ಈ ದಿನ ಏನ್ ವಿಶೇಷ ಗೊತ್ತಾ?
(ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್)
ಸ್ಪಂದನಾ ಜನ್ಮ ದಿನದ ಕೆಲವು ಫೋಟೋ ಹಾಗೂ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈ ಒಂದು ವಿಡಿಯೋದಲ್ಲಿ ಫೋಟೋಗಳೂ ಇವೆ. ಸ್ಪಂದನಾ ಮಗು ತರ ಕಾಣಿಸಿಕೊಂಡ ಕ್ಷಣಗಳು ಇವೆ.
ಸ್ಪಂದನಾ ತಮ್ಮ ಜನ್ಮ ದಿನದಂದು ಮಗು ತರ ಮಗು ಜೊತೆಗೆ ಆಟವಾಡಿರೋ ಒಂದು ವಿಡಿಯೋ ಇದೆ. ಅದನ್ನ ವಿಜಯ್ ರಾಘವೇಂದ್ರ ಜತನದಿಂದಲೇ ಇಟ್ಟಕೊಂಡಿದ್ದಾರೆ.
ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರು ಜೊತೆಗಿರೋ ಒಂದು ಕ್ಲಿಪ್ ಇದರಲ್ಲಿದೆ. ಈ ಒಂದು ಕ್ಲಿಪ್ ಅಲ್ಲಿ ಸ್ಪಂದನಾ ಪಕ್ಕದಲ್ಲಿದ್ದಾರೆ. ವಿಜಯ್ ರಾಘವೇಂದ್ರ ಮಾತನಾಡುತ್ತಿದ್ದಾರೆ.
ಜನ್ಮ ದಿನಕ್ಕೆ ವಿಶ್ ಮಾಡಿರೋ ಪ್ರತಿಯೊಬ್ಬರಿಗೂ ಧನ್ಯವಾದಗಳು ಅಂತಲೇ ವಿಜಯ್ ರಾಘವೇಂದ್ರ ಹೇಳ್ತಾರೆ. ಆದರೆ, ಸ್ಪಂದನಾ ಏನು ಮಾತನಾಡೋದೇ ಇಲ್ಲ. ಅಷ್ಟೆ ಪ್ರೀತಿಯಿಂದಲೇ ವಿಜಯ್ ರಾಘವೇಂದ್ರ ಮಾತನಾಡುವಂತೆ ಒತ್ತಾಯ ಮಾಡ್ತಾರೆ. ಆದರೂ ಸ್ಪಂದನಾ ಏನೂ ಮಾತ್ ಆಡೋದೇ ಇಲ್ಲ.
ಸ್ಪಂದನಾ ನೆನಪಿನಲ್ಲಿ….
(ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್)
ಸ್ಪಂದನಾ ಮಾತೇನೋ ಆಡೋಡಿಲ್ಲ. ಆದರೆ, ಮಗು ಜೊತೆಗೆ ಅದೆಷ್ಟು ಮಗು ಆಗ್ತಾರೆ ನೋಡಿ ಅಂತಲೇ ಹೇಳ್ತಾರೆ. ವಿಡಿಯೋದ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಮಾತನಾಡಿರೋದು ಕೂಡ ಈ ಒಂದು ವಿಶೇಷ ವಿಡಿಯೋದಲ್ಲಿಯೇ ಇದೆ.
ವಿಜಯ್ ರಾಘವೇಂದ್ರ ಅವರು ಸ್ಪಂದನಾ ನೆನಪಿನಲ್ಲಿಯೇ ಇದ್ದಾರೆ. ಪ್ರತಿ ದಿನವು, ಪ್ರತಿ ಕ್ಷಣವೂ ಪತ್ನಿಯನ್ನ ನೆನಪಿಸಿಕೊಳ್ತಾನೇ ಇರ್ತಾರೆ.
ಆದರೆ, ಈಗ ಹಂಚಿಕೊಂಡಿರೋ ವಿಡಿಯೋ ವಿಶೇಷ ಅಂದ್ರೆ, ಜೂನ್-28 ರಂದು ಸ್ಪಂದನಾ ಜನ್ಮ ದಿನ ಇದೆ. ಇವರ ಈ ವರ್ಷದ 40 ನೇ ಜನ್ಮ ದಿನಕ್ಕೆ ವಿಜಯ್ ರಾಘವೇಂದ್ರ ಹೀಗೆ ವಿಶ್ ಮಾಡಿದ್ದಾರೆ. ವಿಜಯ್ ಬರೆದ ಸಾಲುಗಳು ಹೀಗಿವೆ …
I LOVE YOU ನನ್ ಚಿನ್ನ!
ಈ ಸಾಲುಗಳನ್ನ ನೋಡಿದ ಅನೇಕರು ಸ್ಪಂದನಾ ಅವರಿಗೆ ಹ್ಯಾಪಿ ಬರ್ತ್ ಡೇ ವಿಶ್ ಮಾಡಿದ್ದಾರೆ. ಇನ್ನು ಕೆಲವರು ರೆಡ್ ಹಾರ್ಟ್ ಇಮೋಜಿ ಕಳಿಸಿ ವಿಶ್ ಮಾಡಿದ್ದಾರೆ ಅಂತಲೂ ಹೇಳಬಹುದು.












