Darshan Case: ಕೋರ್ಟ್​​ನಲ್ಲಿ ದರ್ಶನ್​ ಪ್ರಕರಣಕ್ಕೆ​ ಬಿಗ್​ ಟ್ವಿಸ್ಟ್​! ಹಳೇ ಲಾಯರ್ ಔಟ್​, ಈ ವಕೀಲರ ಕೈಯಲ್ಲಿದೆ ದಾಸನ ಭವಿಷ್ಯ! | | ACTPnews

News18


Last Updated:

ವಕೀಲ ಸುನೀಲ್ ಕುಮಾರ್​ ಅವ್ರು ಇದೀಗ ಹೈಪ್ರೊಫೈಲ್ ಕೇಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದು, ಈ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ದರ್ಶನ್​​ ಕೇಸ್ ಈ ಹಿರಿಯ ವಕೀಲರ ಕೈ ಸೇರಿದೆ. 

News18
News18

ಬೆಂಗಳೂರು (ಜೂ.23): ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್​ ಪಾಲಿಗೆ ಈ ಕೇಸ್​ ನರಕ ದರ್ಶನವನ್ನೇ ಮಾಡಿಸಿದೆ ಅಂದ್ರೂ ತಪ್ಪಾಗಲ್ಲ. ಕೋರ್ಟ್​ನಲ್ಲಿರೋ ದರ್ಶನ್​ (Darshan) ಕೇಸ್​ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿ ದರ್ಶನ್​ ಪರ ಆರಂಭದಿಂದಲೂ ಕಾನೂನು ಹೋರಾಟ (Legal fight) ನಡೆಸಿದ್ದ ವಕೀಲ ಸುನೀಲ್ ಕುಮಾರ್ (Sunil Kumar)​ ಅವ್ರು ಇದೀಗ ಹೈಪ್ರೊಫೈಲ್ ಕೇಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದು, ಈ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ದರ್ಶನ್​​ ಕೇಸ್ ಈ ಹಿರಿಯ ವಕೀಲರ ಕೈ ಸೇರಿದೆ. 

ದರ್ಶನ್ ಕೇಸ್​ನಿಂದ ಹಿಂದೆ ಸರಿದ ಲಾಯರ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿಸುದೀರ್ಘವಾಗಿ ನಟ ದರ್ಶನ್ ಪರವಾಗಿ ವಕಾಲತ್ತು ವಹಿಸಿದ್ದ ವಕೀಲ ಸುನೀಲ್ ಅವರಿ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದು, ದರ್ಶನ್ ಯಾವುದೇ ಪ್ರಕಣದಲ್ಲಿ ಇನ್ನು ಮುಂದೆ ವಕಾಲತ್ತು ವಹಿಸುವುದಿಲ್ಲವೆಂದು ಮೆಮೋ ಸಲ್ಲಿಕೆ ಮಾಡಿದ್ದಾರೆ.

 ಹೊರ ಬಂದಿದ್ಯಾಕೆ ಲಾಯರ್ ಸುನೀಲ್ ಕುಮಾರ್?

ಈ ಸಂಬಂಧ ಸುನಿಲ್ ಕುಮಾರ್ ಜೂನಿಯರ್ ವಕೀಲ ಶೋಭಿತ್ ಅವರು 59 ನೇ ಸಿಸಿಹೆಚ್ ಕೋರ್ಟ್​ಗೆ ಮೆಮೋ ಸಬ್ಮಿಟ್ ಮಾಡಿದ್ದಾರೆ. ಸುನಿಲ್ ಕುಮಾರ್ ಅವರು ಈ ಪ್ರಕರಣದಲ್ಲಿ ಕೇವಲ ನಟ ದರ್ಶನ್ ಮಾತ್ರವಲ್ಲದೆ, ದರ್ಶನ್ ಆಪ್ತರಾದ ಲಕ್ಷ್ಮಣ್ ಹಾಗೂ ನಾಗರಾಜ್ ಪರವಾಗಿಯೂ ವಕಾಲತ್ತು ವಹಿಸಿದ್ದರು. ಇದೀಗ ಮೂವರ ಪರ ವಕಾಲತ್ತು ವಹಿಸಲ್ಲ ಎಂದಿದ್ದಾರೆ.

ಈ ಹಿರಿಯ ವಕೀಲನ ಕೈ ಸೇರಿದೆ ದರ್ಶನ್ ಭವಿಷ್ಯ!

ನಟ ದರ್ಶನ್ ಕೇಸ್​ಗೆ ಇದೀಗ ಹೊಸ ಲಾಯರ್​ ಎಂಟ್ರಿ ಕೊಟ್ಟಿದ್ದಾರೆ. ಇನ್ಮುಂದೆ ಹಿರಿಯ ಹಶ್ಮತ್ ಪಾಷಾ ಅವರು ದರ್ಶನ್ ಪ್ರಕರಣ ವಕಾಲತ್ತು ವಹಿಸಲಿದ್ದಾರೆ. ದರ್ಶನ್ ಪರವಾಗಿ ಎಲ್ಲಾ ಪ್ರಕರಣಗಳನ್ನು ಮುನ್ನಡೆಸಲು ಹಿರಿಯ ವಕೀಲ ಹಶ್ಮತ್ ಪಾಷಾ ಮುಂದಾಗಿದ್ದಾರೆ. ನಿಮ್ಮ ಪರವಾಗಿ ಹಿರಿಯ ವಕೀಲರಾದ ಹಶ್ಮತ್ ಪಾಷಾ ಅವರು ವಕಾಲತ್ತು ಹಾಕಿದ್ದಾರೆ ಎಂಬ ವಿಷಯವನ್ನು 59ನೇ ಸೆಷನ್ಸ್ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ನಲ್ಲೇ  ನಟ ದರ್ಶನ್ ಅವರ ಗಮನಕ್ಕೆ ತರಲಾಗಿದೆ.

ದರ್ಶನ್ ಹೇಳಿದ್ದೇನು?

ನ್ಯಾಯಾಧೀಶರ ಮಾತುಗಳನ್ನು ಆಲಿಸಿದ ದರ್ಶನ್, ಓಕೆ , ನಾನೂ ಕೂಡ ಈ ಬಗ್ಗೆ ನನ್ನ ಕುಟುಂಬಸ್ಥರ ಬಳಿ ಮಾತನಾಡಿ ಮುಂದಿನ ನಿರ್ಧಾರವನ್ನು ಹೇಳುತ್ತೇನೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಸದ್ಯ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತಿದ್ದು, ರೇಣುಕಾಸ್ವಾಮಿ ಫೋಟೋಗಳನ್ನ ಪಡೆದಿದ್ದ ಸಾಕ್ಷಿ ಸರ್ಕಾರಿ ಸಿಬ್ಬಂದಿಯ ವಿಚಾರಣೆ ನಡೆದಿದೆ.

1 ವರ್ಷದೊಳಗೆ ಪ್ರಕರಣದ 60 ಸಾಕ್ಷ್ಯಗಳನ್ನ ವಿಚಾರಣೆ ನಡೆಸುವಲ್ಲಿ ವಿಫಲವಾದ್ರೆ, ದರ್ಶನ್​​ ಬೇಲ್​​ ಗಾಗಿ ಮತ್ತೆ ಅರ್ಜಿ ಸಲ್ಲಿಸುವ ಅವಕಾಶವಿತ್ತು. ಆದ್ರೆ ಅದು ಕೂಡ ಈಗ ಕೈತಪ್ಪೋ ಸಾಧ್ಯತೆ ಇದೆ. ಕೋರ್ಟ್​ ತ್ವರಿತಗತಿಯಲ್ಲಿ ಸಾಕ್ಷಿಗಳ ವಿಚಾರಣೆ ಸೂಚನೆ ನೀಡಿದೆ.

(ವರದಿ: ಗಂಗಾಧರ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed