Last Updated:
ಕನ್ನಡದ ಮೊದಲ ಬೈಕರ್ಸ್ ಸಿನಿಮಾ ಯಾವುದು? ಈ ಚಿತ್ರಕ್ಕೆ ಫಾದರ್ಸ್ ಡೇ ಅಂತ ಟೈಟಲ್ ಇಟ್ಟಿರೋದು ಯಾಕೆ? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
ಕನ್ನಡದಲ್ಲಿ (Kannada) ಒಂದು ಬೈಕರ್ಸ್ ಸಿನಿಮಾ (Bikers Movie) ರೆಡಿ ಆಗಿದೆ. ಇದಕ್ಕೆ ಅಪ್ಪ ಮತ್ತು ಮಗನ ಬಾಂಧವ್ಯದ ಟಚ್ ಕೂಡ ಇದೆ. ಸಹ ಪಯಣಿಗರಿಬ್ಬರ ಈ ಚಿತ್ರದ ಟ್ರೈಲರ್ (Movie Trailer) ಅಲ್ಲಿ ಮಜಾ ಇದೆ. ಬೈಕರ್ಸ್ (Bikers) ಅನುಭವಿಸುವ ಸಮಸ್ಯೆಗಳ ಚಿತ್ರಣವೂ ಇದೆ. ಎಮೋಷನಲ್ ಕ್ಷಣಗಳೂ ಇವೆ. ಫನ್ ಎಲಿಮೆಂಟ್ಸ್ ಕೂಡ ಇವೆ. ಇದರ ಟ್ರೈಲರ್ ನೋಡಿದ್ರೆ ಕನ್ನಡದಲ್ಲಿ ಬರ್ತಿರೋ ಬೇರೆ ರೀತಿಯ ಚಿತ್ರ ಇದಾಗಿದೆ ಅನಿಸುತ್ತದೆ. ಈ ಸಿನಿಮಾ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಇದು ಈ ಚಿತ್ರದ ಶೀರ್ಷಿಕೆ ಆಗಿದೆ. ಫಾದರ್ಸ್ ಡೇನಾ? ಅಂತ ಅನಿಸಬಹುದು. ಬೈಕರ್ಸ್ ಚಿತ್ರದಲ್ಲಿ ಅಪ್ಪ ಮತ್ತು ಮಗನ ಬಾಂಧವ್ಯದ ಕತೆ ಹೇಳುತ್ತಿದ್ದಾರೆ.
ಅಜಿತ್ ಹಂದೆ
ಫಸ್ಟ್ ಟೈಮ್ ಡೈರೆಕ್ಷನ್ ಮಾಡ್ತಿರೋ ರಾಜಾರಾಮ್ ರಾಜೇಂದ್ರನ್ ಈ ಚಿತ್ರವನ್ನ ನಿರ್ಮಾಣ ಕೂಡ ಮಾಡಿದ್ದಾರೆ. ಬ್ಲೂಸ್ ಶೈಲಿಯಿಂದ ಪ್ರೇರಿತಗೊಂಡ ಸಂಗೀತ ಈ ಚಿತ್ರಕ್ಕೆ ಇದೆ. ಇದೂ ಕೂಡ ಕನ್ನಡಕ್ಕೆ ಮೊದಲು ಅನ್ನುವ ಮಾಹಿತಿಯನ್ನ ಚಿತ್ರ ತಂಡ ಕೊಟ್ಟಿದೆ. ಜೋ ಪ್ಯಾನಿಕರ್ ಈ ಚಿತ್ರಕ್ಕೆ ಸಂಗೀತ ಮಾಡಿದ್ದಾರೆ.
ಶ್ರೀರಸ್ತು ಶುಭಮಸ್ತು ಸೀರಿಯಲ್ ಖ್ಯಾತಿಯ ನಟ ಅಜಿತ್ ಹಂದೆ ಈ ಚಿತ್ರದಲ್ಲಿದ್ದಾರೆ. ಇವರೂ ಈ ಚಿತ್ರದಲ್ಲಿ ಬೈಕರ್ ಆಗಿದ್ದಾರೆ. ಆಚಾರ್ & ಕೋ, ಸಪ್ತಸಾಗರದಾಚೆ ಎಲ್ಲೋ, ಅನಾಮಾಧೇಯ ಅಶೋಕ್ ಕುಮಾರ್ ಚಿತ್ರದಲ್ಲಿ ನಟಿಸಿರೋ ಹರ್ಷಿಲ್ ಕೌಶಿಕ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಜೋಡಿ ಇಲ್ಲಿ ಬೈಕರ್ಸ್ ಆಗಿದ್ದಾರೆ. ಆದರೆ, ಟ್ರೈಲರ್ ನೋಡಿದರೆ ಇವರು ಬೈಕರ್ಸಾ ಅಥವಾ ಅಪ್ಪ-ಮಗನ ಅನ್ನೋದು ತಿಳಿಯೋದಿಲ್ಲ. ಆದರೆ, ಕೆಲವು ಡೈಲಾಗ್ ಕೇಳಿದಾ ಇವರೇ ಅಪ್ಪ ಮತ್ತು ಮಗ ಅಂತಲೂ ಫೀಲ್ ಆಗುತ್ತದೆ.
ಕತೆ-ಚಿತ್ರಕತೆ ಯಾರದ್ದು ಗೊತ್ತೆ
ಈ ಚಿತ್ರದಲ್ಲಿ ಆಲ್ ಓಕೆ ಅಲೋಕ್ ಕೂಡ ಅಭಿನಯಿಸಿದ್ದಾರೆ. ಬೈಕರ್ ಕತೆಯಲ್ಲಿ ಇವರ ಪಾತ್ರ ಒಂದು ರೀತಿ ವಿಲನ್ ರೀತಿನೇ ಇದೆ. ಈ ಚಿತ್ರದಲ್ಲಿ ಸಾಮ್ರಾಗ್ನಿ ರಾಜನ್, ಕ್ಷೇಮ ಶೆಟ್ಟಿ, ಬಾಸ್ಕಿ ಅಭಿನಯಿಸಿದ್ದಾರೆ.
ಕತೆಯ ವಿಚಾರಕ್ಕೆ ಬಂದ್ರೆ, ಇದು ಇಬ್ಬರು ಬೈಕರ್ಸ್ ಸುತ್ತವೆ ಸಾಗುತ್ತದೆ. ಇಬ್ಬರ ಸಹ ಪಯಣಿಗರ ನಡುವಿನ ಕತೆ ಇಲ್ಲಿ ಹೃದಯ ತಟ್ಟುತ್ತದೆ. ಅದಕ್ಕೂ ಹೆಚ್ಚಾಗಿ ಈ ಚಿತ್ರದ ಕ್ಲೈಮ್ಯಾಕ್ಸ್ ಯಾರೂ ನಿರೀಕ್ಷೆ ಮಾಡದ ರೀತಿನೇ ಇದೆ ಅಂತ ಚಿತ್ರ ತಂಡ ಈಗಲೇ ಹೇಳಿಕೊಂಡಿದೆ.
ಈ ಚಿತ್ರಕ್ಕೆ ರಾಜಾರಾಮ್ ರಾಜೇಂದ್ರನ್ ಅವರೇ ಕತೆ ಮಾಡಿದ್ದಾರೆ. ಚಿತ್ರಕತೆ ಕೂಡ ಇವರೇ ಮಾಡಿದ್ದಾರೆ. ಈಗಾಗಲೇ ಹೇಳಿದಂತೆ ನಿರ್ದೇಶನ ಮತ್ತು ನಿರ್ಮಾಣ ಕೂಡ ಇವರೆ ಮಾಡಿದ್ದಾರೆ.
ಇವರ ಈ ಚಿತ್ರದ ಟ್ರೈಲರ್ ವಿಶೇಷ ದಿನವೇ ರಿಲೀಸ್ ಆಗಿದೆ. ಜೂನ್-21 ರಂದು ಫಾದರ್ಸ್ ಡೇ ಇತ್ತು. ಆ ದಿನವೇ ಈ ಫಾದರ್ಸ್ ಡೇ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಈ ಟ್ರೈಲರ್ ಒಂದು ಇಂಗ್ಲಿಷ್ ಸಿನಿಮಾದ ಕಂಟೆಂಟ್ ನೋಡಿದ ಹಾಗೆ ಫೀಲ್ ಆಗುತ್ತದೆ. ಕನ್ನಡದಲ್ಲಿ ಈ ರೀತಿಯ ಬೈಕರ್ಸ್ ಸಿನಿಮಾಗಳು ಬಂದಿಲ್ಲ. ಅದಕ್ಕೇನೆ ಈ ಚಿತ್ರ ಹೊಸ ಅನುಭವ ಕೊಡುವುದು ಪಕ್ಕಾನೇ ಬಿಡಿ. ಈ ಚಿತ್ರ ಆದಷ್ಟು ಬೇಗ ರಿಲೀಸ್ ಆಗುತ್ತಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jun 23, 2026 11:11 AM IST













