Last Updated:
ಎಸ್ ಜಾನಕಿ ಅವರ ಆಸೆಯಂತೆ ಮೈಸೂರಿನ ತೋಟದ ಮನೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರು: ಭಾರತ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರು (S. Janaki) ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ (Mysuru) ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದ ಗಾನಕೋಗಿಲೆ ಎಂದೇ ಸುಪ್ರಸಿದ್ಧ 88 ವರ್ಷದ ಗಾಯಕಿ ಜಾನಕಿ ವಿಧಿವಶರಾಗಿದ್ದು, ಎಸ್. ಜಾನಕಿ ಅವರ ಆಸೆಯಂತೆ ಮೈಸೂರಿನ ಮೈಸೂರಿನ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸ್. ಜಾನಕಮ್ಮನವರು ಸುಮಾರು ವರ್ಷಗಳಿಂದ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಕಳೆದ 2 ವರ್ಷಗಳ ಹಿಂದೆ ಮರಣ ಹೊಂದಿದ್ದ ಮಗನ ಸಾವಿನ ನಂತರ ಮಾನಸಿಕವಾಗಿ ಕುಗ್ಗಿದ್ದರು. ನವೀನ್ ಎಂಬುವರು ಎಸ್. ಜಾನಕಿ ಅವರ ಜವಾಬ್ದಾರಿಯನ್ನು ಹೊತ್ತಿದ್ದರು. ಕೊನೆಯ ಸಮಯದಲ್ಲಿ ಎಸ್. ಜಾನಕಿ ಅವರು ತಮ್ಮ ಕುಟುಂಬಸ್ಥರನ್ನು ಮಾತ್ರ ಭೇಟಿಯಾಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರ ಸಂಪರ್ಕದಿಂದ ದೂರವಿದ್ದ ಎಸ್. ಜಾನಕಿ ಅವರ ಕುಟುಂಬಸ್ಥರು ಹೈದ್ರಾಬಾದ್, ಕೇರಳ, ವಿದೇಶದಲ್ಲಿ ನೆಲಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
(ವರದಿ: ಆನಂದ್, ನ್ಯೂಸ್18 ಕನ್ನಡ, ಮೈಸೂರು)
Mysore,Karnataka
Jul 11, 2026 10:14 PM IST














