ಮದರ್ ಪ್ರಾಮಿಸ್ ಚಿತ್ರದ ಪ್ರಚಾರ ಜೋರಾಗಿಯೇ ಇದೆ. ಚಿತ್ರದ ರಿಲೀಸ್ ದಿನಗಳು ಹತ್ತಿರಕ್ಕೆ ಬಂದಂತೆ ಕಂಟೆಂಟ್ ಕೂಡ ಒಂದೊಂದಾಗಿಯೇ ರಿವಿಲ್ ಆಗುತ್ತಿವೆ.
ಮೊನ್ನೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಇದರಲ್ಲಿ ಈ ಚಿತ್ರದ ಕೆಲವು ವಿಷಯ ರಿವೀಲ್ ಆಗಿತ್ತು. ಇದೊಂದು ರೌಡಿಸಂ ಚಿತ್ರ ಅನ್ನುವ ಅಭಿಪ್ರಾಯವೂ ಬರುತ್ತದೆ. ಆದರೆ ಈ ಸಿನಿಮಾದ ಒಳಗೆ ಬೇರೆ ವಿಷಯ ಇದೆ ಅನ್ನೋದನ್ನ ಸ್ವತಃ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.
ಮದರ್ ಪ್ರಾಮಿಸ್ ಚಿತ್ರದಲ್ಲಿ ಸಾಕಷ್ಟು ವಿಷಯಗಳಿವೆ. ಇದನ್ನ ಬಿಂಬಿಸುವಂತಹ ಒಂದು ಗೀತೆ ಹೊರ ಬಂದಿದೆ. ಇದನ್ನ ಚಿತ್ರ ತಂಡ ಪ್ರಾರ್ಥನಾ ಗೀತೆ ಅಂತಲೇ ಹೇಳಿಕೊಂಡಿದೆ.
ಇದನ್ನ ನೋಡಿದಾಗಲೂ ಅದೇ ಭಾವನೆ ಮೂಡುತ್ತದೆ. ಕಾರಣ, ಇಡೀ ಹಾಡನ್ನ ತುಮಕೂರಿನ ಸಿದ್ಧಗಂಗಾ ಮಠದಲ್ಲಿಯೇ ಶೂಟ್ ಮಾಡಲಾಗಿದೆ. ಇಡೀ ದಿನ ಚಿತ್ರ ತಂಡ ಇಲ್ಲಿ ಸಮಯ ಕಳೆದಿದೆ. ಪ್ರಾರ್ಥನೆಯ ಸಮಯದಿಂದ ಹಿಡಿದು, ಕ್ಲಾಸ್ಗಳಲ್ಲೂ ವಿದ್ಯಾರ್ಥಿಗಳ ರೀತಿನೇ ಮಕ್ಕಳ ಜೊತೆಗೆ ಮದರ್ ಪ್ರಾಮಿಸ್ ತಂಡ ಸಮಯ ಕಳೆದಿದೆ.
ಡಾಲಿ ಧನಂಜಯ್
ಓ ಬೆಳಕೆ ಬಾ ಮನಕೆ ತುಂಬಿಕೆೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ
ನಾನೆನ್ನುವೆ ಎಲ್ಲ ನನ್ನದೆಂಬುವೆ
ನೀನಿಲ್ಲದ ನಾನು ಡಂಬನಲ್ಲವೇ
ದಂಡಿಸು ದಮನಿಸು ನಾನೆಂಬ ಭಾವವ
ಕರುಣಿಸು ಅರಳಿಸು ನಾವೆಂಬ ಬಾಳ್ವೆಯ
ಓ ಬೆಳಕೆ ಬಾ ಮನಕೆ ತುಂಬಿಕೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ
ಈ ಒಂದು ಗೀತೆಯ ಚರಣ ಇನ್ನೂ ಇದೆ. ತುಂಬಾನೆ ದೊಡ್ಡ ಹಾಡು ಅಂತಲೂ ಅನಿಸುತ್ತದೆ. ಆದರೆ, ಇದು ಕೇವಲ 3 ನಿಮಿಷ 13 ಸೆಕೆಂಡ್ನ ಹಾಡು ಇದಾಗಿದೆ.

ಈ ಒಂದು ಹಾಡಿನಲ್ಲಿ ಈಗೀನ ಸಿದ್ಧಗಂಗಾ ಮಠದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕೂಡ ಇದ್ದಾರೆ. ಇವರ ಪಕ್ಕದಲ್ಲಿ ಡಾಲಿ ಧನಂಜಯ್ ಗುರುಗಳ ಕಾಲಡಿ ಕುಳಿತಿದ್ದಾರೆ. ಮಕ್ಕಳ ಪ್ರಾರ್ಥನೆಯ ಈ ಒಂದು ಹಾಡು ತುಂಬಾನೆ ಚೆನ್ನಾಗಿದೆ. ಶಾಲೆಯಲ್ಲೂ ಇದನ್ನ ಹಾಡಬಹುದು. ಆ ರೀತಿನೇ ಇದೆ.
ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ಮಾಡಿದ್ದಾರೆ. ಈ ಒಂದು ಹಾಡಿನ ವಿಚಾರದಲ್ಲೂ ಉತ್ತಮ ಸಂಗೀತವೇ ಮಾಡಿದ್ದಾರೆ. ಚಿತ್ರದ ವಿಚಾರಕ್ಕೆ ಬಂದರೆ ಡಾಲಿ ಧನಂಜಯ್ ಗೆಳೆಯ ಪೂರ್ಣ ಮೈಸೂರು ಇದನ್ನ ಡೈರೆಕ್ಷನ್ ಮಾಡಿದ್ದಾರೆ.
ಈ ಚಿತ್ರದಲ್ಲಿ ರಾಜಕುಮಾರ್ ಅವರ ಚಿತ್ರಗಳ ನಾಯಕಿ ಗೀತಾ ನಟಿಸಿದ್ದಾರೆ. ಹಿರಿಯ ನಟಿ ವಿನಯ್ ಪ್ರಸಾದ್ ಸಹ ಅಭಿನಯಿಸಿದ್ದಾರೆ. ಹೊಸಬರ ದಂಡೇ ಈ ಚಿತ್ರದಲ್ಲಿದೆ. ಜುಲೈ-10 ರಂದು ಈ ಚಿತ್ರ ತೆರೆ ಕಾಣುತ್ತಿದೆ. ಇದರ ಪ್ರಚಾರ ಜೋರಾಗಿಯೇ ಇದೆ ಅಂತ ಹೇಳಬಹುದು.












