Pavitra Gowda: ದರ್ಶನ್ ಆಯ್ತು, ಈಗ ಪವಿತ್ರಾಗೌಡಗೆ ಸಿಗ್ತಿದ್ಯಾ ರಾಜಾತಿಥ್ಯ? ಗಂಭೀರ ಆರೋಪ ಮಾಡಿದ ಮಹಿಳೆ ಮೇಲೇ ಕೇಸ್! | | ACTPnews

ಪವಿತ್ರಾಗೌಡ


Last Updated:

ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ಪವಿತ್ರಾ ಗೌಡಗೆ ಮನೆಯೂಟವೂ ಬರುತ್ತೆ, ತುಂಬಾ ಐಷಾರಾಮಿಯಾಗಿ ಜೈಲಲ್ಲಿ ಪವಿತ್ರಾ ಗೌಡ ಇದ್ದಾರೆ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪವಿತ್ರಾಗೌಡ
ಪವಿತ್ರಾಗೌಡ

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ‌ (Renukaswamy Murder Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿದೆ. ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ (Sandhya Pavitra Nagaraj) ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಕಾಲು ಒತ್ತುತ್ತಾರೆ, ಪವಿತ್ರಾಗೌಡಗೆ ಮನೆಯೂಟವೂ ಬರುತ್ತೆ, ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂದು ಆರೋಪ ಮಾಡಿದ್ದು, ಈ ಹಿನ್ನೆಲೆ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡಗೆ ಸಿಗ್ತಿದ್ಯಾ ರಾಜಾತಿಥ್ಯ?

ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರ ನಾಗರಾಜ್, ಖಾಸಗಿ ಮಾಧ್ಯಮದಲ್ಲಿ ರಾಜಾತಿಥ್ಯದ ಬಗ್ಗೆ ಹೇಳಿಕೆ ನೀಡಿದ್ದರು. ತುಂಬಾ ಐಷಾರಾಮಿಯಾಗಿ ಜೈಲಲ್ಲಿ ಪವಿತ್ರಾಗೌಡ ಇದ್ದಾರೆ. ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಜೈಲು ಅನ್ನೋಕ್ಕಿಂತ ಮನೆಯಲ್ಲಿರೋ ರೀತಿ ಪವಿತ್ರಾ ಗೌಡ ಇದ್ದಾರೆ, ದರ್ಶನ್​ಗೆ ಯಾವುದೇ ಸೌಲಭ್ಯಗಳು ಸಿಕ್ತಿಲ್ಲ, ಪವಿತ್ರಾಗೌಡಗೆ ಅಲ್ಲಿರೋ ಭದ್ರತಾ ಸಿಬ್ಬಂದಿಯೇ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ಹೇಳಿದ್ದರು.
ಸಂಧ್ಯಾ ವಿರುದ್ದ ದಾಖಲಾಯ್ತು ಕೇಸ್​

ಸಂಧ್ಯಾ ಪವಿತ್ರಾ ನಾಗರಾಜ್​ ಹೇಳಿಕೆ ಹಿನ್ನೆಲೆ ಜೈಲಧಿಕಾರಿಗಳಿಗೆ ಭದ್ರತಾ ಸಿಬ್ಬಂದಿ ರಶ್ಮೀ ದೂರು ನೀಡಿದ್ದಾರೆ. ಸಿಬ್ಬಂದಿ ರಶ್ಮೀ ದೂರ ಆಧರಿಸಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಜೈಲಧಿಕಾರಿಗಳು ದೂರು ನೀಡಿದ್ದು, ದೂರು ಆಧರಿಸಿ ಸಂಧ್ಯಾ ವಿರುದ್ದ ಎನ್​​ಸಿಆರ್ ದಾಖಲಾಗಿದೆ. ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದು, ಕೋರ್ಟ್ ಅನುಮತಿ ನೀಡಿದ್ರೆ ಪೊಲೀಸರು ಎಫ್​ಐಆರ್ ದಾಖಲಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.
‘ನಾನು ಸತ್ಯವನ್ನ ಹೇಳಿರೋದು‘

ಇನ್ನು ಈ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್ ನ್ಯೂಸ್ 18 ಜೊತೆ ಮಾತನಾಡಿದ್ದು, ಪವಿತ್ರಾ ಗೌಡಗೆ ರಾಜಾತಿಥ್ಯ ಸಿಗ್ತಾ ಇದೆ ಎನ್ನುವ ನನ್ನ ಆರೋಪಕ್ಕೆ ಈಗಲೂ ಬದ್ಧ ಎಂದು ಹೇಳಿದ್ದಾರೆ. ನನ್ನ ಮೇಲೆ NCR ದಾಖಲು ಮಾಡಿದ್ದಾರೆ, ನಾನು ಪ್ರಕರಣ ಎದುರಿಸುತ್ತೇನೆ, ನಾನು ಸತ್ಯವನ್ನ ಹೇಳಿರೋದು, ಮೂರು ತಿಂಗಳು ನಾನು ಜೈಲಲ್ಲಿದ್ದಾಗ ನಡೆದಿರೋದನ್ನ ಹೇಳಿದ್ದೇನೆ. ಅಧಿಕಾರಿಗಳ ಗಮನಕ್ಕಿದ್ದೇ ಪವಿತ್ರಾ ಗೌಡಗೆ ರಾಜಾಥಿತ್ಯ ಸಿಗ್ತಾ ಇತ್ತು, ನನಗೆ ಪೊಲೀಸ್ ಠಾಣೆಯಿಂದ ಇದುವರೆಗೂ ಕರೆ ಬಂದಿಲ್ಲ, ಪೊಲೀಸರು ಕರೆ ಮಾಡಿದ್ರೆ ನಾನು ಎಲ್ಲಾ ಮಾಹಿತಿ ಕೊಡ್ತೇನೆ ಎಂದು ಹೇಳಿದರು.

ಆರೋಪಿಗಳಿಗೆ ಸಿಗದ ಸೌಲಭ್ಯ ಪವಿತ್ರಾ ಗೌಡಗೆ ಸಿಕ್ತಿದೆ

ಮುಂದುವರೆದು ಮಾತನಾಡಿದ ಅವರು, ಜೈಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದ್ರೆ ಎಲ್ಲವೂ ಗೊತ್ತಾಗಲಿದೆ, ಜೈಲಿನಲ್ಲಿ ಕ್ಯಾಮೆರಾ ಇರೋದೆ ಹೌದಾದ್ರೆ ಪರಿಶೀಲನೆ ಮಾಡಲಿ, ಈಗಲೂ‌ ನಾನು ಆರೋಪವನ್ನ ಮಾಡ್ತೇನೆ, ಬೇರೆ ಆರೋಪಿಗಳಿಗೆ ಸಿಗದ ಸೌಲಭ್ಯ ಪವಿತ್ರಾಗೌಡಗೆ ಸಿಕ್ತಿದೆ ಎಂದು ಮತ್ತೆ ಆರೋಪ ಮಾಡಿದ್ದಾರೆ.

(ವರದಿ: ಕಾರ್ತಿಕ್​ ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed