Allu Arjun: ಅಲ್ಲು ಅರ್ಜುನ್ ಪುಟ್ಟ ಅಭಿಮಾನಿಗೆ ಗಂಭೀರ ಕಾಯಿಲೆ, ಆಸ್ಪತ್ರೆ ಬೆಡ್‌ ಮೇಲೆ ಮಲಗಿದವಳ ಆಸೆ ಈಡೇರಿಸಿದ ನಟ! ಪುಷ್ಪರಾಜ್‌ ಕಾರ್ಯಕ್ಕೆ ಮೆಚ್ಚುಗೆ | | ACTPnews

ಅಲ್ಲು ಅರ್ಜುನ್


Last Updated:

ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಅಲ್ಲು ಅರ್ಜುನ್ ಆಕೆಯ ಮುಖದಲ್ಲಿ ನಗು ಮೂಡಿಸಿದ್ದು, ಈ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಅಲ್ಲು ಅರ್ಜುನ್
ಅಲ್ಲು ಅರ್ಜುನ್

ಚಿತ್ರರಂಗದ ತಾರೆಗಳು ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನ ಗೆಲ್ಲುವುದು ಸಾಮಾನ್ಯ. ಆದರೆ ಕೆಲವರು ತಮ್ಮ ಮಾನವೀಯತೆ, ಸಹಾಯದ ಮನೋಭಾವದಿಂದಲೂ ಜನರ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಾರೆ. ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೂಡಾ ಅಂತಹ ವ್ಯಕ್ತಿತ್ವಗಳಲ್ಲಿ ಒಬ್ಬರು. ತಮ್ಮ ಸರಳತೆ ಮತ್ತು ಉದಾರ ಮನಸ್ಸಿನಿಂದ ಈಗಾಗಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಅವರು, ಇದೀಗ ಮತ್ತೊಮ್ಮೆ ತಮ್ಮ ಮಾನವೀಯತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಅಲ್ಲು ಅರ್ಜುನ್ ಆಕೆಯ ಮುಖದಲ್ಲಿ ನಗು ಮೂಡಿಸಿದ್ದು, ಈ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ವಿಶ್ವದಾದ್ಯಂತ ಗಂಭೀರ ಹಾಗೂ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಕನಸುಗಳನ್ನು ನನಸಾಗಿಸಲು ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಮೇಕ್ ಎ ವಿಶ್ ಫೌಂಡೇಶನ್ ಗುರುತಿಸಿಕೊಂಡಿದೆ. ಜೀವನದಲ್ಲಿ ಒಂದೇ ಒಂದು ವಿಶೇಷ ಆಸೆಯನ್ನು ಹೊಂದಿರುವ ಮಕ್ಕಳ ಕನಸುಗಳನ್ನು ಸಾಕಾರಗೊಳಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಅಂತಹ ಮಕ್ಕಳಲ್ಲಿ ಶ್ರದ್ಧಾ ಎಂಬ ಬಾಲಕಿಯೂ ಒಬ್ಬಳು. ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ ತನ್ನ ನೆಚ್ಚಿನ ನಟ ಅಲ್ಲು ಅರ್ಜುನ್ ಅವರನ್ನು ಒಮ್ಮೆ ಭೇಟಿ ಮಾಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಳು. ಈ ವಿಚಾರವನ್ನು ಮೇಕ್ ಎ ವಿಶ್ ಫೌಂಡೇಶನ್ ಅಲ್ಲು ಅರ್ಜುನ್ ಅವರ ಗಮನಕ್ಕೆ ತಂದ ಕೂಡಲೇ ನಟ ಯಾವುದೇ ವಿಳಂಬ ಮಾಡದೆ ಸ್ಪಂದಿಸಿದರು.

ವಿಡಿಯೋ ಕಾಲ್‌ನಲ್ಲಿ ಶ್ರದ್ಧಾಳೊಂದಿಗೆ ಮಾತುಕತೆ ನಡೆಸಿದ ಅಲ್ಲು ಅರ್ಜುನ್, ತಮ್ಮ ಸೂಪರ್ ಹಿಟ್ ಸಿನಿಮಾ ಪುಷ್ಪ ಚಿತ್ರದ ಪ್ರಫೇಮಸ್ ಡೈಲಾಗ್ ಹೇಳಿ ಆಕೆಯನ್ನು ರಂಜಿಸಿದ್ದಾರೆ . ವಿಶೇಷವಾಗಿ ‘ಪುಷ್ಪ ಫ್ಲವರ್ ನಹೀ, ಫೈರ್ ಹೈ’ ಎಂಬ ಜನಪ್ರಿಯ ಡೈಲಾಗ್ ಅನ್ನು ತಮ್ಮದೇ ಶೈಲಿಯಲ್ಲಿ ಹೇಳಿದಾಗ ಬಾಲಕಿಯ ಮುಖದಲ್ಲಿ ಮೂಡಿದ ನಗು ಎಲ್ಲರ ಮನ ಗೆದ್ದಿದೆ.

ಆಕೆ ಶೀಘ್ರದಲ್ಲೇ ಸಂಪೂರ್ಣ ಗುಣಮುಖಳಾಗಿ ತನ್ನ ಕನಸನ್ನು ನನಸಾಗಿಸಲಿ ಎಂದು ಹಾರೈಸಿದ ಅವರು, ಭವಿಷ್ಯದಲ್ಲಿ ಹೈದರಾಬಾದ್‌ಗೆ ಬರುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಜೊತೆಗೆ ಬಾಲಕಿಯೊಂದಿಗೆ ಮಾತನಾಡಿದ ಬಳಿಕ ಅಲ್ಲು ಅರ್ಜುನ್ ಆಕೆಯ ಪೋಷಕರೊಂದಿಗೂ ಮಾತನಾಡಿದರು. ತಮ್ಮ ಮಗಳ ಚಿಕಿತ್ಸೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಪೋಷಕರಿಗೆ ಧೈರ್ಯ ತುಂಬಿದದ್ದಾರೆ.

ಸಾಮಾಜಿಕ ಸೇವೆಯ ಜೊತೆಗೆ ಅಲ್ಲು ಅರ್ಜುನ್ ವೃತ್ತಿಜೀವನದಲ್ಲೂ ಯಶಸ್ಸಿನ ಶಿಖರದಲ್ಲಿದ್ದಾರೆ. ಪುಷ್ಪ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಅವರು ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ.

ಮುಂದಿನ ದಿನಗಳಲ್ಲಿ ನಿರ್ದೇಶಕ ಅಟ್ಲೀ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಇದರ ಜೊತೆಗೆ AA23 ಹಾಗೂ ಬಹು ನಿರೀಕ್ಷಿತ ಪುಷ್ಪ 3: ದಿ ರಾಂಪೇಜ್ ಸೇರಿದಂತೆ ಹಲವು ದೊಡ್ಡ ಯೋಜನೆಗಳು ಅವರ ಕೈಯಲ್ಲಿವೆ.

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Allu Arjun: ಅಲ್ಲು ಅರ್ಜುನ್ ಪುಟ್ಟ ಅಭಿಮಾನಿಗೆ ಗಂಭೀರ ಕಾಯಿಲೆ, ಆಸ್ಪತ್ರೆ ಬೆಡ್‌ ಮೇಲೆ ಮಲಗಿದವಳ ಆಸೆ ಈಡೇರಿಸಿದ ನಟ! ಪುಷ್ಪರಾಜ್‌ ಕಾರ್ಯಕ್ಕೆ ಮೆಚ್ಚುಗೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed