Last Updated:
ಕೇವಲ 15 ವರ್ಷ ಮತ್ತು 99 ದಿನಗಳಲ್ಲಿ ಪಾದಾರ್ಪಣೆ ಮಾಡಿದರೂ, ಸೂರ್ಯವಂಶಿ ಪೂರ್ಣ ಸದಸ್ಯ ರಾಷ್ಟ್ರಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಎರಡನೇ ಕಿರಿಯ ಪುರುಷ ಕ್ರಿಕೆಟಿಗ ಎನಿಸಿಕೊಂಡರು. ಹಾಗಾದರೆ ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಎಂಬುದನ್ನ ತಿಳಿಯೋಣ.
ಕ್ರಿಕೆಟ್ ಜಗತ್ತಿನಲ್ಲಿ, ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎನ್ನುವುದು ಮತ್ತೊಮ್ಮೆ ನಿಜವಾಗಿದೆ. ಭಾರತದ ಉದಯೋನ್ಮುಖ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಶನಿವಾರ ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐನಲ್ಲಿ ಭಾರತ ಕ್ರಿಕೆಟ್ ಕ್ಯಾಪ್ ಪಡೆದುಕೊಂಡರು. ಈ ಅವಕಾಶದೊಂದಿಗೆ ಅವರು ಹಲವಾರು ಪ್ರಮುಖ ದಾಖಲೆಗಳನ್ನು ಮುರಿದರು. ಅವರು ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಪುರುಷ ಆಟಗಾರ ಮಾತ್ರವಲ್ಲದೆ, ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳಲ್ಲಿ ಟಿ20 ಸ್ವರೂಪದಲ್ಲಿ ಆಡಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗರಾದರು. ಕೇವಲ 15 ವರ್ಷ ಮತ್ತು 99 ದಿನಗಳಲ್ಲಿ ಪಾದಾರ್ಪಣೆ ಮಾಡಿದರೂ, ಸೂರ್ಯವಂಶಿ ಪೂರ್ಣ ಸದಸ್ಯ ರಾಷ್ಟ್ರಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಎರಡನೇ ಕಿರಿಯ ಪುರುಷ ಕ್ರಿಕೆಟಿಗ ಎನಿಸಿಕೊಂಡರು. ಹಾಗಾದರೆ ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಎಂಬುದನ್ನ ತಿಳಿಯೋಣ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಡಿಮೆ ವಯಸ್ಸಿಗೆ ಪದಾರ್ಪಣೆ ಮಾಡಿದ ವಿಶ್ವದಾಖಲೆ ಪಾಕಿಸ್ತಾನದ ಹಸನ್ ರಾಜಾ ಹೆಸರಿನಲ್ಲಿದೆ. ಅವರು ಮೂವತ್ತು ವರ್ಷಗಳ ಹಿಂದೆ, ಅಕ್ಟೋಬರ್ 1996 ರಲ್ಲಿ, ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹಸನ್ ರಜಾಗೆ ಪಾಕಿಸ್ತಾನ ಅವಕಾಶ ನೀಡಿತು. ಆ ಸಂದರ್ಭದಲ್ಲಿ ಅವರ ವಯಸ್ಸು ಕೇವಲ 14 ವರ್ಷ, 227 ದಿನಗಳು. ಇಲ್ಲಿಯವರೆಗೂ ಇದು ವಿಶ್ವದಾಖಲೆಯಾಗಿ ಉಳಿದುಕೊಂಡಿದೆ.
ಭಾರತದ ವೈಭವ್ ಸೂರ್ಯವಂಶಿ ಜೂನ್ 26, 2026 ರಂದು ಇಂಗ್ಲೆಂಡ್ ವಿರುದ್ಧ 15 ವರ್ಷ 99 ದಿನಗಳಲ್ಲಿ ಟಿ20ಐಗೆ ಪಾದಾರ್ಪಣೆ ಮಾಡಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಬಾಂಗ್ಲಾದೇಶದ ಮೊಹಮ್ಮದ್ ಶರೀಫ್ ಹೆಸರಿನಲ್ಲಿದ್ದು, ಅವರು ಏಪ್ರಿಲ್ 7, 2001 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು, 15 ವರ್ಷ 116 ದಿನಗಳಾಗಿತ್ತು.
ಇದಲ್ಲದೆ ನಾವು ಅಸೋಸಿಯೇಟ್ ಅಥವಾ ಪೂರ್ಣ ಸದಸ್ಯತ್ವ ಪಡೆಯದ ರಾಷ್ಟ್ರಗಳನ್ನು ಪರಿಗಣಿಸಿದರೆ, ವೈಭವ್ ಸೂರ್ಯವಂಶಿ ಅಗ್ರ 10 ರಲ್ಲಿ ಸ್ಥಾನ ಪಡೆಯುವುದಿಲ್ಲ. ಸಣ್ಣ ಪುಟ್ಟ ಯುರೋಪಿಯನ್ ರಾಷ್ಟ್ರಗಳು ಪ್ರತಿ ವರ್ಷ ನೂರಾರು T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತವೆ, ಅವುಗಳಲ್ಲಿ ಹಲವು ಅರೆ-ವೃತ್ತಿಪರರಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರೊಮೇನಿಯಾದ ಮರಿಯನ್ ಗೆರಾಸಿಮ್ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಅತ್ಯಂತ ಕಿರಿಯ ಆಟಗಾರ, ಕೇವಲ 14 ವರ್ಷ ಮತ್ತು 16 ದಿನಗಳಲ್ಲಿ ಪಾದಾರ್ಪಣೆ ಮಾಡಿದರು. ಗೆರಾಸಿಮ್ ಒಟ್ಟು 12 ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೊನೆಯದಾಗಿ 2022 ರಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.
ಮಹಿಳೆಯರ ಹಾಗೂ ಪುರುಷರ ಕ್ರಿಕೆಟ್ ಎರಡನ್ನೂ ಒಟ್ಟಾರೆ ಪರಿಗಣಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವಿಶ್ವದಾಖಲೆ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ಸಜ್ಜಿದಾ ಷಾ ಹೆಸರಿನಲ್ಲಿದೆ. ಅವರು ಜುಲೈ 23, 2000 ರಂದು ಐರ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 12 ವರ್ಷ 171 ದಿನಗಳು. ಈ ದಾಖಲೆಯು ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಆಟಗಾರ್ತಿಯನ್ನಾಗಿ ಮಾಡಿದೆ.
Jul 04, 2026 10:27 PM IST













