Anirudh Ravichander: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್? ಈ ಐಪಿಎಲ್​ ತಂಡದ ಓನರ್​ ಜೊತೆ ವಿವಾಹ? | ಕ್ರೀಡಾ ಸುದ್ದಿ | ACTPnews

ರಜನಿಕಾಂತ್-ಕಾವ್ಯ ಮಾರನ್


Last Updated:

ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ರಜನಿಕಾಂತ್ ಸಂಬಂಧಿ, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಜೊತೆ ಕಾವ್ಯ ಮಾರನ್ ಮದುವೆಯಾಗಲಿದ್ದಾರೆ ಎಂಬುದರ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

ರಜನಿಕಾಂತ್-ಕಾವ್ಯ ಮಾರನ್
ರಜನಿಕಾಂತ್-ಕಾವ್ಯ ಮಾರನ್

ಐಪಿಎಲ್ (IPL) 2026 ರ ಆವೃತ್ತಿಯ ನಡುವೆ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಒಡತಿ (Owner) ಕಾವ್ಯ ಮಾರನ್ (Owner) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಕಾವ್ಯ ಮಾರನ್ ಶೀಘ್ರದಲ್ಲೇ ದಾಂಪತ್ಯ (Marriage) ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್ (Tollywood), ಕಾಲಿವುಡ್ (Kollywood) ಹಾಗೂ ಕ್ರಿಕೆಟ್ (Cricket) ವಲಯಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೌದು, ಶೀಘ್ರದಲ್ಲೇ ಕಾವ್ಯ ಮಾರನ್ ಸ್ಟಾರ್ ಮ್ಯೂಸಿಕ್ (Music) ಡೈರೆಕ್ಟರ್ (Director) ಮತ್ತು ಸಿಂಗರ್ (Singer) ಅನಿರುದ್ಧ್ ರವಿಚಂದರ್ (Anirudh Ravichander) ಅವರನ್ನು ವಿವಾಹವಾಗಲಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾ (Social media) ದಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ವರದಿಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಟಿವಿ9 ತೆಲುಗು ವರದಿ ಮಾಡಿರುವ ಪ್ರಕಾರ, ಇಬ್ಬರೂ ಈ ವರ್ಷದ (2026) ದ್ವಿತೀಯಾರ್ಧದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದಾರೆ. ಶೀಘ್ರದಲ್ಲೇ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಬರುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಕಾವ್ಯ ಮಾರನ್ ಮತ್ತು ಅನಿರುದ್ಧ್ ವಿವಾಹ ಸುದ್ದಿಗೆ ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ತುಂಬಾ ಸಂತೋಷಪಟ್ಟಿದ್ದಾರೆ. ಇನ್ನು ಕೆಲವರು ಇದು ಕೇವಲ ವದಂತಿ ಎಂದು ಹೇಳುತ್ತಿದ್ದಾರೆ.

ಅನಿರುದ್ಧ್ – ಕಾವ್ಯಾ ಡೇಟಿಂಗ್?

ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹೊಸದೇನಲ್ಲ. ಕಳೆದ ವರ್ಷ ಜೂನ್‌ನಿಂದ ಸೋಶಿಯಕ್ ಮೀಡಿಯಾದಲ್ಲಿ ಇಬ್ಬರ ಡೇಟಿಂಗ್ ವದಂತಿಗಳು ಹರಿದಾಡುತ್ತಿವೆ. ಲಾಸ್ ವೇಗಾಸ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇಬ್ಬರ ಫೋಟೋಗಳು ವೈರಲ್ ಆಗಿದ್ದವು. ಇದಲ್ಲದೆ, ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅನಿರುದ್ಧ್ ಹಲವಾರು ಬಿಗ್ ಸಿನಿಮಾಗಳಿಗೆ ಮ್ಯೂಜಿಕ್ ನೀಡಿದ್ದಾರೆ.

ರಜನಿಕಾಂತ್ ಸಂಬಂಧಿ ಅನಿರುದ್ಧ್

ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿಬರುತ್ತಿರುವ ಅತ್ಯಂತ ಕ್ರೇಜಿ ಸುದ್ದಿಯೆಂದರೆ, ಅನಿರುದ್ಧ್ ರವಿಚಂದರ್ ಅವರ ಚಿಕ್ಕಪ್ಪ ಸೂಪರ್‌ಸ್ಟಾರ್ ರಜನಿಕಾಂತ್ ಮದುವೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ಅನಿರುದ್ಧ್ ಅವರ ತಾಯಿ ಲಕ್ಷ್ಮಿ, ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ಸಹೋದರಿ. ಹೀಗಾಗಿ ಸಂಬಂಧದಲ್ಲಿ ಅನಿರುದ್ಧ್ ಅವರಿಗೆ ರಜನಿಕಾಂತ್ ಚಿಕ್ಕಪ್ಪ.

ಸ್ವತಃ ರಜನಿಕಾಂತ್ ಅವರೇ ಕಲಾನಿಧಿ ಮಾರನ್ ಅವರೊಂದಿಗೆ ಮಾತನಾಡಿ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ. ಎರಡೂ ಕಡೆಯ ಹಿರಿಯರು ಮದುವೆಗೆ ಬಹುತೇಕ ಹಸಿರು ನಿಶಾನೆ ತೋರಿಸಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಆದಾಗ್ಯೂ, ಸನ್ ನೆಟ್‌ವರ್ಕ್ ಅಥವಾ ಅನಿರುದ್ಧ್ ಅವರ ಕುಟುಂಬ ಸದಸ್ಯರು ಈ ವಿಷಯಗಳ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ.

ಯಶಸ್ಸಿನ ಕಡೆಗೆ ಜೋಡಿಗಳು

ಪ್ರಸ್ತುತ, ಈ ಇಬ್ಬರು ಸೆಲೆಬ್ರಿಟಿಗಳು ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಅನಿರುದ್ಧ್ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್. ಜೈಲರ್ 2, ಜನನಾಯಗನ್ ಮತ್ತು ಶಾರುಖ್ ಖಾನ್ ಅವರ ಕಿಂಗ್ ನಂತಹ ದೊಡ್ಡ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ನಿರತರಾಗಿದ್ದಾರೆ.

ಮತ್ತೊಂದೆಡೆ, ಕಾವ್ಯ ಮಾರನ್ ಒಬ್ಬ ಉದ್ಯಮಿಯಾಗಿ ನಿರತರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್‌ನಲ್ಲಿ ಅವರ ಕೆಲಸದ ಜೊತೆಗೆ, ದಕ್ಷಿಣ ಆಫ್ರಿಕಾದ ಟಿ 20 ಲೀಗ್‌ನಲ್ಲಿ ಎಸ್‌ಆರ್‌ಹೆಚ್ ಈಸ್ಟರ್ನ್ ಕೇಪ್ ತಂಡದ ಸತತ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಿಜವಾಗಿಯೂ ಮದುವೆಯಾಗುತ್ತಾರೋ ಇಲ್ಲವೋ ಎಂದು ತಿಳಿಯಲು ಇನ್ನೂ ಕೆಲವು ದಿನಗಳು ಕಾಯಬೇಕಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports