NEET Exam: ಫೋಟೋ ಮರೆತು ಬಂದ ನೀಟ್ ವಿದ್ಯಾರ್ಥಿನಿಗೆ ಆಪತ್ಬಾಂಧವರಾದ ಪೊಲೀಸರು, ತುರ್ತು ಸಹಾಯಕ್ಕೆ ಜನರ ಮೆಚ್ಚುಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ನೀಟ್ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರಕ್ಕೆ ಬಂದ ಒಬ್ಬ ಮಹಿಳಾ ವಿದ್ಯಾರ್ಥಿನಿ ತನ್ನೊಂದಿಗೆ ಅಗತ್ಯವಿರುವ ಫೋಟೋಗಳನ್ನು ತರಲು ಮರೆತಿದ್ದಳು. ಪರೀಕ್ಷೆಗೆ ಪ್ರವೇಶ ಪಡೆಯಲು ಫೋಟೋಗಳು ಕಡ್ಡಾಯವಾಗಿದ್ದರಿಂದ ಅವಳು ತುಂಬಾ ಆತಂಕಕ್ಕೀಡಾಗಿದ್ದಳು. ಆಗ ಪೊಲೀಸರು ಆಕೆಯ ಸಹಾಯಕ್ಕೆ ಬಂದ ಘಟನೆ ವರದಿಯಾಗಿದೆ.

News18
News18

ಅಂಬರ್‌ನಾಥ್: ನಿನ್ನೆ ದೇಶಾದ್ಯಂತ ನಡೆದ ನೀಟ್ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಒಂದಲ್ಲೊಂದು ಸ್ವಾರಸ್ಯಕರ ಘಟನೆಗಳು ವರದಿಯಾಗುತ್ತಲೇ ಇದೆ. ಈತನ್ಮಧ್ಯೆ, ಮತ್ತೊಂದು ಹೃದಯಸ್ಪರ್ಶಿ ಘಟನೆಯೊಂದು ವರದಿಯಾಗಿದೆ.

ಅಂಬರ್‌ನಾಥ್‌ನಲ್ಲಿ ನಡೆದ ನೀಟ್ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರಕ್ಕೆ ಬಂದ ಒಬ್ಬ ಮಹಿಳಾ ವಿದ್ಯಾರ್ಥಿನಿ ತನ್ನೊಂದಿಗೆ ಅಗತ್ಯವಿರುವ ಫೋಟೋಗಳನ್ನು ತರಲು ಮರೆತಿದ್ದಳು. ಪರೀಕ್ಷೆಗೆ ಪ್ರವೇಶ ಪಡೆಯಲು ಫೋಟೋಗಳು ಕಡ್ಡಾಯವಾಗಿದ್ದರಿಂದ ಅವಳು ತುಂಬಾ ಆತಂಕಕ್ಕೀಡಾಗಿದ್ದಳು. ಪರೀಕ್ಷೆ ಕೈತಪ್ಪುವ ಭಯದಿಂದ ಅವಳು ಕಣ್ಣೀರು ಹಾಕುತ್ತಿದ್ದಳು.

ಇದನ್ನೂ ಓದಿ: Elephant Yoga Day 2026: ಈ ಊರಲ್ಲಿ ಆನೆಗಳೂ ಯೋಗಾಸನ ಮಾಡ್ತವೆ! ಗಜರಾಜನ ಯೋಗ ದಿನಾಚರಣೆ ಹೇಗಿತ್ತು ನೋಡಿ!

ಈ ವೇಳೆ ಪೊಲೀಸರು ಅವಳಿಗೆ ಆಪತ್ಬಾಂಧವರಾಗಿ ಬಂದಿದ್ದಾರೆ. ಪರೀಕ್ಷೆಗೆ ಪ್ರವೇಶ ಪಡೆಯಲು ಕಡ್ಡಾಯ ದಾಖಲೆಗಳಲ್ಲಿ ಒಂದಾದ ಫೋಟೋವನ್ನು ತರದೇ ಇರುವ ವಿಚಾರವನ್ನು ಆಕೆ ಅಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳ ಬಲಿ ಸಮಸ್ಯೆಯನ್ನು ಹೇಳಿದ್ದಾಳೆ. ಆಗ ಸೀನಿಯರ್ ಪೊಲೀಸ್ ಇನ್‌ಸ್ಪೆಕ್ಟರ್ ಗೋಕುಲ್ ಶಿಂದೆ ಮತ್ತು ಅಸಿಸ್ಟೆಂಟ್ ಪೊಲೀಸ್ ಇನ್‌ಸ್ಪೆಕ್ಟರ್ ಪರಸ್ರೆ ಅವರು ತಕ್ಷಣವೇ ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಕೂಡಲೇ ವಿದ್ಯಾರ್ಥಿನಿಯನ್ನು ಪೊಲೀಸ್ ವಾಹನದಲ್ಲಿ ಹತ್ತಿಸಿಕೊಂಡು ಹತ್ತಿರದ ಫೋಟೋ ಸ್ಟುಡಿಯೋಗೆ ಕರೆದೊಯ್ದ ಪೊಲೀಸ್ ಅಧಿಕಾರಿಗಳು, ಅಲ್ಲಿ ಅವಳ ಫೋಟೋಗಳನ್ನು ತೆಗೆಸಿ, ಅದರ ಪ್ರಿಂಟ್ ಮಾಡಿಸಿ ಕೊಟ್ಟರು. ನಂತರ ಆಕೆಗೆ ಸ್ಟುಡಿಯೋಗೆ ಕೊಡಬೇಕಿದ್ದ ಹಣವನ್ನು ಸಹ ಪೊಲೀಸರೇ ನೀಡಿ ವಾಪಸ್ ಪರೀಕ್ಷೆ ಬರೆಯುವ ಸ್ಥಳಕ್ಕೆ ನಿಗದಿತ ಸಮಯಕ್ಕೆ ಕರೆತಂದು ಬಿಟ್ಟಿದ್ದಾರೆ.

ಪೊಲೀಸ್ ಅಧಿಕಾರಿಗಳ ಈ ಸಕಾಲಿಕ ಮತ್ತು ಮಾನವೀಯ ಸಹಾಯದಿಂದ ವಿದ್ಯಾರ್ಥಿನಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿ, ಶಾಂತವಾಗಿ ಪರೀಕ್ಷೆ ಬರೆಯಲು ಸಾಧ್ಯವಾಯಿತು.

ಈ ಹೃದಯಸ್ಪರ್ಶಿ ಕ್ರಿಯೆಗೆ ಸಾರ್ವಜನಿಕರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed