Last Updated:
Rishab Shetty: ನಟ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ತುಳುನಾಡ ಆಚರಣೆಗಳನ್ನು ಹೈಲೈಟ್ ಮಾಡುವ ಭಕ್ತಿ ತರಂಗ ಎನ್ನುವ ಕಾರ್ಯಕ್ರಮ ನಡೆದಿದೆ. ಆ ಕಾರ್ಯಕ್ರಮ ಹೇಗಿತ್ತು?
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾ ಆಗಲಿ, ವೈಯಕ್ತಿಕ ಬದುಕಾಗಲಿ ಅಭಿಮಾನಿಗಳ (Fans) ಜೊತೆ ಫಾಲೋವರ್ಸ್ ಜೊತೆ ತಮ್ಮ ಅಪ್ಡೇಟ್ಸ್ ಶೇರ್ ಮಾಡುತ್ತಲೇ ಇರುತ್ತಾರೆ. ನಟ ಇತ್ತೀಚೆಗೆ ಅವರ ಮನೆಯಲ್ಲಿ ನಡೆದಂತಹ ಭಕ್ತಿ ತರಂಗ (Bhakti Taranga) ಎನ್ನುವ ಕಾರ್ಯಕ್ರಮದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ರಾಮ ಭಜನೆ ಹಾಗೂ ಯಕ್ಷಗಾನದ ಸುಂದರ ಸಂಜೆ ಎಂದು ಬರೆದು ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನೆಡೆದಾಗ ಮನ ತುಂಬಿದ ಕ್ಷಣಗಳು ಎಂದೂ ಅವರು ಬರೆದಿದ್ದಾರೆ. ನಾವು ನಮ್ಮ ಮೂಲ ಏನೆಂದು ಹೇಳುವುದಿಲ್ಲ, ನಮ್ಮ ಮೂಲವೇ ನಾವೇನೆಂಬುದನ್ನು ಹೇಳುತ್ತದೆ ಎಂದು ಬರೆದು, ಜೈ ಶ್ರೀರಾಮ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
ಒಣಗಿದ ಮಡಲಿನ ಚಪ್ಪರ, ಕೇಸರಿ ತೋರಣ, ನಾಗ ಪೂಜೆ ಎಲ್ಲವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ. ಇದಲ್ಲದೆ ಕುಣಿತ ಭಜನೆಯ ಒಂದು ಝಲಕ್ ಕೂಡಾ ಇಲ್ಲಿ ತೋರಿಸಲಾಗಿದೆ.
ರಿಷಬ್ ಶೆಟ್ಟಿ ಅವರ ಮಗನೂ ಯಕ್ಷಗಾನ ವೇಷ ಧರಿಸುವುದನ್ನು ತೋರಿಸಲಾಗಿದೆ. ಹೆಣ್ಣುಮಕ್ಕಳ ಕುಣಿತ ಭಜನೆಯೂ ಇತ್ತು. ಚೆಂಡೆ ಮೇಳ, ಸಾಂಸ್ಕೃತಿಕ ವೈಭವ, ಸಂಭ್ರಮ ಅದ್ಧೂರಿಯಾಗಿ ಭಕ್ತಿಯಿಂದ ನಡೆದಿದೆ. ಕೊನೆಯಲ್ಲಿ ರಿಷಬ್ ಅವರು ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿತ್ತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿತ್ತು.
Bangalore,Karnataka













