INDW vs BANW: ಶಫಾಲಿ ಅಬ್ಬರ, ಬಾಂಗ್ಲಾದೇಶ ಧೂಳೀಪಟ ಮಾಡಿದ ಭಾರತ! ಸೆಮಿಫೈನಲ್​​ ಕನಸು ಜೀವಂತ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಸೆಮಿಫೈನಲ್ ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್​ಗಳಿಸಿತ್ತು. 135 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 17 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಭಾರತ ತಂಡ
ಭಾರತ ತಂಡ

ಮ್ಯಾಂಚೆಸ್ಟರ್​​ನ ಓಲ್ಡ್ ಟ್ರಾಫರ್ಡ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ (India vs Bangladesh) ನಿರ್ಣಾಯಕ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5 ವಿಕೆಟ್​​​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್ (Semifinal) ಪ್ರವೇಶಿಸುವ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯ ಎರಡೂ ತಂಡಗಳಿಗೂ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಟಾಸ್​ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್​ಗಳಿಸಿತ್ತು. 135 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 16.5 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 

ಕೈಕೊಟ್ಟ ಮಂಧಾನ, ಅಬ್ಬರಿಸಿದ ಶಫಾಲಿ

137 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶಫಾಲಿ ಅಬ್ಬರದಿಂದ ಮೊದಲ ವಿಕೆಟ್​ ಜೊತೆಯಾಟದಲ್ಲಿ 31 ರನ್ ಸೇರಿಸಿತು. ಆದರೆ 3ನೇ ಓವರ್​​ನಲ್ಲೇ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (8) ಇಂದೂ ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ 2ನೇ ವಿಕೆಟ್​ ಜೊತೆಯಾಟದಲ್ಲಿ ಯಾಸ್ತಿಕಾ ಭಾಟಿಯಾ ಹಾಗೂ ಶಫಾಲಿ ವರ್ಮಾ 45 ರನ್ ಸೇರಿಸಿದರು. ಶಫಾಲಿ ವರ್ಮಾ 34 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​​​​ ಸಹಿತ 53 ರನ್​ಗಳಿಸಿ ನಹಿದಾ ಅಖ್ತರ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು.

ಮಧ್ಯಮ ಕ್ರಮಾಂಕ ವಿಫಲ

ಶಫಾಲಿ ವಿಕೆಟ್ ಬಳಿಕ ಭಾರತದ ರನ್​ಗತಿಗೆ ಕಡಿವಾಣ ಬಿದ್ದಿತು. 12ನೇ ಓವರ್​​ನಲ್ಲಿ ಯಾಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 23 ರನ್​ಗಳಸಿ ರೀತು ಮೋನಿ ಬೌಲಿಂಗ್​​ನಲ್ಲಿ ರಬಾಯಾ ಖಾನ್​ಗೆ ಕ್ಯಾಚ್​ ನೀಡಿ ಔಟ್ ಆದರು. ಸ್ಫೋಟಕ ಆಟಕ್ಕೆ ಹೆಸರಾದ ರಿಚಾ ಕೂಡ ಇಂದೂ ರನ್​ಗಳಿಸಲು ಪರದಾಟಿ 12 ಎಸೆತಗಳಲ್ಲಿ ಕೇವಲ 10 ರನ್​ಗಳಿಸಿ ರಬಾಯಾ ಖಾನ್​​ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಆದರು.

ಫಿನಿಷ್ ಮಾಡಿದ ಜೆಮಿಮಾ-ಕೌರ್

ನಂತರ ಒಂದಾದ ಜಮೀಮಾ ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್ 5ನೇ ವಿಕೆಟ್ಗೆ 30 ರನ್​ಗಳ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಸನಿಹ ತಂದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಜೆಮೀಮಾ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ 26 ರನ್​ಗಳಿಸಿ ಗೆಲುವಿಗೆ 9 ರನ್​ಗಳ ಅಗತ್ಯವಿದ್ದಾಗ ಔಟ್ ಆದರು. ಹರ್ಮನ್​​ ಎಸೆತಗಳಲ್ಲಿ ರನ್​ಗಳಿಸಿದರು.

ಬಾಂಗ್ಲಾದೇಶವನ್ನ 136ಕ್ಕೆ ನಿಯಂತ್ರಿಸಿದ ಭಾರತ 

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್​ಗಳಿಸಿತ್ತು. ಜುವೇರಿಯಾ ಫಿರ್ದೌಸ್ 31 ಎಸೆತಗಳಲ್ಲಿ 33, ಶೋಭನಾ ಮೊಸ್ಟರಿ 26 ಎಸೆತಗಳಲ್ಲಿ 22, ನಿಗರ್ ಸುಲ್ತಾನ 27 ಎಸೆತಗಳಲ್ಲಿ 32, ಶರ್ಮಿನ್ ಅಖ್ತರ್ 10, ಶೋರ್ನಾ ಅಖ್ತರ್ 13 ರನ್​ಗಳಿಸಿದ್ದರು.

ಭಾರತದ ಪರ ರಾಧಾ ಯಾದವ 28ಕ್ಕೆ3, ಶ್ರೀಚರಣಿ 21ಕ್ಕೆ2, ನಂದನಿ ಶರ್ಮಾ 32ಕ್ಕೆ1 ಹಾಗೂ ರೇಣುಕಾ ಸಿಂಗ್ ಠಾಕೂರ್ 21ಕ್ಕೆ1 ವಿಕೆಟ್ ಪಡೆದು ಮಿಂಚಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed