IND vs IRL, T20I: ಟಕ್ಕರ್, ಡೆಲಾನಿ ಅಬ್ಬರ! ಭಾರತಕ್ಕೆ ಸವಾಲಿನ ಗುರಿ ನೀಡಿದ ಐರ್ಲೆಂಡ್ | ಕ್ರೀಡಾ ಸುದ್ದಿ | ACTPnews

ಭಾರತ vs ಐರ್ಲೆಂಡ್

Last Updated:

ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬೆಲ್‌ಫಾಸ್ಟ್ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿ 20 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್​ಗಳ ಸವಾಲಿನ ಮೊತ್ತ ಕಲೆ ಹಾಕಿದೆ. ನಾಯಕ ಲಾರ್ಕನ್ ಟಕ್ಕರ್ 50 ರನ್​ಗಳಿಸಿದರೆ, ಡೆಲಾನಿ 49 ರನ್​ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಕಳಪೆ ಆರಂಭ ಪಡೆದುಕೊಂಡಿತು. ತಂಡವು ಎರಡನೇ ಓವರ್ ನಲ್ಲಿಯೇ ರಾಸ್ ಅಡೈರ್ ಅವರ ವಿಕೆಟ್ ಕಳೆದುಕೊಂಡಿದೆ. ಅವರು ಏಳು ಎಸೆತಗಳಲ್ಲಿ 12 ರನ್ ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಹ್ಯಾರಿ ಟೆಕ್ಟರ್ ಅವರನ್ನು ಅರ್ಷದೀಪ್ ಸಿಂಗ್ ಡಕ್ ಔಟ್ ಮಾಡಿ ವಾಪಸ್ ಕಳುಹಿಸಿದರು. 12 ಎಸೆತಗಳಲ್ಲಿ 17 ರನ್ ಗಳಿಸಿ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಟಿಮ್ ಟೆಕ್ಟರ್ ಅವರನ್ನೂ ರಾಣಾ ತಮ್ಮ 2ನೇ ಓವರ್​​ನಲ್ಲಿ ಪೆವಿಲಿಯನ್​ಗೆ ಕಳುಹಿಸಿದರು.

30ಕ್ಕೆ3 ವಿಕೆಟ್ ಕಳೆದುಕೊಂಡು ಆಘಾತದಲ್ಲಿದ್ದ ಐರಿಶ್ ತಂಡಕ್ಕೆ 4ನೇ ವಿಕೆಟ್​ಗೆ ಜೊತೆಯಾದ ಬೆಂಜಮಿನ್ ಕಾಲಿಟ್ಜ್ ಹಾಗೂ ನಾಯಕ ಟಕ್ಕರ್ 21 ಎಸೆತಗಳಲ್ಲಿ 21 ರನ್​ಗಳಿಸಿ ತಂಡದ ಮೊತ್ತವನ್ನ 50ರ ಗಡಿ ದಾಟಿಸಿದರು. 8ನೇ ಓವರ್​​ನಲ್ಲಿ ಬೌಲಿಂಗ್ ಮಾಡಿದ ಶಿವಂ ದುಬೆ 15 ರನ್ ಗಳಿಸಿದ್ದ ಕಾಲಿಟ್ಜ್​ ವಿಕೆಟ್ ಪಡೆದು ಜೊತೆಯಾಟ ಬ್ರೇಕ್ ಮಾಡಿದರು. ಈ ಹಂತದಲ್ಲಿ ಐರ್ಲೆಂಡ್ 100ರಿಂದ 120 ಗಳಿಸಿದರೇ ಹೆಚ್ಚು ಎನ್ನುವಂತಿತ್ತು.

ಆದರೆ 5ನೇ ವಿಕೆಟ್​ಗೆ ಜೊತೆಯಾಟದ ನಾಯಕ ಲಾರ್ಕಾನ್ ಟಕ್ಕರ್ ಹಾಗೂ ಡೆಲಾನಿ 64 ರನ್​ ಸೇರಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಲಾರ್ಕೆನ್ ಟೆಕ್ಕರ್ 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ಸಹಿತ 50 ರನ್ ಗಳಿಸಿ ರಾಣಾ ಬೌಲಿಂಗ್​​ನಲ್ಲಿ ತಿಲಕ್​ ವರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಕೊನೆಯಲ್ಲಿ ಅಬ್ಬರಿಸಿದ ಗ್ಯಾರೆತ್ ಡೆಲಾನಿ 32 ಎಸೆತಗಳಲ್ಲಿ 49 ರನ್ ಗಳ ಬಲಿಷ್ಠ ಇನ್ನಿಂಗ್ಸ್ ಆಡಿದರು.

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed