Gilli Movie: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಚಿತ್ರಕ್ಕೆ “ಪಳಾರ್” ಟೈಟಲ್ ಫಿಕ್ಸ್! ಕ್ರೇಜಿ ಸ್ಟಾರ್ ಕ್ಲಾಪ್ | | ACTPnews

ಗಿಲ್ಲಿ ನಟನ ಚಿತ್ರಕ್ಕೆ "ಪಳಾರ್" ಟೈಟಲ್ ಫಿಕ್ಸ್; ಕ್ರೇಜಿ ಸ್ಟಾರ್ ಕ್ಲಾಪ್!


Last Updated:

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ನಾಯಕನಾದ ಚಿತ್ರ ಲಾಂಚ್ ಆಗಿದೆ. ಪಳಾರ್ ಅಂತ ಚಿತ್ರಕ್ಕೆ ಟೈಟಲ್ ಇಟ್ಟಿದ್ದಾರೆ. ಮೊದಲ ದೃಶ್ಯಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ. ಈ ಒಂದು ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಗಿಲ್ಲಿ ನಟನ ಚಿತ್ರಕ್ಕೆ "ಪಳಾರ್" ಟೈಟಲ್ ಫಿಕ್ಸ್; ಕ್ರೇಜಿ ಸ್ಟಾರ್ ಕ್ಲಾಪ್!
ಗಿಲ್ಲಿ ನಟನ ಚಿತ್ರಕ್ಕೆ “ಪಳಾರ್” ಟೈಟಲ್ ಫಿಕ್ಸ್; ಕ್ರೇಜಿ ಸ್ಟಾರ್ ಕ್ಲಾಪ್!

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ (Gilli Nata) ಚಿತ್ರ ಲಾಂಚ್ ಆಗಿದೆ. ಪಳಾರ್ (Palar) ಅಂತ ಈ ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ (Crazy Star Ravichandran) ಅವರು ಕ್ಲಾಪ್ ಮಾಡಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನ, ಫಾದರ್ಸ್ ಡೇ ಹೀಗೆ ಈ ವಿಶೇಷ ದಿನವೇ ಗಿಲ್ಲಿ ನಟನ ಜನ್ಮ ದಿನ ಕೂಡ ಇದೆ. ಇಷ್ಟೆಲ್ಲ ವಿಶೇಷ ದಿನವೇ ಗಿಲ್ಲಿ ನಟ ನಾಯಕರಾಗಿರೋ ಪಳಾರ್ ಚಿತ್ರಕ್ಕೆ (Palar Movie) ಮುಹೂರ್ತ ಆಗಿದೆ. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಈ ಚಿತ್ರಕ್ಕೆ ಪೂಜೆ ಆಗಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಗಿಲ್ಲಿ ನಟನ ಚಿತ್ರ ಲಾಂಚ್

ಗಿಲ್ಲಿ ನಟನ ಜನ್ಮ ದಿನದಂದೆ ಪಳಾರ್ ಸಿನಿಮಾ ಲಾಂಚ್ ಆಗಿದೆ. ಚಂದ್ರಮೋಹನ್ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ನವೀನ್ ಗೌಡ ಹಾಗೂ ಸುಪ್ರೀತ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.
Crazy Star Ravichandran claps for Bigg Boss Season 12 winner Gilli Natas upcoming movie Palar

ಕ್ರೇಜಿ ಸ್ಟಾರ್ ಕ್ಲಾಪ್

ಕೆವಿಎನ್ ಈ ಚಿತ್ರವನ್ನ ಪ್ರಸೆಂಟ್ ಮಾಡ್ತಿದೆ. ಭಾನುವಾರ ಬೆಳಗ್ಗೆ 7.30 ಕ್ಕೆ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಈ ಚಿತ್ರ ಲಾಂಚ್ ಆಗಿದೆ.

ಕ್ರೇಜಿ ಸ್ಟಾರ್ ಕ್ಲಾಪ್

ಗಿಲ್ಲಿ ನಟನ ಮೊದಲ ದೃಶ್ಯಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ. ಬಂಡೆ ಮಹಾಕಾಳಮ್ಮನ ಸಮುಖದಲ್ಲಿಯೇ ಮೊದಲ ದೃಶ್ಯದ ಚಿತ್ರೀಕರಣ ಆಗಿದೆ.

ರವಿಚಂದ್ರನ್ ಅವರು ಲಕ್ಕಿ ಆಗಿದ್ದಾರೆ. ಇವರು ಕ್ಲಾಪ್ ಮಾಡಿದರೆ ಆಯಿತು. ಸಿನಿಮಾ ಹಿಟ್ ಅನ್ನುವ ನಂಬಿಕೆ ಇದೆ. ಚಂದ್ರಮೋಹನ್ ಡೈರೆಕ್ಷನ್ ಅವರ ಈ ಚಿತ್ರದಲ್ಲಿ ಹಾಸ್ಯಕ್ಕೆ ಜಾಸ್ತಿ ಜಾಗ ಇದೆ. ಒಂದು ರೀತಿ ಇದು ಪಕ್ಕಾ ಕಾಮಿಡಿ ಸಿನಿಮಾನೇ ಅಗಿದೆ.

ಜನ್ಮ ದಿನಕ್ಕೇನೆ ಪೋಸ್ಟರ್ ರಿಲೀಸ್

ಗಿಲ್ಲಿ ನಟನ ಜನ್ಮ ದಿನವೂ ಇದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ ಪಂಚೆ ಉಟ್ಟುಕೊಂಡೇ ಇದ್ದಾರೆ. ಹಳದಿ ಬಣ್ಣದ ಶರ್ಟ್ ಕೂಡ ಹಾಕಿದ್ದಾರೆ.

Crazy Star Ravichandran claps for Bigg Boss Season 12 winner Gilli Natas upcoming movie Palar

ಜನ್ಮ ದಿನಕ್ಕೇನೆ ಪೋಸ್ಟರ್ ರಿಲೀಸ್

ಹಿಂದೆ ಬ್ಲ್ಯಾಕ್ ಸೂಟ್ ಧರಿಸಿರೋ ಕೆಲವು ಕಲಾವಿದರೂ ಇದ್ದಾರೆ. ಈ ಒಂದು ಪೋಸ್ಟರ್ ಚಿತ್ರದ ಕಾನ್ಸೆಪ್ಟ್ ಏನು ಅನ್ನೋದನ್ನು ಹೇಳುತ್ತಿದೆ.

ಈ ಚಿತ್ರದ ನಾಯಕಿ ಯಾರು

ಗಿಲ್ಲಿ ನಟ ನಾಯಕನಾದ ಈ ಮೊದಲ ಚಿತ್ರಕ್ಕೆ ನಾಯಕಿ ಯಾರು ಅನ್ನುವ ಕುತೂಹಲ ಇದೆ. ಆ ಬಗ್ಗೆ ಇನ್ನು ಏನೂ ಗೊತ್ತಾಗಿಲ್ಲ. ಆದರೆ, ಹೆಸರಾಂತ ನಟಿಯನ್ನೆ ಬರ್ತಾರೆ ಅನ್ನುವ ಸುದ್ದಿನೂ ಇದೆ.

ಈ ಹಿನ್ನೆಲೆಯಲ್ಲಿ ಗಿಲ್ಲಿ ಗೆಳೆಯರು ಮತ್ತು ಆಪ್ತರು ಬಂದು ವಿಶ್ ಮಾಡಿದ್ದಾರೆ. ರವಿಚಂದ್ರನ್ ಅವರು ಬಂದು ಕ್ಲಾಪ್ ಮಾಡಿದ್ದಾರೆ. ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ. ಗುಡ್ ಲಕ್ ಹೇಳಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports