Last Updated:
ನಾಯಕ ನಟ ವಿನಯ್ ರಾಜ್ಕುಮಾರ್ (Vinay Rajkumar) ತಮ್ಮ ಮತ್ತು ಅಪರ್ಣಾ ಅವರ ಒಂದು ಘಟನೆಯನ್ನು ಹೇಳಿಕೊಂಡಿದ್ದಾರೆ. ಆ ದಿನವನ್ನ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.
ಗ್ರಾಮಾಯಣ ಚಿತ್ರ (Graamaayana Movie) ರೆಡಿ ಆಗಿದೆ. ರಿಲೀಸ್ಗೂ ಸಜ್ಜಾಗುತ್ತಿದೆ. ಜುಲೈ-3 ರಂದು ಈ ಚಿತ್ರ ತೆರೆ ಕಾಣುತ್ತಿದೆ. ಸಿನಿಮಾ ಪ್ರಚಾಕ್ಕಾಗಿ ವಿನಯ್ ರಾಜಕುಮಾರ್ ಹಾಗೂ ನಾಯಕಿ ಮೇಘಾ ಶೆಟ್ಟಿ (Megha Shetty) ಚಿತ್ರದ ಹಲವು ವಿಶೇಷ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನಾಯಕ ನಟ ವಿನಯ್ ರಾಜ್ಕುಮಾರ್ (Vinay Rajkumar) ತಮ್ಮ ಮತ್ತು ಅಪರ್ಣಾ ಅವರ ಒಂದು ಘಟನೆಯನ್ನು ಹೇಳಿಕೊಂಡಿದ್ದಾರೆ. ಆ ದಿನವನ್ನ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.
ಅಮ್ಮ ಬಂದಿದ್ದರು ಆ ದಿನ…
ಆದರೆ, ವಿನಯ್ ಅಮ್ಮ ಮಂಗಳಾ ಅವರ ಎದುರು ಅಪರ್ಣಾ ಹೇಗೆ ಹೊಡೆಯುತ್ತಾರೆ. ತುಂಬಾನೆ ಯೋಚನೆ ಮಾಡಿದರು. ಆ ಮೇಲೆ ವಿನಯ್ಗೆ ಹೇಳಿದರು. ನಿಮ್ಮ ಅಮ್ಮ ಇಲ್ಲಿ ಎದುರಿಗೆ ಇದ್ದರೆ ಪೊರಕೆಯಿಂದ ನಿನ್ನ ಹೊಡೆಯೋದು ನನಗೆ ಕಷ್ಟವಾಗುತ್ತದೆ ಅಂತ ಹೇಳಿಯೇ ಬಿಟ್ಟರು.
ಈ ಒಂದು ಪೊರಕೆ ಸೀನ್ ಮುಗಿಯೋವರೆಗೂ ಅಮ್ಮನನ್ನ ಕ್ಯಾರವಾನ್ಗೆ ಕರೆದುಕೊಂಡು ಹೋಗಿ ಬಿಟ್ಟು ಬಿಡು. ಸೀನ್ ಮುಗಿದ್ಮೇಲೆ ಬರಲಿ ಅನ್ನುವ ಅರ್ಥದಲ್ಲಿಯೇ ಹೇಳಿದ್ದರು. ವಿನಯ್ ಆಗ ಏನು ಮಾಡಿದರು ಅಂತ ಹೇಳಲಿಲ್ಲ. ಆದರೆ, ಅಪರ್ಣಾ ಪೊರಕೆ ಸೀನ್ ಮುಗಿದ್ಮೇಲೆ ಮತ್ತೆ ಏನು ಮಾಡಿದರು ಅಂತ ಹೇಳಿಕೊಂಡಿದ್ದಾರೆ.
ಹೌದು, ಅಪರ್ಣಾ ಅವರು ಇದನ್ನೇ ಮಾಡಿದ್ದಾರೆ. ನಿಮಗೆ ಪೊರಕೆಯಿಂದ ಹೊಡೆದು ಬಿಟ್ಟೆ ಅಂತ ಬೇಸರ ಮಾಡಿಕೊಂಡಿದ್ದಾರೆ. ಮತ್ತೆ ಮತ್ತೆ ಕ್ಷಮೆನೂ ಕೇಳಿದ್ದಾರೆ.
ಮತ್ತೆ ಮತ್ತೆ ಕ್ಷಮೆ ಕೇಳಿದರು
ಈ ಒಂದು ವಿಷಯವನ್ನ ವಿನಯ್ ರಾಜಕುಮಾರ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ವಿನಯ್ ರಾಜ್ಕುಮಾರ್ ತಮ್ಮ ಈ ಚಿತ್ರದ ಕುರಿತು ಬೇರೆ ಬೇರೆ ಯುಟ್ಯೂಬ್ ಚಾನೆಲ್ಗಳಲ್ಲಿ ಚಿತ್ರದ ಇಂಟ್ರಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಗ್ರಾಮಾಯಣ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಜುಲೈ-3 ರಂದು ಈ ಸಿನಿಮಾ ರಾಜ್ಯದೆಲ್ಲೆಡೆ ತೆರೆ ಕಾಣಿಸುತ್ತಿದೆ. ದೇವನೂರು ಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಹಳ್ಳಿ ಹಿನ್ನೆಲೆಯ ಈ ಕತೆಗೆ ತಕ್ಕನಾದ ಹಾಡುಗಳನ್ನೆ ಮಾಡಿದ್ದಾರೆ. ಹಾಗೆ ಹಾಡುಗಳು ಚೆನ್ನಾಗಿಯೇ ಬಂದಿವೆ. ಈ ಚಿತ್ರದಲ್ಲಿ ಕ್ಯಾಮರಾಮನ್ ಸಂತೋಷ್ ರೈ ಪಾತಾಜೆ ಒಳ್ಳೆ ಕೆಲಸ ಮಾಡಿದ್ದಾರೆ. ಇವರ ಕೆಲಸದ ಝಲಕ್ ಟ್ರೈಲರ್ ಅಲ್ಲೂ ಸಿಗುತ್ತದೆ. ಚಿತ್ರದ ಹಾಡುಗಳಲ್ಲೂ ಕಾಣಿಸುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 03, 2026 10:13 PM IST













