Last Updated:
ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ಸ್ವಚ್ಛತಾ ಪಖ್ವಾಡಾಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಹಾಗೂ ನಟ ಸುರೇಶ್ ಗೋಪಿ ಸ್ವತಃ ಪೊರಕೆ ಹಿಡಿದು ಕಸ ಗುಡಿಸಿ, ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು
ದಕ್ಷಿಣ ಕನ್ನಡ: ತೆರೆಯ ಮೇಲೆ ಖಾಕಿ ತೊಟ್ಟು, ಖಡಕ್ ಡೈಲಾಗ್ಗಳ ಮೂಲಕ ರೌಡಿಗಳ ಎದೆ ನಡುಗಿಸುತ್ತಿದ್ದ ಆ ಪವರ್ಫುಲ್ ಪೊಲೀಸ್ ಆಫೀಸರ್, ಮಂಗಳೂರಿನ (Mangaluru) ಕದ್ರಿ ಪಾರ್ಕ್ನಲ್ಲಿ ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿದ್ದರೆ ನೆರೆದಿದ್ದವರಿಗೆ ಒಂದು ಕ್ಷಣ ಅಚ್ಚರಿ. ಹೌದು, ಇದು ಯಾವುದೋ ಸಿನಿಮಾದ ಶೂಟಿಂಗ್ ದೃಶ್ಯವಲ್ಲ. ಬದಲಾಗಿ, ಕೇರಳದ ತ್ರಿಶೂರ್ನಲ್ಲಿ ಇತಿಹಾಸ ಸೃಷ್ಟಿಸಿ, ಪ್ರಸ್ತುತ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವರಾಗಿರುವ (Minister) ಮಲಯಾಳಂನ ಖ್ಯಾತ ನಟ ಸುರೇಶ್ ಗೋಪಿ ಅವರ ಸರಳತೆಯ ಝಲಕ್.
ತೆರೆಯ ಮೇಲಿನ ‘ಭರತ್ ಚಂದ್ರನ್ ಐಪಿಎಸ್’ ಪಾತ್ರದ ಮೂಲಕ ದಕ್ಷಿಣ ಭಾರತದಾದ್ಯಂತ ಅಬ್ಬರಿಸಿದ್ದ ಈ ರಾಷ್ಟ್ರಪ್ರಶಸ್ತಿ ವಿಜೇತ ನಟ, ದಿಢೀರನೆ ಕರಾವಳಿಗೆ ಬಂದಿದ್ದೇಕೆ ಅನ್ನೋ ಕುತೂಹಲ ನಿಮ್ಮಲ್ಲೂ ಇರಬಹುದು. ಅಸಲಿಗೆ, ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಹಾಗೂ ನಗರದ ರಾಮಕೃಷ್ಣ ಮಠ ಜಂಟಿಯಾಗಿ ಆಯೋಜಿಸಿದ್ದ ‘ಸ್ವಚ್ಛತಾ ಪಖ್ವಾಡಾ-2026’ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲು ಸಚಿವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕೇವಲ ಭಾಷಣ ಮಾಡಿ ಹೋಗುವ ಬದಲು, ಸಚಿವರು ಮಾಡಿದ ಇನ್ನೊಂದು ಕೆಲಸ ಅಲ್ಲಿ ಸೇರಿದವರ ಮನಗೆದ್ದಿತು. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಕರೆ ನೀಡಿದ್ದ ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನದಡಿ, ಸುರೇಶ್ ಗೋಪಿ ಅವರು ತಮ್ಮ ಹೆತ್ತ ತಾಯಿ ಜ್ಞಾನಲಕ್ಷ್ಮಿ ಅವರ ನೆನಪಿನಲ್ಲಿ ಭಕ್ತಿಪೂರ್ವಕವಾಗಿ ಮಾವಿನ ಗಿಡವೊಂದನ್ನು ನೆಟ್ಟರು. ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಕೇಂದ್ರ ಸಚಿವರಾಗಿದ್ದರೂ ತಾಯಿಯ ಮೇಲಿನ ಅವರ ಈ ಪ್ರೀತಿ, ಪರಿಸರ ಕಾಳಜಿಯ ಜೊತೆಗೆ ಅವರ ವ್ಯಕ್ತಿತ್ವವನ್ನೂ ಅನಾವರಣಗೊಳಿಸಿತು.
ಮುಂದಿನ 15 ದಿನಗಳ ಭರ್ಜರಿ ಪ್ಲಾನ್!
ಪರದೆಯ ಮೇಲೆ ಹೀರೋ ಆಗಿದ್ದವರು, ಇಂದು ನೆಲಮಟ್ಟದಲ್ಲಿ ನಿಂತು ಸ್ವಚ್ಛತೆಯ ಪಾಠ ಮಾಡಿದ್ದಾರೆ. ಹೊರಗಿನಿಂದ ಬಂದ ಸಚಿವರೇ ಖುದ್ದಾಗಿ ನಮ್ಮ ಊರಿನ ರಸ್ತೆಗಿಳಿದು ಕಸ ಗುಡಿಸಿ ಜಾಗೃತಿ ಮೂಡಿಸುತ್ತಿರುವಾಗ, ಮಂಗಳೂರಿಗರಾದ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕಲ್ಲವೇ?
Dakshina Kannada,Karnataka
Jul 07, 2026 11:44 AM IST













