ಸರಳ ಪದಗಳ ಚೆಂದದ ಸಾಹಿತ್ಯ
ನಾಯಕಿ ಕುಸುಮ ಮೇಲೇನೆ ಇಲ್ಲೊಂದು ಹಾಡು ಇದೆ. “ಏನೇ ಹೇಳು ಕುಸುಮ” ಅಂತ ಇದು ಸಾಗುತ್ತದೆ. ಪ್ರಮೋದ್ ಮರವಂತೆ ಬರೆದಿರೋ ಈ ಹಾಡನ್ನ ನಿಹಾಲ್ ತಾವ್ರೋ ಮತ್ತು ಶಶಿ ಕಲ್ಲೂರ್ ಹಾಡಿದ್ದಾರೆ.
ಗ್ರಾಮಾಯಾಣ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಎಲ್ಲ ಹಾಡುಗಳು ವಿಶೇಷವಾಗಿಯೇ ಇವೆ. ಪ್ರತಿ ಹಾಡಿನಲ್ಲೂ ಹೊಸತನ ಇದೆ.
ಸಂಗೀತ ಮತ್ತು ಸಾಹಿತ್ಯ ಎರಡೂ ಈ ಹಾಡಿನಲ್ಲಿ ತುಂಬಾನೆ ಚೆನ್ನಾಗಿ ಹೊಂದಿಕೊಂಡಿವೆ. ಸರಳ ಪದಗಳು ಇಲ್ಲಿ ಶ್ರೀಮಂತವಾಗಿಯೇ ಕೇಳಿಸುತ್ತವೆ.
ಸಂಗೀತದಲ್ಲಿ ಆ ಶಕ್ತಿ ಇದೆ. ಹಳ್ಳಿಯ ಹುಡುಗ ಮತ್ತು ಹುಡುಗಿ ಪ್ರೀತಿಯಲ್ಲಿ ಬಿದ್ದರೆ, ಅವರ ಪ್ರೀತಿ ಹೇಗಿರುತ್ತದೆ ಅನ್ನೊದು ಇಲ್ಲಿ ಹೆಚ್ಚು ಇಂಟ್ರಸ್ಟಿಂಗ್ ಅನಿಸುತ್ತದೆ.
ಹಾಡಿನ ಸಾಲುಗಳು…
ಏನೇ ಹೇಳು ಕುಸುಮ…
ಕುಂತರು ನಿಂತರು ನೀನೆ ಕಣೆ..
ಮುದ್ದೆ ಮುರಿದ ಹಂಗೆ
ಈ ಒಂದಷ್ಟು ಸಾಲುಗಳಲ್ಲಿಯೇ ಸುಮಾರು ವಿಚಾರಗಳಿವೆ. ನಾಯಕಿಯ ಹೆಸರು ಇಲ್ಲಿದೆ. ಕುಸುಮ ಮೇಲೆ ನಾಯಕನ ಪ್ರೀತಿ ಅದೆಷ್ಟು ಇದೆ ಅನ್ನೋದು ತಿಳಿಯುತ್ತದೆ.
ಇದರ ಜೊತೆಗೆ ಗ್ರಾಮೀಣ ಭಾಗದ ಮುದ್ದೆ ವಿಚಾರ ಮತ್ತು ಹೋಲಿಕೆನೂ ಇಲ್ಲಿದೆ. “ಮುದ್ದಿಸಿ ತಿಂದೆ ಈ ಜೀವವನೆ” ಅನ್ನೋದು ಪ್ರೀತಿಸುವ ಕುಸುಮಳ ಪ್ರೀತಿಯ ಕಾಟ ಇನ್ನೆಷ್ಟು ಅನ್ನೊದು ಹೇಳುತ್ತದೆ.
ವಿನಯ್-ಮೇಘಾ ಪ್ರೀತಿ ತುಂಬಿದ ಹಾಡು ರಿಲೀಸ್
ಗ್ರಾಮಾಯಾಣ ಚಿತ್ರದ ಈ ಕುಸುಮ ಹಾಡಿನ ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿದೆ. ಇದರಲ್ಲಿ ಬಳಕೆ ಮಾಡಿರೋ ಫೋಟೋಗಳು ಅಷ್ಟೆ ಚೆಂದ ಇವೆ.
ಈ ಚಿತ್ರದ ಹಾಡುಗಳು ವಿಶೇಷವಾಗಿವೆ. ಲಿರಿಕಲ್ ವ್ಯಾಲ್ಯೂ ಮತ್ತು ಮ್ಯೂಸಿಕಲ್ ವ್ಯಾಲ್ಯೂ ಇರೋ ಗೀತೆಗಳೆ ಆಗಿವೆ. ಗ್ರಾಮೀಣ ಸೊಗಡಗಿನ ಈ ಚಿತ್ರ ನಿಂತು ಹೋಗಿತ್ತು. ಆದರೆ, ಮತ್ತೆ ಶುರು ಆಗಿ ಈಗ ರಿಲೀಸ್ ಹಂತಕ್ಕೆ ಬಂದಿದೆ.
ದೇವನೂರುಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಇದರಲ್ಲಿ ಒಂದು ಒಳ್ಳೆ ಕತೆ ಹೇಳಿದ್ದಾರೆ ಅನ್ನುವ ಮಾತು ಇವೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.












