ ಗಳನ್ನು ಬಿಟ್ಟಿದ್ದು ಅಭಿಮಾನಿಗಳ ಹೃದಯ ಹೊಡೆಯುವಂತೆ ಮಾಡಿತ್ತು. ಮೈದಾನದಲ್ಲಿ ಆಟಗಾರರ ಬಾಡಿ ಲ್ಯಾಂಗ್ವೇಜ್ ನೋಡಿದರೆ ಇವರೇನಾ ವಿಶ್ವಕಪ್ ಗೆದ್ದ ಚಾಂಪಿಯನ್ಗಳು ಎಂಬ ಅನುಮಾನ ಮೂಡುತ್ತಿತ್ತು. ಚೆಂಡು ಸ್ವಲ್ಪ ದೂರ ಹೋದರೆ ಅದನ್ನು ಚೇಸ್ ಮಾಡಿ ಹಿಡಿಯಬೇಕು ಎಂಬ ಹಂಬಲ ಎಲ್ಲಿಯೂ ಕಾಣಲಿಲ್ಲ. ಕಳಪೆ ಫೀಲ್ಡಿಂಗ್ ಕಾರಣದಿಂದಲೇ ಎದುರಾಳಿ ಬ್ಯಾಟರ್ ಗಳು ಮತ್ತಷ್ಟು ವೇಗವಾಗಿ ರನ್ ಗಳಿಸಿದ್ದರು.
ಇದೇ ಮೊದಲ ಬಾರಿಗೆ ಭಾರತದ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರಲ್ಲಿ ಇದ್ದ ಲೋಪಗಳು ಸ್ಪಷ್ಟವಾಗಿ ಕಾಣಿಸಿತ್ತು. ಯಾವ ಸಮಯದಲ್ಲಿ ಯಾವ ಬೌಲರ್ ಗೆ ಚೆಂಡು ನೀಡಬೇಕು, ಬ್ಯಾಟರ್ ಗಳ ಬಲವನ್ನು ಅಂದಾಜು ಮಾಡಿ ಹೇಗೆ ಫೀಲ್ಡಿಂಗ್ ನಿಲ್ಲಿಸಬೇಕು ಎಂಬ ತಂತ್ರ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲರಾದರು. ತಂಡ ಸತತವಾಗಿ ಸೋಲು ಅನುಭವಿಸುತ್ತಿದ್ದರೂ, ಆಟಗಾರರ ಪ್ರದರ್ಶನದಲ್ಲಿ ಸ್ವಲ್ಪವೂ ಬದಲಾವಣೆ ಕಾಣಲಿಲ್ಲ. ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಕನಿಷ್ಠ ಪ್ರಯತ್ನ ಕೂಡ ನಡೆದಂತೆ ಕಾಣಲಿಲ್ಲ.














