Last Updated:
Jason Sanjay: ಖ್ಯಾತ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರು ಇತ್ತೀಚೆಗೆ ಚೆಕ್ಸ್ ಶರ್ಟ್ ಧರಿಸಿ ಕಾಣಿಸಿಕೊಂಡರು. ಅವರ ಶರ್ಟ್ ತಕ್ಷಣ ವೈರಲ್ ಆಯಿತು. ಅದರ ಬೆಲೆ ಎಷ್ಟು ಗೊತ್ತಾ?
ಇತ್ತೀಚೆಗೆ ನಟ, ಸಿಎಂ ವಿಜಯ್ (CM Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಏರ್ಪೋರ್ಟ್ನಲ್ಲಿ (Airport) ಕಾಣಿಸಿಕೊಂಡಿರುವ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ತಕ್ಷಣ ವೈರಲ್ (Viral) ಆಯಿತು. ಸ್ಟಾರ್ ನಟ, ತಮಿಳುನಾಡಿನ ಸಿಎಂ ಮಗನಾದರೂ ಜೇಸನ್ ಸಂಜಯ್ ಸರಳತೆ ಯಾವಾಗಲೂ ನೆಟ್ಟಿಗರ ಮನಸು ಗೆಲ್ಲುತ್ತದೆ. ತಾತ ಡೈರೆಕ್ಟರ್, ಅಜ್ಜಿ ಸಿಂಗರ್, ಅಪ್ಪ ಸ್ಟಾರ್ ಹೀರೋ, ಸಿಎಂ ಆದರೂ ಜೇಸನ್ ಸರಳತೆಗೆ ಇನ್ಯಾವುದೂ ಮ್ಯಾಚ್ ಆಗಲ್ಲ.
ಇತ್ತೀಚೆಗೆ ಜೇಸನ್ ಸಂಜಯ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಾಗ ಅವರು ಧರಿಸಿದ್ದ ಶರ್ಟ್ ಎಲ್ಲರ ಗಮನ ಸೆಳೆಯಿತು. ಸೆಲೆಬ್ರಿಟಿಗಳು ಸಾವಿರಾರು ಬೆಲೆಯ ಟೀ ಶರ್ಟ್, ಲಕ್ಷಗಟ್ಟಲೆ ಬೆಲೆಯ ಶರ್ಟ್ ಧರಿಸೋದು ವಿಶೇಷ ಏನಲ್ಲ.
ಆದರೆ ಜೇಸನ್ ಸಂಜಯ್ ಧರಿಸಿದ್ದ ಚೆಕ್ಸ್ ಶರ್ಟ್ ತಕ್ಷಣವೇ ಎಲ್ಲರ ಗಮನ ಸೆಳೆಯಿತು. ಆ ಶರ್ಟ್ ಬೆಲೆ ಎಷ್ಟು? ಅದರ ಬ್ರ್ಯಾಂಡ್ ಯಾವುದು ಅಂತ ನೆಟ್ಟಿಗರು ಹುಡುಕಾಡೋಕೆ ಶುರು ಮಾಡಿದರು. ಹಾಗಾಗದರೆ ಆ ಶರ್ಟ್ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಜೇಸನ್ ಸಂಜಯ್ ಧರಿಸಿದ್ದು ಟಾಮಿ ಹಿಲ್ಫಿಗರ್ ಬ್ರ್ಯಾಂಡ್ನ ಚೆಕ್ಸ್ ಶರ್ಟ್. ಇದು ಆಲಿವ್ ಗ್ರೀನ್ ಕಲರ್ನಲ್ಲಿದೆ. ಲಾಂಗ್ ಸ್ಲೀವ್, ರೆಗ್ಯುಲರ್ ಸೈಜ್ ಶರ್ಟ್ ಧರಿಸಿದ್ದ ಜೇಸನ್ ಅವರ ಲುಕ್ ತಕ್ಷಣ ವೈರಲ್ ಆಯಿತು. ಇದು ಪ್ರೀಮಿಯಂ ಸಾಫ್ಟ್ ಫ್ಲೆಕ್ಸ್ ಕಾಟನ್ ಫ್ಯಾಬ್ರಿಕ್ನಲ್ಲಿರುತ್ತದೆ.
ಇನ್ನು ಇದರ ಬೆಲೆಯ ಬಗ್ಗೆ ನೋಡೋದಾದರೆ ಇದರ ಒರಿಜಿನಲ್ ಮ್ಯಾಕ್ಸಿಮಮ್ ರೀಟೆಲ್ ಬೆಲೆ 4,999 ರೂಪಾಯಿ. ಇದು ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳಲ್ಲಿ 2,500 ರೂಪಾಯಿಯಿಂದ 3,499 ರೂಪಾಯಿಗೆ ಲಭ್ಯವಿದೆ. ಸದ್ಯ ಶರ್ಟ್ ಬೆಲೆ ಕೇಳಿ ಎಲ್ಲರೂ ದಂಗಾಗಿದ್ದಾರೆ. ಆದರೆ ಇನ್ನೂ ಕೆಲವರು ಸೆಲೆಬ್ರಿಟಿಗಳಿಗೆ ಹೋಲಿಸಿದರೆ ಈ ಬೆಲೆ ತುಂಬಾನೆ ಕಡಿಮೆ. ಕಾಟನ್ ಶರ್ಟ್ ಧರಿಸಿ ಓಡಾಡೋ ಜೇಸನ್ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಚೊಚ್ಚಲ ನಿರ್ದೇಶಕ ಜೇಸನ್ ಸಂಜಯ್ ನಿರ್ದೇಶಿಸಿದ ‘ಸಿಗ್ಮಾ’ ಚಿತ್ರವು ಜುಲೈ 31 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Bangalore,Karnataka
Jun 28, 2026 12:42 PM IST













