Heavy Rain Across India: ಕೊನೆಗೂ ಎಚ್ಚರಗೊಂಡ ಮಾನ್ಸೂನ್ ಮಾರುತಗಳು; ಭಾರೀ ಮಳೆಗೆ ಸಿದ್ಧತೆ ಮಾಡಿಕೊಳ್ಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಗೇರ್ ಬದಲಿಸಿದ ಮಾನ್ಸೂನ್ ಮಾರುತಗಳು!


Last Updated:

ಭಾರತದಲ್ಲಿ ಮಾನ್ಸೂನ್ ತೀವ್ರ, ಬಂಗಾಳ ಕೊಲ್ಲಿಯಲ್ಲಿ ಎರಡು ಕಡಿಮೆ ಒತ್ತಡ ಪ್ರದೇಶಗಳು ರೂಪುಗೊಳ್ಳುವ ನಿರೀಕ್ಷೆ ಇದ್ದು, ಇದು ಮಧ್ಯ ಭಾರತದ ಕಡೆಗೆ ಚಲಿಸಿ ದೇಶದಾದ್ಯಂತ ತೇವಾಂಶ ಹೆಚ್ಚಿಸಲಿದೆ.

ಗೇರ್ ಬದಲಿಸಿದ ಮಾನ್ಸೂನ್ ಮಾರುತಗಳು!
ಗೇರ್ ಬದಲಿಸಿದ ಮಾನ್ಸೂನ್ ಮಾರುತಗಳು!

ಭಾರತದಲ್ಲಿ ಕೊನೆಗೂ ಮಾನ್ಸೂನ್​ ಮಳೆ (Monsoon Rains) ತನ್ನ ಪ್ರಭಾವ ಹೆಚ್ಚಾಗುತ್ತಿದೆ. ಎರಡು ಕಡಿಮೆ ಒತ್ತಡ ಪ್ರದೇಶಗಳು ಸೃಷ್ಟಿಸಿಯಾಗಿರುವ ಪರಿಣಾಮ ಮಾನ್ಸೂನ್ ಭಾರತದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯನ್ನು ಸುರಿಸಲಿದೆ ಎಂದು ಹವಾಮಾನ ತಜ್ಞರು (India Meteorological Department) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತ ಸೇರಿದಂತೆ ಭಾರತ ಬಹುತೇಕ ಪ್ರದೇಶದಲ್ಲಿ ಜೂನ್ ಅಂತ್ಯದ ವರೆಗೂ ತೀವ್ರ ಉಷ್ಣಾಂಶ ಹೆಚ್ಚಾಗಿತ್ತು. ಆದರೆ ಇದು ಜುಲೈ ತಿಂಗಳಿನಲ್ಲಿ ಬದಲಾವಣೆಯಾಗಲಿದೆ. ಪ್ರಮುಖವಾಗಿ ಜುಲೈ 01 ಅಂದರೆ ನಾಳೆಯಿಂದ ಜುಲೈ 05ರ ವರೆಗೂ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಪಶ್ಚಿಮ ಭಾಗಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಎರಡು ಕಡಿಮೆ ಒತ್ತಡ ಪ್ರದೇಶಗಳು ರೂಪುಗೊಳ್ಳುವ ನಿರೀಕ್ಷೆ ಇದ್ದು, ಇದು ಮಧ್ಯ ಭಾರತದ ಕಡೆಗೆ ಚಲಿಸಿ ದೇಶದಾದ್ಯಂತ ತೇವಾಂಶ ಹೆಚ್ಚಿಸಲಿದೆ. ಪಶ್ಚಿಮ ಕರಾವಳಿ ಮತ್ತು ಮುಂಬೈನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಕೆಲವು ಪ್ರದೇಶಗಳಲ್ಲಿ ಸುಮಾರು 500 ಮೀಮೀ ವರೆಗೂ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಬರೋಬ್ಬರಿ ಒಂದು ತಿಂಗಳ ಬಳಿಕ ಮಾನ್ಸೂನ್ ಮಾರುತಗಳು ಗೇರ್ ಬದಲಾವಣೆ ಮಾಡಿ ಸಂಪೂರ್ಣವಾಗಿ ಚಲಿಸುತ್ತಿದ್ದು, ಈ ಬದಲಾವಣೆಯಿಂದ ಉತ್ತರ ಭಾರತದಲ್ಲಿ ಶುಷ್ಕ ವಾತಾವರಣ ಕೊನೆಗೊಳ್ಳಲಿದೆ. ಮುಂದಿನ 2-3 ದಿನಗಳಲ್ಲಿ ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಡಿಯು ದಮನ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಲಡಾಖ್, ಕಾಶ್ಮೀರ, ಜಮ್ಮು, ಹರಿಯಾಣ, ದೆಹಲಿ, ಪಂಜಾಬ್ ಹಾಗೂ ರಾಜಸ್ಥಾನ ಕೆಲವು ಭಾಗಗಳಲ್ಲಿ ಮಾನ್ಸೂನ್ ಮಾರುತಗಳ ಮಳೆ ಸುರಿಸಲಿದೆ. ವಿಶೇಷ ಎಂದರೆ, ಈಗಾಗಲೇ ಭಾರೀ ಮಳೆಯಾಗುತ್ತಿದ್ದ ಪ್ರದೇಶಗಳಲ್ಲಿ ಪ್ರವಾಹ, ವಾಹನ ಸಂಚಾರಕ್ಕೆ ಅಡಚಣೆ ಸೇರಿದಂತೆ ವಿದ್ಯುತ್ ವ್ಯತ್ಯಯಗಳು ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗಾಳಿಯೊಂದಿಗೆ ಭಾರೀ ಮಳೆ ಮುನ್ಸೂಚನೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ನೀಡಿರುವ ಮಾಹಿತಿ ಅನ್ವಯ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 02ರ ವರೆಗೂ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜುಲೈ 01 ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಇದನ್ನೂ ಓದಿ: Earn with Bed: ಬಾಡಿಗೆಗೆ ಸಿಗುತ್ತೆ ಅರ್ಧ ಬೆಡ್, ಮಹಿಳೆಯ ಪಕ್ಕದಲ್ಲೇ ನಿದ್ದೆ ಮಾಡುವ ಆಫರ್! ಷರತ್ತುಗಳು ಅನ್ವಯ!

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕರ್ನಾಟಕದಲ್ಲಿ ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ, ಬಳ್ಳಾರಿ, ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಾಮರಾಜನಗರ, ಮತ್ತು ಇತರ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed