Rashmika Mandanna: ಮತ್ತೆ ಒಂದಾಗಲಿದ್ದಾರೆ ಪುಷ್ಪರಾಜ್ -ಶ್ರೀವಲ್ಲಿ! ‘ರಾಕ’ದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟನೆ? | | ACTPnews

ಅರ್ಜುನ್-ರಶ್ಮಿಕಾ ಮಂದಣ್ಣ


Last Updated:

ಪುಷ್ಪರಾಜ್ ಮತ್ತು ಶ್ರೀವಲ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ, ಈಗ ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಕ’ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ.

ಅರ್ಜುನ್-ರಶ್ಮಿಕಾ ಮಂದಣ್ಣ
ಅರ್ಜುನ್-ರಶ್ಮಿಕಾ ಮಂದಣ್ಣ

ಪುಷ್ಪ ಸಿನಿಮಾದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಮತ್ತೊಮ್ಮೆ ಒಂದಾಗಲಿದ್ದಾರೆ ಎಂಬ ಸುದ್ದಿ ಸಿನಿಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಪುಷ್ಪರಾಜ್ ಮತ್ತು ಶ್ರೀವಲ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ, ಈಗ ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಕ’ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ.

ಪುಷ್ಪ ಸರಣಿಯ ಯಶಸ್ಸಿನ ನಂತರ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಬಾರಿ ಅವರು ಪುಷ್ಪರಾಜ್ ಮತ್ತು ಶ್ರೀವಲ್ಲಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಸಂಪೂರ್ಣ ಹೊಸ ಕಥೆ ಮತ್ತು ಹೊಸ ಪಾತ್ರಗಳೊಂದಿಗೆ ಅಟ್ಲಿ ನಿರ್ದೇಶನದ ‘ರಾಕ’ ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ‘ರಾಕ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಶೀಘ್ರದಲ್ಲೇ ಮುಂಬೈನ ಸ್ಟುಡಿಯೋವೊಂದರಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ರಶ್ಮಿಕಾ ಕೂಡ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದ ಕಥೆಯಲ್ಲಿ ಅವರ ಪಾತ್ರಕ್ಕೂ ವಿಶೇಷ ಮಹತ್ವವಿದ್ದು, ಅಲ್ಲು ಅರ್ಜುನ್ ಜೊತೆಗೆ ಹಲವು ಪ್ರಮುಖ ದೃಶ್ಯಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಸುದ್ದಿ ಎಂದರೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿ. ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಜವಾನ್ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಅಟ್ಲಿ, ದೊಡ್ಡ ಮಟ್ಟದ ನಿರ್ಮಾಣಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇದೀಗ ಅಲ್ಲು ಅರ್ಜುನ್ ಜೊತೆಗಿನ ಅವರ ಮೊದಲ ಸಿನಿಮಾ ಆಗಿರುವ ‘ರಾಕ’ ಮೇಲೂ ಸಿನಿಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡುವ ಅವಕಾಶ ಸಿಗಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಆದರೆ ಚಿತ್ರದ ಪಾತ್ರಗಳು, ಬಿಡುಗಡೆಯ ದಿನಾಂಕ ಹಾಗೂ ಇತರ ಮಾಹಿತಿಗಳ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed