Last Updated:
ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ಮತ್ತೆ ಬೇಸರ ಮಾಡಿಕೊಂಡಿದ್ದಾರೆ. ನೆಗೆಟಿವ್ ಕಾಮೆಂಟ್ ಹೊಡೆಯೋರ ಬಗ್ಗೆ ಸಿಟ್ಟು ಹೊರಗೆ ಹಾಕಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ನೀನಾಸಂ ಸತೀಶ್ (Sathish Ninasam) ಮತ್ತೆ ಸಿಟ್ಟು ಮಾಡಿಕೊಂಡಿದ್ದಾರೆ. ಡೈರೆಕ್ಟರ್ ಮಹೇಶ್ ಕುಮಾರ್ (Director Mahesh Kumar) ಅವರನ್ನ ಟ್ರೋಲ್ ಮಾಡೋರ ವಿರುದ್ಧ ಸಿಟ್ಟಾಗಿದ್ದಾರೆ. ನೆಗೆಟಿವ್ ಕಾಮೆಂಟ್ ಹಾಕೋರ ವಿರುದ್ಧವು ಬೇಸರ ಮಾಡಿಕೊಂಡಿದ್ದಾರೆ. ನೀವು ಇದ್ದರೇನೆ ನಾವು ಇನ್ನಷ್ಟು ಸ್ಟ್ರಾಂಗ್ ಆಗುತ್ತೇವೆ ಅಂತಲೂ ಹೇಳಿದ್ದಾರೆ. ಅಯೋಗ್ಯ-2 ಚಿತ್ರದ ಅಣ್ಣ ಬಂದ್ರೆ ಹಾಡಿನ ರಿಲೀಸ್ ಇವೆಂಟ್ (Song Release Event) ಅಲ್ಲಿ ಸತೀಶ್ (Sathish) ಮತ್ತೆ ಸೀರಿಯಸ್ ಆಗಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
ಅದೆಷ್ಟು ನೆಗೆಟಿವ್ ಮಾಡ್ತಿರೋ ಮಾಡಿ
ತಪ್ಪಿದ್ದರೆ ಕಾಮೆಂಟ್ ಮಾಡಲಿ, ಅದನ್ನ ಒಪ್ಪಿಕೊಳ್ಳೋಣ. ಆದರೆ, ನೆಗೆಟಿವ್ ಮಾಡೋರಿಗೆ ಏನು ಹೇಳೋಣ. ಬರೀ ಅದನ್ನ ಮಾಡೋರಿಗೆ ಏನು ಹೇಳೋದು? ಅವರು ಅದೆಷ್ಟು ನೆಗೆಟಿವ್ ಕಾಮೆಂಟ್ ಮಾಡ್ತಾರೋ, ಅಷ್ಟು ನಾವು ಇನ್ನಷ್ಟು ಗಟ್ಟಿ ಆಗ್ತೀವಿ ಅಂತಲೇ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.
ಡೈರೆಕ್ಟರ್ ಮಹೇಶ್ ಕುಮಾರ್ ಬಗ್ಗೆನೂ ಸತೀಶ್ ಮಾತನಾಡಿದ್ದಾರೆ. ಮಹೇಶ್ 10 ವರ್ಷ ಸಿನಿಮಾ ಕಲಿತುಕೊಂಡಿದ್ದಾರೆ. 15 ವರ್ಷ ಇಂಡಸ್ಟ್ರಿಯಲ್ಲಿ ಮಣ್ಣು ಹೊತ್ತಿದ್ದಾರೆ.
ಆದರೆ, ಏನೋ ತಪ್ಪು ಮಾತನಾಡಿದ್ದಾರೆ ಅಂತ ಟ್ರೋಲ್ ಮಾಡ್ತಾನೇ ಇದ್ದಾರೆ. ಅದೆಷ್ಟು ಸರಿ ಹೇಳಿ? ಕಷ್ಟಪಟ್ಟವನಿಗೆ ಈ ರೀತಿ ಟ್ರೋಲ್ ಮಾಡಿದರೆ ಹೇಗೆ ಅನ್ನೋದನ್ನು ಸತೀಶ್ ಒತ್ತಿ ಹೇಳಿದ್ದಾರೆ.
ಈ ಹಿಂದಿನ ಮುದ್ದು ಲಕ್ಷ್ಮಿ ಹಾಡಿನ ಇವೆಂಟ್ ಅಲ್ಲಿ ಸತೀಶ್ ಸ್ಟ್ರಾಂಗ್ ಆಗಿಯೇ ಮಾತನಾಡಿದ್ದರು. ಇದರಿಂದ ಕೆಲವು ನಿರ್ಮಾಪಕರಿಗೆ ಬೇಸರ ಕೂಡ ಆಗಿತ್ತು.
ನಿರ್ಮಾಪಕರ ಸಂಘದಲ್ಲಿ ನಡೆದ ಪ್ರೆಸ್ ಮೀಟ್ಗೆ ಹೋಗಿ ಸತೀಶ್ ಕ್ಷಮೆ ಕೇಳಿದ್ದು ಆಯಿತು. ಆದರೆ, ಇದೇ ವಿಚಾರವನ್ನ ಅಣ್ಣ ಬಂದ್ರೆ ಹಾಡಿನ ರಿಲೀಸ್ ಇವೆಂಟ್ ಅಲ್ಲೂ ಸತೀಶ್ ನೆನಪಿಸಿಕೊಂಡಿದ್ದಾರೆ ಅಂತಲೇ ಹೇಳಬಹುದು.
ಅಯೋಗ್ಯ-2 ಚಿತ್ರದ ಅಣ್ಣ ಬಂದ್ರೆ ಸಾಂಗ್ ರಿಲೀಸ್ ಇವೆಂಟ್
ಚೇತನ್ ಬಹದ್ದೂರ್ ಈ ಚಿತ್ರದ ಅಣ್ಣ ಬಂದ್ರೆ ಹಾಡನ್ನ ಬರೆದಿದ್ದಾರೆ. ಇವರೂ ರಿಲೀಸ್ ಇವೆಂಟ್ಗೆ ಬಂದಿದ್ದರು. ಇವರೂ ತಮ್ಮ ಬೇಸರ ವ್ಯಕ್ತಪಡಿಸಿದರು.
ಎಲ್ಲರೂ ತಪ್ಪು ಮಾಡುತ್ತಾರೆ. ನಮ್ಮಿಂದಲೂ ತಪ್ಪಾಗುತ್ತದೆ. ಆದರೆ, ನೀವೇ ನಮಗೆ ಸಪೋರ್ಟ್ ಮಾಡ್ಬೇಕು ಅಂತಲೇ ಚೇತನ್ ಕುಮಾರ್ ಮಾಧ್ಯಮಗಳಿಗೆ ಕೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jul 09, 2026 11:19 AM IST













