USA-Italy: ಟ್ರಂಪ್ ಬಾಲಿಶ ಹೇಳಿಕೆಯಿಂದ ಹದಗೆಟ್ಟ ಸಂಬಂಧ! ಇಟಲಿ ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ದಿಢೀರ್ ರದ್ದು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

USA-Italy: ಟ್ರಂಪ್ ಬಾಲಿಶ ಹೇಳಿಕೆಯಿಂದ ಹದಗೆಟ್ಟ ಸಂಬಂಧ! ಇಟಲಿ ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ದಿಢೀರ್ ರದ್ದು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


G7 ಶೃಂಗಸಭೆಯ ಸಮಯದಲ್ಲಿ ನನ್ನ ಜೊತೆ ಫೋಟೋ ತೆಗೆಯಲು ಅವಕಾಶಕ್ಕಾಗಿ ಮೆಲೋನಿ ‘ಬೇಡಿಕೊಂಡಿದ್ದರು’ ಎಂದು ಡೊನಾಲ್ಡ್ ಟ್ರಂಪ್‌ ವ್ಯಂಗ್ಯವಾಗಿ ಹೇಳಿದ್ದರು. ಈ ಬಾಲಿಶ ಹೇಳಿಕೆಯನ್ನು ಕಟುವಾಗಿ ಪ್ರತಿಕ್ರಿಯೆ ನೀಡಿದ್ದ ಜಾರ್ಜಿಯಾ ಮೆಲೋನಿ, ‘ಇದೊಂದು ಸಂಪೂರ್ಣ ಕಟ್ಟುಕಥೆ ಎಂದು ತಿರಸ್ಕರಿಸಿದ್ದಲ್ಲದೇ, ನಾನು ಅಥವಾ ಇಟಲಿ ಎಂದಿಗೂ ಯಾರ ಮುಂದೆಯೂ ಬೇಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಸಂಸ್ಥೆಯ ಪ್ರಕಾರ, ಇಟಾಲಿಯನ್ ಸರ್ಕಾರ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಗಂಭೀರ ಮತ್ತು ಅವಮಾನಕರ ಎಂದು ಕರೆದಿದೆ. ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಈ ಹೇಳಿಕೆಗಳು ಮೆಲೋನಿಗೆ ಮಾತ್ರವಲ್ಲ, ಇಡೀ ಇಟಲಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಭಟನಾ ರೂಪವಾಗಿ, ಆಂಟೋನಿಯೊ ತಜಾನಿ ಅವರು ತಮ್ಮ ವಾರಾಂತ್ಯದ ಯುಎಸ್ ಭೇಟಿಯನ್ನು ರದ್ದುಗೊಳಿಸಿದರು.

ಈತನ್ಮಧ್ಯೆ, ಇಟಾಲಿಯನ್ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ಕೂಡ ಟ್ರಂಪ್ ಅವರ ಹೇಳಿಕೆಯನ್ನು ಟೀಕಿಸಿದರು, ಮೆಲೋನಿ ಎಂದಿಗೂ ಫೋಟೋಗಳನ್ನು ವಿನಂತಿಸುವ ರೀತಿಯ ನಾಯಕಿಯಲ್ಲ ಎಂದು ಹೇಳಿದರು.

ಟಿವಿ ಸಂದರ್ಶನದಿಂದ ವಿವಾದ ಆರಂಭ

ಟ್ರಂಪ್ ಅವರೊಂದಿಗಿನ ದೂರದರ್ಶನ ಸಂದರ್ಶನದ ನಂತರ ಇಡೀ ವಿವಾದ ಬೆಳಕಿಗೆ ಬಂದಿದೆ. ಸಂದರ್ಶನದ ಸಮಯದಲ್ಲಿ, ಉಕ್ರೇನ್ ಬಗ್ಗೆ ಪ್ರಶ್ನೆಗೆ ಉತ್ತರಿಸುವಾಗ, ಡೊನಾಲ್ಡ್ ಟ್ರಂಪ್ ಇತ್ತೀಚಿನ G7 ಶೃಂಗಸಭೆಯನ್ನು ಉಲ್ಲೇಖಿಸಿದರು. ಆಗ ಮೆಲೋನಿ ತಮ್ಮೊಂದಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಬಯಸಿದ್ದರು. ನನ್ನ ಜೊತೆ ಫೋಟೋಗಾಗಿ ಬೇಡಿಕೊಂಡಿದ್ದರು ಎಂದು ಹೇಳಿಕೊಂಡರು.

ಇಟಾಲಿಯನ್ ಟಿವಿ ಚಾನೆಲ್ La7 ಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್, ಶೃಂಗಸಭೆಯ ಸಮಯದಲ್ಲಿ ಮೆಲೋನಿಗೆ ನನ್ನ ಜೊತೆ ಮಾತನಾಡಿದ್ದಕ್ಕೆ ಬಹುಶಃ ಸಂತೋಷವಾಗಿರಬಹುದು. ನನಗೇನು ಅವಳ ಜೊತೆ ಮಾತನಾಡುವ ಆಸಕ್ತಿ ಇರಲಿಲ್ಲ. ಅವಳಿಗೆ ನನ್ನ ಜೊತೆ ಮಾತನಾಡಿರುವುದಕ್ಕೆ ಬಹುಶಃ ಖುಷಿ ಆಗಿರಬಹುದು’ ಎಂದು ಹೇಳಿದ್ದರು.

ಟ್ರಂಪ್ ಹೇಳಿಕೆಯನ್ನು ವಿರೋಧಿಸಿ ಜಾರ್ಜಿಯಾ ಮೆಲೋನಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಟ್ರಂಪ್ ಅವರ ಆರೋಪಗಳು ಸಂಪೂರ್ಣವಾಗಿ ಕಟ್ಟುಕಥೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರು ತಮ್ಮ ಮಿತ್ರರಾಷ್ಟ್ರಗಳ ನಾಯಕರ ಬಗ್ಗೆ ಏಕೆ ಇಂತಹ ಮಾತುಗಳನ್ನು ಹೇಳುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಇಟಲಿ ಮತ್ತು ನಾನು ಯಾರನ್ನೂ ಬೇಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ಉಕ್ರೇನ್, ಇರಾನ್, ಗಾಜಾ ಸಂಘರ್ಷ ಮತ್ತು ಯುಎಸ್ ಸುಂಕ ನೀತಿಗಳಂತಹ ವಿಷಯಗಳಲ್ಲಿ ಇಟಲಿ ಮತ್ತು ಯುನೈಟೆಡ್ ಸ್ಟೇಟ್ಸ್ ಭಿನ್ನಾಭಿಪ್ರಾಯ ಹೊಂದಿವೆ. ಇತ್ತೀಚಿನ ವಿವಾದವು ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ನಡೆಯುತ್ತಿರುವ ಒತ್ತಡವನ್ನು ಮತ್ತೊಮ್ಮೆ ಚರ್ಚೆಯ ಮುಂಚೂಣಿಗೆ ತಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed