Last Updated:
ಮಳೆ ಹುಡುಗಿ ಪೂಜಾ ಗಾಂಧಿ ಸಣ್ಣ ಆಗಿದ್ದಾರೆ. ಈ ಹೊಸ ಲುಕ್ ಅಲ್ಲಿ ಕಂಗೊಳಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಸಣ್ಣ ಆಗಿದ್ದಾರೆ. ಮುಂಗಾರು ಮಳೆ ಚಿತ್ರದ (Mungaru Male Movie) ಸಮಯದಲ್ಲಿ ಹೇಗಿದ್ದರೋ ಹಾಗೆ ಕಾಣಿಸುತ್ತಿದ್ದಾರೆ. ಗೌನ್ ತೊಟ್ಟು ಅಷ್ಟೆ ಚೆಂದಗೆ ಹೊಳೀತಿರೊ ವಿಡಿಯೋ ಗಮನ ಸೆಳೆಯುತ್ತಿದೆ. ಪ್ರಜಾ ವಾಣಿ ಕನ್ನಡ ಸಿನಿ ಸಮ್ಮಾನ್ ಅವಾರ್ಡ್ (Prajavani kannada cini sammana award) ಕಾರ್ಯಕ್ರಮಕ್ಕೆ ಬಂದ ಪೂಜಾ (Pooja) ಇಲ್ಲಿ ಅಷ್ಟೆ ಸಖತ್ ಆಗಿಯೇ ಮಿಂಚಿದ್ದಾರೆ. ಇವರ ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದ ಓದಿ.
ಪೂಜಾ ಕನ್ನಡ ಪ್ರೀತಿ
ಆದರೆ, ಇದೀಗ ಬೇರೆ ರೀತಿ ಕಾಣಿಸುತ್ತಿದ್ದಾರೆ. ದೇಹದ ತೂಕ ಇಳಿದು ಹೋಗಿದೆ. ಪೂಜಾ ಗಾಂಧಿ ಈಗ ಸ್ಲಿಮ್ ಆಗಿಯೇ ಕಾಣಿಸುತ್ತಿದ್ದಾರೆ.
ಪ್ರಜಾ ವಾಣಿ ಕನ್ನಡ ಸಿನಿ ಸಮ್ಮಾನ್ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಿನಿ ತಾರೆಯರೆಲ್ಲ ಆಗಮಿಸಿದ್ದಾರೆ. ಕಿಚ್ಚ ಸುದೀಪ್, ನಟಿ ತಾರಾ ಸೇರಿದಂತೆ ಇನ್ನು ಅನೇಕರು ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
ನಟಿ ಪೂಜಾ ಗಾಂಧಿ ಕೂಡ ಆಗಮಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪೂಜಾ ಗಾಂಧಿ ಚೆಂದದ ಗೌನ್ ತೊಟ್ಟು ಕಂಗೊಳಿಸಿದ್ದಾರೆ. ಕ್ಯಾಮರಾ ಕಣ್ಣುಗಳಿಗೂ ಅಷ್ಟೆ ಸುಂದರವಾಗಿಯೇ ಕಾಣಿಸಿದ್ದಾರೆ.
ಪೂಜಾ ಗಾಂಧಿ ಸ್ಲಿಮ್ ಆಗಿದ್ದಾರೆ. ಇದು ಓಕೆ ಬಿಡಿ, ಆದರೆ, ಮೊದಲಿನ ಆ ಕಾಂತಿ ಕಳೆದು ಹೋದಂತೆ ಇದೆ. ಸಡನ್ ಆಗಿ ಸಣ್ಣ ಆದರೆ ಹೇಗೆ ಕಾಣಿಸುತ್ತಾರೋ ಹಾಗೇನೆ ಪೂಜಾ ಗಾಂಧಿ ಇಲ್ಲಿ ಕಾಣಿಸುತ್ತಿದ್ದಾರೆ.
ಸ್ಲಿಮ್ ಏನೋ ಸರಿ…
ಆದರೆ, ಪೂಜಾ ಗಾಂಧಿ ಯಾಕೆ ಇಷ್ಟು ಸಣ್ಣ ಆಗಿದ್ದಾರೆ ಅನ್ನೋದು ರಿವೀಲ್ ಆಗಿಲ್ಲ. ಸಿನಿಮಾ ಏನಾದರೂ ಮಾಡ್ತಿದ್ದರಾ ಅನ್ನುವ ಪ್ರಶ್ನೆನೂ ಇದೆ. ಸಿನಿಮಾ ಮಾಡ್ಬೇಕು ಅನ್ನುವ ಕನಸು ಪೂಜಾ ಅವರಿಗೆ ಇದ್ದೇ ಇದೆ.
ಪೂಜಾ ಗಾಂಧಿ ಅವರ ಕನ್ನಡ ಪ್ರೀತಿ ಜಾಸ್ತಿನೇ ಇದೆ. ಇವರು ಕನ್ನಡ ಬರೆಯೋದನ್ನ ಕಲಿತುಕೊಂಡಿದ್ದಾರೆ. ಅಷ್ಟೆ ಚೆನ್ನಾಗಿಯೇ ಕನ್ನಡ ಮಾತನಾಡುತ್ತಾರೆ.
ಆದರೆ, ಇವರಿಗೆ ತಿಳಿದುಕೊಳ್ಳುವ ಮತ್ತು ಕಲಿಯುವ ಆಸಕ್ತಿ ಜಾಸ್ತಿ ಇದೆ. ಹಾಗಾಗಿಯೇ ಕನ್ನಡ ಭಾಷೆಯನ್ನು ಕಲಿತುಕೊಂಡಿದ್ದಾರೆ. ಪೂಜಾ ಗಾಂಧಿ ಅವರಿಗೆ ರಮೇಶ್ ಅರವಿಂದ್ ಅವರು ಒಂದು ಹೆಸರು ಕೂಡ ಇಟ್ಟಿದ್ದಾರೆ. “ಪೂಚಾ” ಗಾಂಧಿ ಅಂತಲೇ ಹೇಳ್ತಾರೆ.
ಯಾಕೆ ಗೊತ್ತಾ? ಪೂಜಾ ಗಾಂಧಿ ಅವರು ರಮೇಶ್ ಅರವಿಂದ್ ಅವರಿಗೆ ಸುಮಾರು ಪ್ರಶ್ನೆಗಳನ್ನು ಕೇಳ್ತಾ ಇದ್ದರು. ಅದಕ್ಕೇನೆ ಪೂಜಾ ಗಾಂಧಿ ಅವರಿಗೆ ಈ “ಪೂಚಾ” ಗಾಂಧಿ ಅಂತಲೇ ಹೇಳ್ತಿದ್ದರು. ಈ ಒಂದು ಮಾತನ್ನ ಸ್ವತಃ ರಮೇಶ್ ಅರವಿಂದ್ ಹೇಳಿರೋದು ಇದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













