Covid-19: 4 ವರ್ಷದ ನಂತರ ಮತ್ತೆ ವಕ್ಕರಿಸಿತಾ ಕೊರೊನಾ? ಆಂಧ್ರದಲ್ಲಿ 2 ಬಲಿ, 4 ಜನಕ್ಕೆ ಪಾಸಿಟಿವ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕೊರೋನಾ ವೈರಸ್


Last Updated:

Covid 19: ಕೊರೋನಾ ಮಹಾಮಾರಿ ಹೊರಟೇ ಹೋಯ್ತು ಅಂತ ನಿರಾಳರಾಗಿದ್ದ ಜನಕ್ಕೆ ಬಿಗ್ ಶಾಕಿಂಗ್ ಸುದ್ದಿಯೊಂದು ಬರುತ್ತಿದೆ. ಆಂಧ್ರ ಪ್ರದೇಶದಲ್ಲಿ ಕೊರೋನಾದಿಂದ ಓವ

ಕೊರೋನಾ ವೈರಸ್
ಕೊರೋನಾ ವೈರಸ್

ವಿಜಯವಾಡ (ಜು. 10) : ಆಂಧ್ರಪ್ರದೇಶದಲ್ಲಿ (Andhra Pradesh) ಕೊನೆಯ ಕೋವಿಡ್ -19 (COVID 19) ಸಾವು ಸಂಭವಿಸಿದ ನಾಲ್ಕು ವರ್ಷಗಳ ನಂತರ ಕಡಪ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಕೊರೋನಾ ವೈರಸ್‌ಗೆ ಬಲಿಯಾಗಿರುವ ಶಾಕಿಂಗ್ ಸುದ್ದಿ ಬಂದಿದೆ. ಇತರ ನಾಲ್ವರಿಗೆ ಪಾಸಿಟಿವ್ ವರದಿ ಮಾಡಿದ್ದಾರೆ.

ಸದ್ಯ ಅಲ್ಲಿನ ಸ್ಥಳೀಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಈ ಪ್ರದೇಶದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದೆ. ವೈರಸ್‌ಗೆ ಪಾಸಿಟಿವ್ ಬಂದ ನಾಲ್ವರಲ್ಲಿ ಮೂವರು ಮನೆಯಲ್ಲಿಯೇ ಐಸೊಲೇಷನ್​ನಲ್ಲಿದ್ದಾರೆ.

ಸದ್ಯ ಇವರಲ್ಲಿ ತೀವ್ರ ರೋಗಲಕ್ಷಣಗಳು ಇಲ್ಲ. ಲೈಟ್ ಆಗಿ ಕೊರೋನಾ ಲಕ್ಷಣ ಕಂಡು ಬರುತ್ತಿರುವವರನ್ನು ಮನೆಯಲ್ಲೇ ಐಸೊಲೇಷನ್​ಗೆ ಕಳಿಸಲಾಗಿದ್ದು ಒಬ್ಬರನ್ನು ಕಡಪಾದಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

“ಆಸ್ಪತ್ರೆಯಲ್ಲಿ ಕೋವಿಡ್ -19 ವಿಶೇಷ ವಾರ್ಡ್‌ನಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ. “ಕಡಪ ವೈರಾಲಜಿ ಪ್ರಯೋಗಾಲಯದಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ನಾಲ್ವರಿಗೆ ಕೊರೊನಾ -19 ಪಾಸಿಟಿವ್ ಬಂದಿದೆ” ಎಂದು ಮೂಲಗಳು ತಿಳಿಸಿವೆ.

“ನಾಲ್ಕು ಪಾಸಿಟಿವ್ ಪ್ರಕರಣಗಳು ಕಡಪದ ವಿವಿಧ ಪ್ರದೇಶಗಳಿಂದ ಬಂದಿವೆ. ಅವರು ಕೋವಿಡ್ -19 ಲಸಿಕೆಯ ಎರಡು ಡೋಸ್‌ಗಳನ್ನು ಸಹ ಪಡೆದಿದ್ದರು. ಆದರೆ ಅವರಲ್ಲಿ ಒಬ್ಬರು ಬೂಸ್ಟರ್ ಡೋಸ್ ಅನ್ನು ಸಹ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಎರಡು ಸಾವುಗಳಲ್ಲಿ, ಮೊದಲ ಸಾವು ಜೂನ್ 28 ರಂದು ಸಿಎಮ್‌ಸಿ ವೆಲ್ಲೂರಿನಲ್ಲಿ ಸಂಭವಿಸಿದೆ. ಆರಂಭದಲ್ಲಿ ತಿರುಪತಿಯ ಎಸ್‌ವಿಐಎಂಎಸ್‌ಗೆ ದಾಖಲಾಗಿ ನಂತರ ಸಿಎಮ್‌ಸಿ ವೆಲ್ಲೂರಿನಲ್ಲಿ ದಾಖಲಾಗಿದ್ದ 60 ವರ್ಷದ ರೋಗಿಯೊಬ್ಬ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದರು.

ನಂತರ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿತು. ಎರಡನೆಯ ಪ್ರಕರಣದಲ್ಲಿ, ಚಿಕಿತ್ಸೆ ಪಡೆಯುತ್ತಿದ್ದ 43 ವರ್ಷದ ರೋಗಿಯೊಬ್ಬರು ಮೃತಪಟ್ಟರು. ಅವರಿಗೂ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ.

ಸಿಎಮ್‌ಸಿ ವೆಲ್ಲೂರಿನಲ್ಲಿ ಸಾವನ್ನಪ್ಪಿದ ರೋಗಿಗೆ ಮಧುಮೇಹ, ಮೂತ್ರಪಿಂಡ ಕಾಯಿಲೆ ಮತ್ತು ಇತರ ಕಾಯಿಲೆಗಳಿದ್ದವು. ಆದರೆ ಎರಡನೇ ಮೃತ ವ್ಯಕ್ತಿಯ ಆರೋಗ್ಯ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ” ಎಂದು ಮೂಲಗಳು ತಿಳಿಸಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed